Asianet Suvarna News Asianet Suvarna News

ಕ್ವಾರೆಂಟೈನ್‌ನಲ್ಲಿರುವ ಪೊಲೀಸರಿಗೆ ಯೋಗ ಟೀಚರ್ ಆದ IPS ಅಲೋಕ್ ಕುಮಾರ್

ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆಯಿಂದ ಧೈರ್ಯಗುಂದಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಐಪಿಎಸ್ ಅಲೋಕ್ ಕುಮಾರ್ ಧೈರ್ಯ ತುಂಬಿದ್ದಾರೆ. ಕ್ವಾರೆಂಟೈನ್‌ನಲ್ಲಿರುವ ಸಿಬ್ಬಂದಿಯನ್ನು ಭೇಟಿಯಾಗಿ ಯೋಗವನ್ನೂ ಕಲಿಸಿ, ಆತ್ಮಸ್ಥೈರ್ಯ ತುಂಬಿದ್ದಾರೆ.

IPS Alok Kumar encourages quarantined police and teach them Yoga
Author
Bangalore, First Published Jun 24, 2020, 12:28 PM IST | Last Updated Jun 24, 2020, 12:47 PM IST

ಬೆಂಗಳೂರು(ಜೂ.24): ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆಯಿಂದ ಧೈರ್ಯಗುಂದಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಐಪಿಎಸ್ ಅಲೋಕ್ ಕುಮಾರ್ ಧೈರ್ಯ ತುಂಬಿದ್ದಾರೆ. ಕ್ವಾರೆಂಟೈನ್‌ನಲ್ಲಿರುವ ಸಿಬ್ಬಂದಿಯನ್ನು ಭೇಟಿಯಾಗಿ ಯೋಗವನ್ನೂ ಕಲಿಸಿ, ಆತ್ಮಸ್ಥೈರ್ಯ ತುಂಬಿದ್ದಾರೆ.

ಕೊರೋನಾ ಮಹಾಸಮರದಲ್ಲಿ ಎದೆಗುಂದಿದ ವಾರಿಯರ್ಸ್ ಗೆ ಧೈರ್ಯ ತುಂಬಿದ ಐಪಿಎಸ್ ಅಲೋಕ್ ಕುಮಾರ್ ಯೋಗವನ್ನೂ ಹೇಳಿಕೊಟ್ಟಿದ್ದಾರೆ. ಹೆಡ್‌ಕಾನ್ಸ್ಟೇಬಲ ಆತ್ಮಹತ್ಯೆಯಿಂದ ಭಯಭೀತರಾಗಿರುವ ಕೆಎಸ್‌ಆರ್‌ಪಿ ಪಡೆ ಪೊಲೀಸರಿಗೆ ಅಲೋಕ್ ಕುಮಾರ್ ಧೈರ್ಯ ತುಂಬಿದ್ದಾರೆ.

ನಮ್ಮ ಮೆಟ್ರೋ ಸಂಚಾರ ಪುನರಾರಂಭ ಬಗ್ಗೆ ನಾಳೆ ಮಹತ್ವದ ನಿರ್ಧಾರ..!

ಕೊರೋನಾದಿಂದ ಚಿಂತಾಕ್ರಾಂತರಾಗಿರುವ KSRP ಪೊಲೀಸರು ಕ್ವಾರೆಂಟೈನಲ್ಲಿದ್ದಾರೆ. ಕ್ವಾರೆಂಟೈನ್ಡ್‌ ಪೊಲೀಸರಿಗೆ ಯೋಗ ಟೀಚರ್ ಆದ ಖಡಕ್ ಅಧಿಕಾರಿ ಕೊರೊನಾ ಬಂದರೆ ಧೈರ್ಯವಾಗಿ ಎದುರಿಸುವಂತೆ ಪಾಠ ಹೇಳಿದ್ದಾರೆ.

ಮಾನಸಿಕವಾಗಿ ಕುಗ್ಗಬೇಡಿ, ರೋಗ ಲಕ್ಷಣಗಳು ಕಾಣಿಸಿದರೆ ಕಡೆಗಣನೆ ಕೂಡ ಮಾಡಬೇಡಿ. ಬಿಡುವಿನ ಸಮಯದಲ್ಲಿ ವಾಕಿಂಗ್, ಯೋಗ, ಪ್ರಾಣಾಯಾಮ ಮಾಡಿ ಎಂದು ಸೂಚನೆ ನೀಡಿದ ಎಡಿಜಿಪಿ ಪ್ರಾಣಾಯಾಮ ಹೇಗೆ ಮಾಡಬೇಕು ಎಂದು ಖುದ್ದಾಗಿ ತೋರಿಸಿದ್ದಾರೆ.

ಕೊರೋನಾ ಸಮರ: ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಗೌರವಿಸಿದ ವಿಶ್ವಸಂಸ್ಥೆ!

ನೂರಾರು ಕ್ವಾರೆಂಟೈನ್ ಸಿಬ್ಬಂದಿಗೆ ಯುನಿಫಾರ್ಮ್ ನಲ್ಲೇ ಯೋಗಾಭ್ಯಾಸ ಕಲಿಸಿದ ಅಲೋಕ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ ಟೇಬಲ್ ಮನೆಗೆ ಕೂಡ ಭೇಟಿ ಕೊಟ್ಟಿದ್ದಾರೆ. ಮೃತ ಹೆಡ್ ಕಾನ್ಸ್ ಟೇಬಲ್ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Latest Videos
Follow Us:
Download App:
  • android
  • ios