ಪ್ರತಿ ಹಳ್ಳಿಗೂ ಇಂಟರ್‌ನೆಟ್‌ ನನ್ನ ಗುರಿ: ಕೇಂದ್ರ ಸಚಿವ ಆರ್‌ಸಿ

* 5000 ಹಳ್ಳಿಗಳಿಗೆ ಕೇಬಲ್‌ ಅಳವಡಿಕೆ ಪ್ರಗತಿಯಲ್ಲಿ
* ಪ್ರಧಾನಿ ಮೋದಿ ಕನಸನ್ನು ನನಸಾಗಿಸುವೆ
* ರಾಜ್ಯದಲ್ಲಿ ನೆಟ್‌ವರ್ಕ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮ 
 

Internet for every village Says Union Minister Rajeev Chandrasekhar grg

ಬೆಂಗಳೂರು(ಆ.20):  ಪ್ರತಿ ಹಳ್ಳಿಗೂ ಇಂಟರ್‌ನೆಟ್‌ ತಲುಪುವಂತೆ ಮಾಡುವುದು ನನ್ನ ಮುಂದಿನ ಗುರಿ. ತನ್ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಘೋಷಿಸಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೆಟ್‌ವರ್ಕ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಗ್ರಾಮೀಣ ಭಾಗದಲ್ಲಿ ಆಪ್ಟಿಕಲ್‌ ಫೈಬರ್‌ ಮೂಲಕ ಇಂಟರ್‌ನೆಟ್‌ ತಲುಪಿಸುವ ಗುರಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಈಗಾಗಲೇ ಐದು ಸಾವಿರ ಗ್ರಾಮಗಳಿಗೆ ಕೇಬಲ್‌ ಅಳವಡಿಸುವ ಕೆಲಸ ನಡೆಯುತ್ತಿದೆ. ದೇಶದ ಪ್ರತಿ ಜಿಲ್ಲೆಯ ಗ್ರಾಮಗಳಲ್ಲಿ ಸಂಪೂರ್ಣ ಇಂಟರ್‌ನೆಟ್‌ ಸಂಪರ್ಕ ನೀಡುವ ಯೋಜನೆ ರೂಪಿಸಲಾಗುತ್ತಿದೆ. ಪ್ರಧಾನಿಗಳ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ಮುಂದಾದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ವರ್ಚುವಲ್‌ ಐಟಿ ಪಾರ್ಕ್‌ಗೆ ಗಮನ: 

ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್‌ ಸೌಲಭ್ಯ ವಿಸ್ತರಣೆಗೆ ಆದ್ಯತೆ ನೀಡುವುದರ ಜತೆಗೆ ಸಣ್ಣ ನಗರಗಳಲ್ಲಿಯೂ ವರ್ಚುವಲ್‌ ಐಟಿ ಪಾರ್ಕ್ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ. ಎರಡನೇ ಹಂತದ ಪ್ರದೇಶದಲ್ಲಿ ಐಟಿ ಪಾರ್ಕ್ಗೆ ಆದ್ಯತೆ ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಇಸ್ಫೋಸಿಸ್‌ಗೆ 50 ಎಕರೆ ಭೂಮಿ ನೀಡಲಾಯಿತು. ಅವರು ಕಟ್ಟಡ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸಿದ್ದಾರೆ. ಆದರೆ, ಕಂಪನಿಗಳೇ ಐಟಿ ಪಾರ್ಕ್ ಕಟ್ಟಡಕ್ಕೆ ಬರುತ್ತಿಲ್ಲ. ಕೋವಿಡ್‌ ಅಲೆಯ ಕಾರಣದಿಂದ ವರ್ಕ್ ಫ್ರಂ ಹೋಂ ಹೆಚ್ಚಾಗಿದೆ. ಹೀಗಾಗಿ ವರ್ಚುವಲ್‌ ಐಟಿ ಪಾರ್ಕ್ ಆರಂಭಿಸುವ ಕುರಿತು ಗಮನ ಹರಿಸಲಿದ್ದೇವೆ ಎಂದರು.

ಡಿಜಿಟಲೈಸೇಷನ್‌ ದೇಶದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಗುತ್ತಿದೆ. ಕೋವಿಡ್‌ ಸಂಕಷ್ಟದ ವೇಳೆಯಲ್ಲಿ ಡಿಜಿಟಲೈಸೇಶನ್‌ ಅತ್ಯಂತ ಉಪಯುಕ್ತವಾಗಿದೆ. ಕೋವಿಡ್‌ ಬಳಿಕ ಎಲ್ಲಾ ಕಾರ್ಯಗಳು ಡಿಜಿಟಲ್‌ ಕೇಂದ್ರೀಕೃತವಾಗಿ ನಡೆಯುತ್ತಿವೆ. ಇದು ಕೇವಲ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಶಿಕ್ಷಣ, ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳು ಸಹ ಡಿಜಿಟಲ್‌ ಮೂಲಕವೇ ನಡೆಯುತ್ತಿದೆ. ಸಾಮಾನ್ಯ ಜನರನ್ನು ತಲುಪುವ ಹಂತಕ್ಕೂ ಅದು ಬೆಳೆದು ನಿಂತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸಹ ಇದಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios