Asianet Suvarna News Asianet Suvarna News

ಶಿವಮೊಗ್ಗದಲ್ಲಿ ವಿಶ್ವದ ಎತ್ತರದ ಸುಬ್ರಹ್ಮಣ್ಯ ಮೂರ್ತಿ ಸ್ಥಾಪನೆ: 151 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ

ನಗರದ ಗುಡ್ಡೇಕಲ್‌ ದೇವಸ್ಥಾನ ಆವರಣದಲ್ಲಿ ಜಗತ್ತಿನ ಅತಿ ಎತ್ತರದ 151 ಅಡಿಗಳ ಶ್ರೀ ಬಾಲಸುಬ್ರಹ್ಮಣ್ಯ ಮೂರ್ತಿ ಪ್ರತಿಷ್ಠಾಪನೆಗೆ ಭಾನುವಾರ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ ಶಿಲಾನ್ಯಾಸ ನೆರವೇರಿಸಿದರು.

Installation of worlds tallest Subramanya Statue in Shivamogga gvd
Author
First Published Jul 10, 2023, 7:50 AM IST | Last Updated Jul 10, 2023, 8:49 AM IST

ಶಿವಮೊಗ್ಗ (ಜು.10): ನಗರದ ಗುಡ್ಡೇಕಲ್‌ ದೇವಸ್ಥಾನ ಆವರಣದಲ್ಲಿ ಜಗತ್ತಿನ ಅತಿ ಎತ್ತರದ 151 ಅಡಿಗಳ ಶ್ರೀ ಬಾಲಸುಬ್ರಹ್ಮಣ್ಯ ಮೂರ್ತಿ ಪ್ರತಿಷ್ಠಾಪನೆಗೆ ಭಾನುವಾರ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ ಶಿಲಾನ್ಯಾಸ ನೆರವೇರಿಸಿದರು. ಪಾಲಿಕೆ ಮೇಯರ್‌ ಶಿವಕುಮಾರ್‌, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ, ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಡಿ.ರಾಜಶೇಖರ್‌, ಪ್ರಮುಖರಾದ ಎನ್‌.ರಮೇಶ್‌ ಸೇರಿ ಹಲವರು ಇದ್ದರು.

ಗುಡ್ಡೇಕಲ್‌ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಡಿ.ರಾಜಶೇಖರ್‌ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಮಲೇಷಿಯಾ ದೇಶದ ಬಟು ಗುಹೆಗಳ ಬಳಿ ಇರುವ ಮುರುಗನ್‌ ಪ್ರತಿಮೆ 140 ಅಡಿ ಎತ್ತರದ್ದು. ಈಚೆಗೆ ತಮಿಳುನಾಡಿನ ಸೇಲಂನಲ್ಲಿ 146 ಅಡಿ ಎತ್ತರದ ಮುರುಗನ್‌ ಪ್ರತಿಮೆ ನಿರ್ಮಿಸಲಾಗಿದೆ. ಇದು ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿದೆ. ಈಗ ಶಿವಮೊಗ್ಗದಲ್ಲಿ ನಿರ್ಮಿಸುತ್ತಿರುವುದು ಜಗತ್ತಿನ ಅತೀ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ತಿಳಿಸಿದರು.

ಭಾರಿ ಮಳೆಗೆ ಉತ್ತರ ಭಾರತದ 9 ರಾಜ್ಯ ತತ್ತರ: ಜನಜೀವನ ಅಸ್ತವ್ಯಸ್ತ

ನಿರ್ಮಾಣ ಹೇಗಿ​ರ​ಲಿ​ದೆ​?: ಬೃಹತ್‌ ಗಾತ್ರದ ಬಂಡೆ ಮೇಲೆ ಈ ಪ್ರತಿಮೆ ನಿರ್ಮಿಸಲಾಗುತ್ತಿದೆ. ಬಂಡೆ ಮೇಲೆ ಕಾಂಕ್ರಿಟ್‌ ಬೆಡ್‌ ನಿರ್ಮಿಸಿ, ಅದರ ಮೇಲೆ ಪ್ರತಿಮೆ ಸ್ಥಾಪಿಸಲಾಗುತ್ತದೆ. ಬಾಲಸುಬ್ರಹ್ಮಣ್ಯಸ್ವಾಮಿ ಮೂರ್ತಿ ಜತೆಗೆ ಅವರ ವಾಹನ ನವಿಲಿನ ಪ್ರತಿಮೆಯೂ ಇರಲಿದೆ ಎಂದು ಹೇಳಿದರು. ಮಲೇಷಿಯಾ ಮತ್ತು ಸೇಲಂನಲ್ಲಿ ಬೃಹತ್‌ ಮುರುಗನ್‌ ಪ್ರತಿಮೆ ನಿರ್ಮಿಸಿದ ಶಿಲ್ಪಿ ತ್ಯಾಗರಾಜನ್‌ ಅವರೇ ಶಿವಮೊಗದಲ್ಲೂ ಈ ಪ್ರತಿಮೆ ನಿರ್ಮಿಸಲಿದ್ದಾರೆ. ಅವರು ಶಿವಮೊಗ್ಗದಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಶೀಘ್ರ ಶುರು ಮಾಡಲಿದ್ದಾರೆ. ರಸ್ತೆಮಟ್ಟದಿಂದ ಸುಮಾರು 100 ಅಡಿ ಎತ್ತರದವರೆಗೆ ಬೃಹತ್‌ ಬಂಡೆ ಇದೆ. 

ಅಮರನಾಥಕ್ಕೆ ತೆರಳಿದ್ದ ರಾಜ್ಯ ಯಾತ್ರಿಕರು ಸೇಫ್‌: ಯಾತ್ರೆಗೆ ತೆರಳಿದ್ದು 80 ಅಲ್ಲ, 300 ಕನ್ನಡಿಗರು

ಅದರ ಮೇಲೆ 151 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಹಾಗಾಗಿ, ಶಿವಮೊಗ್ಗದ ಎಲ್ಲ ದಿ​ಕ್ಕು​ಗ​ಳಿಂದಲೂ ಪ್ರತಿಮೆ ಕಾಣಿಸಲಿದೆ. ಅಲ್ಲದೆ ದೇಶ-ವಿದೇಶಗಳ ಪ್ರವಾಸಿಗರನ್ನು ​ಕ್ಷೇ​ತ್ರ​ದತ್ತ ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು. ಈ ಪ್ರತಿಮೆ ನಿರ್ಮಾಣಕ್ಕೆ .5 ಕೋಟಿ ವೆಚ್ಚವಾಗಲಿದೆ. ಕಬ್ಬಿಣ, ಸಿಮೆಂಟ್‌, ಮರಳು ಬಳಸಿ ಪ್ರತಿಮೆ ನಿರ್ಮಿಸಲಾಗುತ್ತದೆ. ಹೊರ ರಾಜ್ಯದಿಂದ ವಿಶೇಷವಾಗಿ ಬಣ್ಣ ತರಿಸಿ, ಪ್ರತಿಮೆಗೆ ಲೇಪಿಸಲಾಗುತ್ತದೆ. ಒಟ್ಟು 12 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇನ್ನೆರಡು ವರ್ಷಗಳಲ್ಲಿ ಸುಬ್ರ​ಹ್ಮ​ಣ್ಯ​ಸ್ವಾ​ಮಿ ಬೃಹತ್‌ ಪ್ರತಿಮೆ ಸ್ಥಾಪನೆ ಆಗಲಿದೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios