ಮೈಸೂರು : ಇನ್ಫೋಸಿಸ್ ಫೌಂಡೇಶನ್  ಮುಖ್ಯಸ್ಥೆ ಸುಧಾಮೂರ್ತಿ ಸರಳತೆ ಇದೀಗ ಮತ್ತೊಂದು ಬೆಸ್ಟ್ ಉದಾಹರಣೆ  ಇಲ್ಲಿದೆ. 

ಸರಳ ಸಜ್ಜನಿಕೆಯ ಸುಧಾ ಮೂರ್ತಿ ಮೈಸೂರಿನ ತಮ್ಮ ಇನ್ಫೋಸಿಸ್ ಸಂಸ್ಥೆ ಬಳಿ ಇರುವ ಜಮೀನಿನಲ್ಲಿ  ರಾಗಿಯ ರಾಶಿಗೆ ಪೂಜೆ ಸಲ್ಲಿಸಿದ್ದಾರೆ. 

ರೈತ ಮಹಿಳೆಯಂತೆ ಫಸಲಿಗೆ ಪೂಜೆ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ. 

ನಮ್ಮ ಮದುವೆಗೆ ಖರ್ಚಾಗಿದ್ದು 800 ರು. ಮಾತ್ರ

ಬೆಳೆ ಬೆಳೆದು ಕೈ ಬರುವ ಸುಗ್ಗಿ ಕಾಲದಲ್ಲಿ ರೈತರು ಮಾಡುವ ಪೂಜೆಯಲ್ಲಿ ಪಾಲ್ಗೊಂಡ ಸುಧಾಮೂರ್ತಿ ರಾಗಿ ಫಸಲಿನ ರಾಶಿ ಪೂಜಿಸಿದರು. 

ಸಾಮಾನ್ಯ ರೈತ ಮಹಿಳೆಯಂತೆ ಪೂಜೆ ಸಲ್ಲಿಸಿದ್ದ ಸುಧಾಮೂರ್ತಿ ಅವರ ಫೊಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.