Asianet Suvarna News Asianet Suvarna News

ಹಾಸನ ಪೆನ್ ಡ್ರೈವ್ ವೈರಲ್‌ ಹಿಂದೆ ಬಿಜೆಪಿ ಪ್ರಭಾವಿ ನಾಯಕನ ಕೈವಾಡ: ಮಂಡ್ಯ ಶಾಸಕ

ಹಾಸನ ಪೆನ್ ಡ್ರೈವ್ ಬಿಡುಗಡೆ  ಹಿಂದೆ ರಾಜ್ಯ ಬಿಜೆಪಿ ಪ್ರಭಾವಿ ನಾಯಕನ ಕೈವಾಡವಿದೆ. ಮಂಡ್ಯ ಕೈ ಶಾಸಕ ಗಣಿಗ ರವಿಕುಮಾರ್ ಸ್ಪೋಟ ಮಾಹಿತಿ ಬಿಚ್ಚಿಟ್ಟಿದ್ದಾರೆ.

Influential Karnataka BJP leader behind Hassan obscene video case allegation by Mandya MLA Ravikumar gowda gow
Author
First Published May 7, 2024, 4:00 PM IST

ಮಂಡ್ಯ (ಮೇ.7): ಹಾಸನ ಪೆನ್ ಡ್ರೈವ್ ಬಿಡುಗಡೆ  ಹಿಂದೆ ರಾಜ್ಯ ಬಿಜೆಪಿ ಪ್ರಭಾವಿ ನಾಯಕನ ಕೈವಾಡವಿದೆ. ಹಾಸನದ ಮಾಜಿ ಶಾಸಕ ಜೊತೆ ಸೇರಿ ಪೆನ್ ಡ್ರೈವ್ ರಿಲೀಸ್ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಕೈವಾಡವಿಲ್ಲ ಎಂದು ಮಂಡ್ಯ ಕೈ ಶಾಸಕ ಗಣಿಗ ರವಿಕುಮಾರ್ ಸ್ಪೋಟ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಡಿಕೆ ಶಿವಕುಮಾರ್‌ ಮೇಲೆ ವಕೀಲ ದೇವರಾಜೇಗೌಡ ಮಾಡಿರುವ  ಆರೋಪವನ್ನು ತಳ್ಳಿ ಹಾಕಿದ ಮಂಡ್ಯ ಶಾಸಕ ಶಿವರಾಮೇಗೌಡರನ್ನ ಕಳುಹಿಸಿ ಯಾಕೆ ಷಡ್ಯಂತ್ರ ಹೂಡಿರಬಾರದು. ಬಿಜೆಪಿ ನಾಯಕರ ಜೊತೆ ಶಿವರಾಮೇಗೌಡರ ಮೇಲೆಯೂ ಗಣಿಗ ರವಿ ಅನುಮಾನ ವ್ಯಕ್ತಪಡಿಸಿದ್ದಾರೆ. ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನದ ಬಿಜೆಪಿ ಮಾಜಿ ಶಾಸಕನ‌ ಕೈವಾಡ ಇದೆ.

ಪ್ರಜ್ವಲ್ ರೇವಣ್ಣ ಇಂದು ಭಾರತಕ್ಕೆ ಬರುವ ನಿರೀಕ್ಷೆ, ವಿಮಾನ ನಿಲ್ದಾಣದಲ್ಲೇ ಮೊಕ್ಕಾಂ ಹೂಡಿದ ಎಸ್‌ಐಟಿ ತಂಡ

ರಾಜ್ಯ ಬಿಜೆಪಿ ಅತ್ಯುತ್ತಮ ಸ್ಥಾನದಲ್ಲಿ ಕುಳಿರುವ ನಾಯಕ ಶಾಮೀಲಾಗಿದ್ದಾರೆ. ಅವರಿಬ್ಬರೂ ಸೇರಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ಪೆನ್ ಡ್ರೈ ಹಂಚಿದ್ದಾರೆ. ರೇವಣ್ಣ ಕುಟುಂಬದ ರಾಜಕೀಯ ವಿರೋಧಿಯೇ ಷಡ್ಯಂತ್ರ ಮಾಡಿರೋದು. ಇವಾಗ ಡಿಕೆ ಶಿವಕುಮಾರ್ ಮೇಲೆ ಹೇಳ್ತಿದ್ದಾರೆ. ದೇವರಾಜೇಗೌಡನ ಪೋನ್ ಕಾಲ್ ಟ್ರ್ಯಾಪ್ ಮಾಡಿದ್ರೆ ಎಲ್ಲ ಗೊತ್ತಾಗುತ್ತೆ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

ಜೆಡಿಎಸ್ ಮಟ್ಟ ಹಾಕಲು ಇದು ಬಿಜೆಪಿ ಮಾಡ್ತಿರುವ ಸ್ಟೈಲ್. ಜೆಡಿಎಸ್ ಪಕ್ಷವನ್ನ ಮುಗಿಸಲು ಬಿಜೆಪಿ ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳುತ್ತಿರೋರು. ಪವರ್ ಪುಲ್ ಪೀಪಲ್ ಆಗಿರೋದ್ರಿಂದ ಡಿಕೆಶಿ ತಲೆಗೆ ಕಟ್ಟಲು ನೋಡ್ತಿದ್ದಾರೆ. ಇದಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ, ವಿಡಿಯೋ ಟಿಕ್ ಮಾಡಿದ್ದು ಸುರ್ಜೇವಾಲ, ಹೆಚ್‌ಡಿಕೆ ಗಂಭೀರ ಆರೋಪ!

 ಸಿಬಿಐಗೆ ಪ್ರಕರಣ ವರ್ಗಾಯಿಸಲು ಆಗ್ರಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೋಲಿಸ್ SIT ಅಧಿಕಾರಿಗಳು ದಕ್ಷರಿದ್ದಾರೆ ಎಲ್ಲವನ್ನೂ ಹೊರ ತರ್ತಾರೆ. ಪೆನ್ ಡ್ರೈ ಬಿಡುಗಡೆ ಮಾಡಿದ್ದೇ ದೇವರಾಜೇಗೌಡ, ಅದನ್ನ ಮಾರ್ಕೆಟ್ ಮಾಡಿದ್ದು ಬಿಜೆಪಿಯವರು. ದೇವೇಗೌಡ್ರು ಕುಟುಂಬ, ಕುಮಾರಣ್ಣನ ರಾಜಕೀಯವಾಗಿ ಮುಗಿಸಲು ಬಿಜೆಪಿ ಹೀಗೆ ಮಾಡ್ತಿದೆ. ಜೆಡಿಎಸ್ ಮುಗಿಸಿ ಬಿಜೆಪಿ ಭದ್ರಕೋಟೆ ನಿರ್ಮಿಸಿಕೊಳ್ಳುತ್ತೆ ಎಂದಿದ್ದಾರೆ.

Follow Us:
Download App:
  • android
  • ios