ಬೆಂಗಳೂರು: ಕಾಂಗ್ರೆಸ್ಸಿನ ‘ಇಂದಿರಾ ಗಾಂಧಿ ಭವನ’ ಉದ್ಘಾಟನೆ
ರಾಜ್ಯ ಕಾಂಗ್ರೆಸ್ ವತಿಯಿಂದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದ ಹಿಂಭಾಗ ನಿರ್ಮಿಸಿರುವ ಭವ್ಯವಾದ ‘ಇಂದಿರಾ ಗಾಂಧಿ ಭವನ’ವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಉದ್ಘಾಟಿಸಿದರು. ಇದೇ ವೇಳೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಭವನದ ‘ಭಾರತ್ ಜೋಡೋ ಸಭಾಂಗಣ’ವನ್ನು ಲೋಕಾರ್ಪಣೆಗೊಳಿಸಿದರು.
ಬೆಂಗಳೂರು (ಏ.17) : ರಾಜ್ಯ ಕಾಂಗ್ರೆಸ್ ವತಿಯಿಂದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದ ಹಿಂಭಾಗ ನಿರ್ಮಿಸಿರುವ ಭವ್ಯವಾದ ‘ಇಂದಿರಾ ಗಾಂಧಿ ಭವನ’ವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಉದ್ಘಾಟಿಸಿದರು. ಇದೇ ವೇಳೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ(Rahul gandhi) ಅವರು ಈ ಭವನದ ‘ಭಾರತ್ ಜೋಡೋ ಸಭಾಂಗಣ’ವನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ(Mallikarjun kharge), ನಾವು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಒಂದು ಚಿಕ್ಕ ಹಾಲ್‌ನಲ್ಲಿ ಕಾಳ ಕಳೆದೆವು. ಡಿ.ಕೆ.ಶಿವಕುಮಾರ್ ಲಕ್ಕಿ ಮ್ಯಾನ್. ಎಲ್ಲಾ 5 ಸ್ಟಾರ್‌ನಲ್ಲಿ ಕಾಂಗ್ರೆಸ್ ಭವನ ನಿರ್ಮಿಸಿದ್ದಾನೆ. ಈಗ ಆನಂದ್ ರಾವ್ ವೃತ್ತದ ಬಳಿಕ ಕಾಂಗ್ರೆಸ್ ಕಟ್ಟಡವನ್ನೂ ಕೆಡವಿ ಪಕ್ಷಕ್ಕೆ ಆದಾಯ ಬರುವಂತೆ ಮಾಡುವುದಾಗಿ ಹೇಳುತ್ತಿದ್ದಾನೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಡಿ.ಕೆ.ಶಿವಕುಮಾರ್ ನಿಷ್ಠೆಯಿಂದ ಮಾಡಿ ಮುಗಿಸುವ ಗುಣ ಹೊಂದಿದ್ದಾನೆ. ಪಕ್ಷದ ಅಧ್ಯಕ್ಷನಾದ ಮೇಲೆ ಶಾಸಕಾಂಗ ಪಕ್ಷದ ನಾಯಕರೂ ಸೇರಿ ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾನೆ. ಈ ಗುಣ ರಾಹುಲ್, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಎಲ್ಲರಿಗೂ ಮೆಚ್ಚುಗೆ ಆಗಿದೆ. ಈ ಕಟ್ಟಡಕ್ಕೆ ಇಂದಿರಾ ಗಾಂಧಿ ಅವರ ಹೆಸರು ನಾಮಕರಣ ಮಾಡಲು ಸೂಚಿಸಿದೆ. ಅದರಂತೆ ನಾಮಕರಣ ಮಾಡಿದ್ದಾರೆ. ಈ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿದರು.
ರಾಹುಲ್ ಗಾಂಧಿಗೆ ಅಗ್ನಿಪರೀಕ್ಷೆ: ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ; ಶಿಕ್ಷೆಗೆ ತಡೆಯಾದ್ರೆ ಅನರ್ಹತೆ ರದ್ದು..!
100 ಮೋದಿ, ಶಾ ಬಂದ್ರೂ ರಾಹುಲ್ ಏನೂ ಮಾಡಲಾಗಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ವಿರುದ್ಧ ಯಾರೂ ಏನು ಮಾತನಾಡಬಾರದು ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸುವ ಸರ್ಜಿಕಲ್ ಸ್ಟೆ್ರೖಕ್ ಮಾಡಿದ್ದಾರೆ. ಮೋದಿ, ಅಮಿತ್ ಶಾರಂತಹ ನೂರು ಜನ ಬಂದರೂ ಹೆದರುವುದಿಲ್ಲ ಎಂದು ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಮೋದಿ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿದ್ದಾರೆ. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವ ಏನು ಬೇಕಿಲ್ಲ. ಸರ್ವಾಧಿಕಾರಿಯಾಗಿ ಆಡಳಿತ ಮಾಡಲು ಬಯಸಿದ್ದಾರೆ. ಪ್ರತಿಪಕ್ಷದವರಾಗಿ ನಾವು ಕೇಳಿದ ಯಾವ ಪ್ರಶ್ನೆಗಳಿಗೂ ಉತ್ತರ ನೀಡುವ ಸೌಜನ್ಯ ಅವರಿಗಾಗಲಿ ಅವರ ಪಕ್ಷದ ಯಾವ ಸಚಿವರಿಗೂ ಇಲ್ಲ. ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದು ಮಾಡುವಂತಹ ಯಾವ ತಪ್ಪು ಮಾಡಿದ್ದರು. ಅವರು, 2014ರಲ್ಲಿ ಕೇವಲ 50 ಸಾವಿರ ಕೋಟಿ ರು.ನಷ್ಟಿದ್ದ ಅದಾನಿಯಂತಹ ಉದ್ಯಮಿಯ ಆಸ್ತಿ ಮೌಲ್ಯ 2020ರ ವೇಳೆಗೆ .2 ಲಕ್ಷ ಕೋಟಿಗೆ, 2023ರ ವೇಳೆಗೆ .12 ಲಕ್ಷ ಕೋಟಿಗಳಿಗೆ ಏರಿಕೆಯಾಗಿದ್ದು ಹೇಗೆ, ಅದಾನಿ ನಿಮ್ಮ ಜೊತೆ ವಿದೇಶಕ್ಕೆ ಎಷ್ಟುಬಾರಿ ಬಂದಿದ್ದಾರೆ ಎಂದು ಕೇಳಿದ್ದೇ ತಪ್ಪಾಯಿತು. 24 ಗಂಟೆಯಲ್ಲಿ ಅವರ ಸದಸ್ಯತ್ವ ರದ್ದು ಮಾಡಿದ್ದಾರೆ. ಹೀಗೆ ಬಿಟ್ಟರೆ ನಮ್ಮ ಎಲ್ಲ ಹುಳುಕನ್ನೂ ಕೆದಕಿ ನಮ್ಮನ್ನು ದೇಶದಲ್ಲಿ ಹರಾಜುಹಾಕುತ್ತಾರೆ ಎಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸಿದ್ದಾರೆ. ಆದರೆ, ರಾಹುಲ್ ಇದಕ್ಕೆ ಹೆದರುವುದಿಲ್ಲ. ಜನರ ಬಳಿಗೆ ಹೋಗಿ ಬಿಜೆಪಿ ಸರ್ಕಾರದ ಎಲ್ಲ ಬಂಡವಾಳವನ್ನೂ ಬಯಲು ಮಾಡುತ್ತಾರೆ ಎಂದರು.
ಭವನ ನಿರ್ಮಾಣಕ್ಕೆ 30 ಕೋಟಿ ವೆಚ್ಚ
ನಗರದ ಕ್ವೀನ್ಸ್ ರಸ್ತೆ(queens road)ಯಲ್ಲಿರುವ ಕಾಂಗ್ರೆಸ್ ಭವನ(Congress bhavana)ದ ಹಿಂಭಾಗದಲ್ಲಿ ಪಕ್ಷದಿಂದ ಸುಮಾರು .30 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ‘ಇಂದಿರಾ ಗಾಂಧಿ ಭವನ’ ನಿರ್ಮಿಸಲಾಗಿದ್ದು, ಭಾನುವಾರ ಉದ್ಘಾಟನೆಗೊಂಡಿತು.
ಭವ್ಯವಾದ ಕಾಂಗ್ರೆಸ್ ಭವನ ನಿರ್ಮಾಣ ಮಾಡಿದ ಬಳಿಕವೂ ಕಚೇರಿ ನಿರ್ವಹಣಾ ಕಾರ್ಯಕ್ಕೆ ಇದು ಚಿಕ್ಕದಾಗುತ್ತದೆ. ಹೇಗಿದ್ದರೂ ಕಚೇರಿಯ ಹಿಂದೆ ಸಾಕಷ್ಟುಜಾಗ ಇದ್ದು ಅಲ್ಲಿ ಇನ್ನೊಂದು ಭವನ ನಿರ್ಮಾಣ ಮಾಡಲು ಪಕ್ಷ ನಿರ್ಧಾರ ಕೈಗೊಂಡು 2014ರಲ್ಲಿ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅಡಿಗಲ್ಲು ಹಾಕಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೂ ಕೂಡ ಪಾಲ್ಗೊಂಡಿದ್ದರು.
ರಾಹುಲ್ ಗಾಂಧಿ ಮುಂದೆ ಮುಖ್ಯಮಂತ್ರಿ ನಿಲುವು ಪ್ರಕಟಿಸಿದ ಮಲ್ಲಿಕಾರ್ಜುನ ಖರ್ಗೆ!
ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್(DK Shivakumar) ಅವರು ಪಕ್ಷದ ಹಲವು ನಾಯಕರ ಸಹಕಾರದೊಂದಿಗೆ ಭವನದ ನಿರ್ಮಾಣ ಪೂರ್ಣಗೊಳಿಸಿದ್ದಾರೆ. ಒಂದು ಮಹಡಿ ಪೂರ್ತಿ 1200 ಆಸನ ಸಾಮರ್ಥ್ಯದ ಸಭಾಂಗಣವನ್ನೂ ನಿರ್ಮಿಸಿದ್ದು, ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ನೆನಪಿಗಾಗಿ ಭಾರತ್ ಜೋಡೋ(Bharat jodo) ಸಭಾಂಗಣ ಎಂದು ಹೆಸರಿಡಲಾಗಿದೆ. ಉಳಿದಂತೆ ಊಟೋಪಚಾರಕ್ಕೆ ಒಂದು ಮಹಡಿ, ವಾಹನ ನಿಲುಗಡೆಗೆ ತಳಮಹಡಿ, ವಸತಿ ವ್ಯವಸ್ಥೆ ಒಂದು ಮಹಡಿ ಮತ್ತು ಕಚೇರಿ ಬಳಕೆಗೆ ಎರಡು ಮಹಡಿಗಳನ್ನು ನಿರ್ಮಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದಂತೆ ದೆಹಲಿಯನ್ನು ಬಿಟ್ಟರೆ ಕರ್ನಾಟಕದಲ್ಲಿ ಮಾತ್ರವೇ ಕಾಂಗ್ರೆಸ್‌ನ ಇಂತಹ ಭವ್ಯ ಕಟ್ಟಡ ತಲೆ ಎತ್ತಿದೆ.