Asianet Suvarna News Asianet Suvarna News

ಹಿಂದಿ ಗೊತ್ತಿಲ್ಲಾಂದ್ರೆ ಎಜುಕೇಟೆಡ್ ಅಲ್ವಂತೆ: ಕನ್ನಡಿಗರ ಮೇಲೆ ದರ್ಪ ತೋರಿದ ರೈಲ್ವೆ ಟಿಕೆಟ್ ಕಲೆಕ್ಟರ್!

ಯಶವಂತಪುರದ ರೈಲ್ವೆ ಇಲಾಖೆಯ ಟಿಟಿಇ ಒಬ್ಬರು ಪ್ರಯಾಣಿಕರೊಂದಿಗೆ ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿ 'ಹಿಂದಿ ಗೊತ್ತಿಲ್ಲಾಂದ್ರೆ ಎಜುಕೇಟೆಡ್ ಅಲ್ಲ' ಎಂದು ಟೀಕಿಸಿದ್ದಾರೆ. ಈ ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Indian Railway Department TTE told those who do not know Hindi are illiterate sat
Author
First Published Sep 30, 2024, 5:10 PM IST | Last Updated Sep 30, 2024, 5:52 PM IST

ಬೆಂಗಳೂರು (ಸೆ.30): ಕರ್ನಾಟಕದಲ್ಲಿ ಕನ್ನಡರನ್ನು, ಕನ್ನಡ ಭಾಷೆಯನ್ನು ವಿರೋಧ ಮಾಡುವುದರಲ್ಲಿ ಹಾಗೂ ಹಿಂದಿ ಹೇರಿಕೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಯಶವಂತಪುರದ ರೈಲ್ವೆ ಇಲಾಖೆಯ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಹಿಂದಿ ಗೊತ್ತಿಲ್ಲಾಂದ್ರೆ ನೀವು ಅನಕ್ಷರಸ್ಥರು ಎಂದು ಟೀಕಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಳೆದೊಂದು ವರ್ಷದಿಂದ ಹಿಂದಿ ವಿರೋಧಿ ಚಟುವಟಿಕೆಗಳು ಹೆಚ್ಚಾಗಿತ್ತಿವೆ. ಉತ್ತರ ಭಾರತದಿಂದ ಕೆಲಸವನ್ನರಸಿ ಬೆಂಗಳೂರಿಗೆ ಬಂದು ಕನ್ನಡಿಗರಿಗೆ ನೀವು ಹಿಂದಿ ಕಲಿಯಬೇಕು ಎಂದು ಹಿಂದಿ ಹೇರಿಕೆ ಮಾಡುತ್ತಿದ್ದುದನ್ನು ವಿರೋಧಿಸಿ ಪ್ರಶ್ನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಕನ್ನಡ ಭಾಷೆಯನ್ನು ವಿರೋಧ ಮಾಡುವುದರಲ್ಲಿ ಹಾಗೂ ಹಿಂದಿ ಹೇರಿಕೆಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಯಶವಂತಪುರದ ರೈಲ್ವೆ ಇಲಾಖೆಯ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಹಿಂದಿ ಗೊತ್ತಿಲ್ಲಾಂದ್ರೆ ನೀವು ಅನಕ್ಷರಸ್ಥರು ಎಂದು ಟೀಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ, ವಿಡಿಯೋದಲ್ಲಿ ಪೋಸ್ಟ್‌ಗೆ ಹಿಂದಿ ಗೊತ್ತಲ್ಲ ಅಂದರೆ ಎಜುಕೇಟೆಡ್ ಅಲ್ವಂತೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡಿಗರನ್ನು ಕೆಣಕಿದ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂತು: ಕೆಲಸ ಕಳೆದುಕೊಂಡವಳಿಗೆ ನೆಲೆ ಕಳೆದುಕೊಳ್ಳುವ ಆತಂಕ!

ಯಶವಂತಪುರ ದಾದರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಒಬ್ಬರು ಪ್ರಯಾಣಿಕರನ್ನು ಕುರಿತು 'ನೀವು ಹಿಂದಿ ಮಾತನಾಡಿ' ಎಂದು ಹಿಂದಿ ಹೇರಿಕೆ ಮಾಡಿದ್ದಾರೆ.
ಇದನ್ನು ವಿರೋಧಿಸಿದ ಕನ್ನಡಿಗ ಪ್ರಯಾಣಿಕ 'ಇಂಡಿಯನ್ ರೈಲ್ವೇಸ್‌ನಲ್ಲಿ ಹಿಂದಿ ಕಂಪಲ್ಸರಿ ಇದೆ ಎನ್ನುತ್ತಾ, ಹಿಂದಿ ಮಾತನಾಡುವಂತೆ ಟಿಟಿ ಹೇಳುತ್ತಿದ್ದಾರೆ. ನಿನಗೆ ಯಾರು ಹೇಳಿದ್ದಪ್ಪಾ..? ರೈಲಿನಲ್ಲಿ ಎಲ್ಲರೂ ಹಿಂದಿ ಮಾತಾಡಬೇಕು ಅಂತಾ?' ಎಂದು ಪ್ರಶ್ನೆ ಮಾಡಿದ್ದಾರೆ.
ಆಗ ಟಿಟಿಇ 'ಇಲ್ಲಿ ಕನ್ನಡ ಕೂಡ ಕಂಪಲ್ಸರಿ ಇಲ್ಲ' ಎಂದು ಹೇಳಿದ್ದಾರೆ.
ಪ್ರಯಾಣಿಕ 'ಹೌದು ಕನ್ನಡ ಕಂಪಲ್ಸರಿ ಇಲ್ಲ. ಆದ್ರೆ ಹಿಂದಿ ರಾಷ್ಟ್ರೀಯ ಭಾಷೆಯಾ? ಹಿಂದಿ ಕಡ್ಡಾಯವಾಗಿ ಮಾತನಾಡಬೇಕಾ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಟಿಇ 'ಹೌದು ನಾನು ಹೇಳ್ತೇನೆ. ಅದೇನು ಮಾಡ್ಕೋತಿಯೋ ಮಾಡ್ಕೋ' ಎಂದು ಉಡಾಫೆಯಿಂದ ವರ್ತಿಸುತ್ತಾನೆ.
ಪ್ರಯಾಣಿಕ 'ನೀನು ಕರ್ನಾಟಕದಲ್ಲಿ ಕೆಲಸಕ್ಕೆ ಬಂದಿದ್ದೀಯಾ. ಕನ್ನಡ ಮಾತಾಡು ಗುರೂ' ಎಂದು ಹೇಳಿದ್ದಾನೆ.
ಟಿಟಿಇ ಕೈಯನ್ನು ಅಲ್ಲಾಡಿಸುತ್ತಾ ' ಇಲ್ಲಾ, ಆಗಲ್ಲಾ.. ಹಿಂದಿ ಕಂಪಲ್ಸರಿ, ರೈಲಿನಲ್ಲಿ ಕನ್ನಡ ಕಂಪಲ್ಸರಿ ಇಲ್ಲ. ನಾನು ರೈಲಿನಲ್ಲಿ ಕೆಲಸ ಮಾಡುವುದು' ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK11: ತುಕಾಲಿ ಮಾನಸಾಗೆ ಸ್ವತಃ ಕಿಚ್ಚ ಸುದೀಪ್‌ ಸ್ವಾಗತಿಸಿದರೂ, ನೆಟ್ಟಿಗರಿಂದ ಭಾರಿ ವಿರೋಧ!

ಪ್ರಯಾಣಿಕ 'ನೀನು ಕರ್ನಾಕದಲ್ಲಿ ಇದ್ದೀಯ, ಕನ್ನಡ ಮಾತಾಡು ಎಂದು ಹೇಳಿದರೆ, ಟಿಟಿ ಆಗೊಲ್ಲ ಎಂದಿದ್ದಾನೆ. ಹಾಗಾದರೆ ನನಗೆ ಹಿಂದಿ ಮಾತಾಡು ಎಂದು ನೀನು ಯಾರು ಹೇಳುವುದಕ್ಕೆ? ಇದು ಕರ್ನಾಟಕ, ಕನ್ನಡ ಮಾತಾಡು. ನೀನು ಹಿಂದಿ ಮಾತನಾಡಬೇಕು ಎಂದರೆ ನಿಮ್ಮ ಸ್ಟೇಟ್‌ಗೆ ಹೋಗಿ ಮಾತಾಡು' ಎಂದು ಹೇಳಿದ್ದಾರೆ.
ಟಿಟಿಇ 'ಇದು ನಿಮ್ಮ ಕರ್ನಾಟಕ ಏನೂ ಅಲ್ಲ.. ಇದು ಇಂಡಿಯಾ.. ಇಂಡಿಯಾ' ನನ್ನ ಮುಂದೆ ನೀನು ಮಾತನಾಡಬೇಡ, ಏನು ಬೇಕು ಅದನ್ನು ಕಿರುಚಬೇಡ. ಇಲ್ಲಿಂದ ಹೋಗು. ನೀನು ಯಾವುದೇ ಪರ್ಮಿಷನ್ ಇಲ್ಲದೇ ವಿಡಿಯೋ ಮಾಡುತ್ತಿರುವುದಕ್ಕೆ ಕಂಪ್ಲೇಂಟ್ ಮಾಡ್ತೀನಿ' ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios