ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಡಾ. ಹಂಪ ನಾಗರಾಜಯ್ಯ ಆಯ್ಕೆ!

2024ರ ಮೈಸೂರು ದಸರಾ ಮಹೋತ್ಸವವನ್ನು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 

Indian litterateur Hampa Nagarajaiah inaugurating of Mysuru Dasara 2024 sat

ಬೆಂಗಳೂರು  (ಸೆ.20): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ರ ಉದ್ಘಾಟಕರನ್ನಾಗಿ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ಹಂಪ ನಾಗರಾಜಯ್ಯ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದೆ ಎಂದರು. ಮುಂದುವರೆದು, ರಾಜ್ಯದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಉಂಟಾಗುತ್ತಿರುವ ಗಲಾಟೆ ಕುರಿತು ಮಾತನಾಡಿ, ಪ್ರತಿ‌ನಿತ್ಯ ಏನು ಗಲಾಟೆ ನಡೆಯುತ್ತಿಲ್ಲ. ಇದುವರೆಗೆ ಎರಡು ಪ್ರಕರಣ ನಡೆದಿವೆ. ಈ ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಲು ತಿಳಿಸಿದ್ದೇನೆ. ನಾಗಮಂಗಲ ಪ್ರಕರಣದಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಅಮಾನತು ಮಾಡಿದ್ದೇವೆ. ಬಿಜೆಪಿಯವರ ಕುಮ್ಮಕ್ಕಿನಿಂದಲೇ ಗಲಾಟೆ ನಡೆಯುತ್ತಿದೆ. ಬಿಜೆಪಿಯವರು ಕೋಮುವಾದಿಗಳು. ಅವರು ನೀಡುವ ಹೇಳಿಕೆಯಿಂದ ಗಲಾಟೆಗಳು ನಡೆಯುತ್ತಿದೆ ಎಂದರು.

ನ್ಯಾಯಮೂರ್ತಿಗಳ ಗೋರಿಪಾಳ್ಯ ಹೇಳಿಕೆ ವರದಿ ಕೇಳಿದ ಸುಪ್ರೀಂ: ಲೈವ್ ಸ್ಟ್ರೀಮಿಂಗ್ ಸ್ಥಗಿತಕ್ಕೆ ವಕೀಲರ ಆಗ್ರಹ:

ಶಾಸಕ ಮುನಿರತ್ನ ವಿರುದ್ಧ ಎಸ್ಐಟಿ ತನಿಖೆ ಮಾಡಲು ಸಚಿವರು ಶಾಸಕರು ಪತ್ರ ಕೊಟ್ಟಿದ್ದಾರೆ. ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಸೂಚನೆ ನೀಡಿದ್ದೇನೆ. ಶಾಸಕ ಮುನಿರತ್ನ ಮೇಲೆ ಬಹಳಷ್ಟು ಗಂಭೀರ ಪ್ರಕರಣಗಳು ಇದೆ. ಹೀಗಾಗಿ ವಿಶೇಷ ತನಿಖಾ ತಂಡದ ಅಗತ್ಯ ಇದೆ ಎಂದು ಕೇಳಿದ್ದಾರೆ. ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಮೈಸೂರಿನ ಕೆಎಸ್ಒಯು ನ ಕಾವೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುವರ್ಣ ಸಂಭ್ರಮ ಕರ್ನಾಟಕ-50, ಕರ್ನಾಟಕ ಸಾಂಸ್ಕೃತಿಕ ಮುನ್ನೋಟ, ಚಿಂತನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ, ಶಿವರಾಜ ತಂಗಡಗಿ, ಎಂಎಲ್ಸಿ ಡಾ ಡಿ ತಿಮ್ಮಯ್ಯ, ಈ ಬಾರಿಯ ದಸರಾ ಉದ್ಘಾಟಕ ಹಿರಿಯ ಸಾಹಿತಿ ಹಂಪನಾಗರಾಜಯ್ಯ ಸೇರಿದಂತೆ ಮತ್ತಿತರ ಪ್ರಮುಖರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ರಾಜಕೀಯ ವಿರೋಧಿಗಳಿಗೆ ಏಡ್ಸ್ (HIV) ಇಂಜೆಕ್ಷನ್ ಮಾಡಿಸ್ತಿದ್ದ ಮುನಿರತ್ನ: ಡಿ.ಕೆ. ಸುರೇಶ್!

ಇಲ್ಲಿ ಮಾತನಾಡಿದ ಅವರು,  ಕರ್ನಾಟಕದಲ್ಲಿ  ಯಾರೆಲ್ಲ ವಾಸ ಮಾಡ್ತಾರೆ ಅವರೆಲ್ಲ ಕನ್ನಡಿಗರಾಗಬೇಕು‌. ಕನ್ನಡ ಭಾಷೆ ಮಾತನಾಡಬೇಕು. ನಾನು ಸಾಹಿತಿಯಲ್ಲ ಆದರೂ ನನ್ನನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷನ್ನಾಗಿ ಮಾಡಿದ್ದರು. ಈಗ ಅದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗಿದೆ. ಅಂದಿನಿಂದ ಕನ್ನಡದಲ್ಲೆ ಬರೆಯಲು ಶುರುಮಾಡಿದೆ. ಈಗ ಇಂಗ್ಲೀಷ್ ಮರೆತೋಗಿದೆ. ಇಂಗ್ಲೀಷ್ ನಲ್ಲಿ ಪತ್ರ ಇದ್ರೆ ನಾನು ಇಂಗ್ಲೀಷ್ ನಲ್ಲಿ ಸಹಿ ಮಾಡುತ್ತೇನೆ. ಕನ್ನಡ ಪತ್ರ ಇದ್ದರೆ ಕನ್ನಡದಲ್ಲಿ ಸಹಿ ಮಾಡುತ್ತೇನೆ. ಯಾವನೋ ಒಬ್ಬ ಇದಕ್ಕೆ ದೂರು ಕೊಟ್ಟಿದ್ದಾನೆ‌. ಸಿದ್ದರಾಮಯ್ಯ ಕನ್ನಡದಲ್ಲೆ ಸಹಿ ಮಾಡುವುದು, ಆದ್ರೆ ಇಂಗ್ಲೀಷ್ ನಲ್ಲಿ ಸಹಿ ಇದೆ ಎಂದು ದೂರು ಕೊಟ್ಟಿದ್ದಾರೆ. ಇವರೆಲ್ಲ ಎಂತಹ ಪೆದ್ದರಿದ್ದಾರೆ. ಇದಕ್ಕೆ ರಾಜ್ಯಪಾಲರು ಯಾಕೆ ತನಿಖೆ ಮಾಡಬಾರದು ಅಂತ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios