Aircraft Crashed: ಚಾಮರಾಜನಗರ ವಿಮಾನ ಪತನ ಸ್ಥಳಕ್ಕೆ ಬಂದ ಆರ್ಮಿ ತಂಡ

ಭಾರತೀಯ ಸೇನೆಯ ಪೈಲಟ್‌ ತರಬೇತಿ ನೀಡುತ್ತಿದ್ದ ಲಘು ವಿಮಾನ ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಪತನವಾಗಿದೆ.

Indian Army pilot training light aircraft has crashed in Chamarajanagar sat

ಚಾಮರಾಜನಗರ (ಜೂ.1): ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಭಾರತೀಯ ಸೇನೆಯ ಪೈಲಟ್‌ ತರಬೇತಿ ನೀಡುತ್ತಿದ್ದ ಲಘು ವಿಮಾನ ಪತನವಾದ ಸ್ಥಳಕ್ಕೆ ಭಾರತೀಯವಾಯು ಸೇನೆಯ ಏರ್ ಮಾರ್ಷಲ್ ಅಧಿಕಾರಿಗಳು, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಸ್ಥಳ ಪರಿಶೀಲನೆ ಆರಂಭಿಸಿದ್ದಾರೆ. 

ಚಾಮರಾಜನಗರದ ತಾಲೂಕಿನ ಭೋಗಾಪುರ ಗ್ರಾಮದ ಸಮೀಪ ಲಘು ಯುದ್ಧ ಬರುವಾಗಲೇ ದೊಡ್ಡ ಬ್ಲಾಸ್ಟ್ ಆದ ಶಬ್ದ ಬಂದಿತು. ಕೂಡಲೇ ಎಚ್ಚೆತ್ತ ಪೈಲಟ್ ಇಬ್ಬರೂ ಪ್ಯಾರಾಚೂಟ್ ಬಳಸಿ ಗ್ರೇಟ್ ಎಸ್ಕೇಪ್‌ ಆಗಲು ನಿರ್ಧರಿಸಿದ್ದಾರೆ. ನಂತರ, ವಿಮಾನ ಪತನಗೊಳ್ಳುವ ಸ್ಥಳದಲ್ಲಿ ಯಾವುದೇ ಗ್ರಾಮಗಳು ಹಾಗೂ ದಟ್ಟ ಕಾಡು ಇರದಂತಹ ಸ್ಥಳದಲ್ಲಿ ಪತನಗೊಳ್ಳುವಂತೆ ಆಲೋಚನೆ ಮಾಡಿ, ಭೋಗಾಪುರ ಗ್ರಾಮದ ಹೊರಭಾಗದಲ್ಲಿ ವಿಮಾನ ಪತನ ಆಗುವಂತೆ ಸಾಧ್ಯವಾದಷ್ಟು ಚಾಲನೆ ಮಾಡಿ ನಂತರ ಪ್ಯಾರಾಚೂಟ್‌ ಬಳಸಿ ವಿಮಾನದಿಂದ ಹಾರಿದ್ದಾರೆ. ಇನ್ನು ಲಘು ವಿಮಾನ ಕೂಡ ಗ್ರಾಮದ ಹೊರಭಾಗದಲ್ಲಿ ಅದರಲ್ಲೂ ಬಯಲು ಪ್ರದೇಶದಲ್ಲಿ ಬಿದ್ದಿದ್ದರಿಂದ ದೊಡ್ಡ ಅಪಘಾತ ಉಂಟಾಗುವುದು ತಪ್ಪಿದೆ.

ಚಾಮರಾಜನಗರದಲ್ಲಿ ಜೆಟ್ ವಿಮಾನ ಪತನ

ಗ್ರಾಮದಲ್ಲಿ ವಿಮಾನ ಬಿದ್ದಿದ್ದರೆ ಪ್ರಾಣಾಪಾಯ ಸಾಧ್ಯತೆಯಿತ್ತು: ಊರಿನ ಹೊರಭಾಗದಲ್ಲಿ ಚಿದ್ರವಾಗಿ ಬಿದ್ದ ವಿಮಾನ: ಇನ್ನು ಮಂಗಲ ಗ್ರಾಮದ 1 ಕಿ.ಮೀ. ದೂರದ ನಿರ್ಜನ ಪ್ರದೇಶದಲ್ಲಿ ವಿಮಾನ ಪತನಗೊಂಡ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡ ಸ್ಥಳದಿಂದ 2 ಕಿ.ಮೀ ಅಂತರದಲ್ಲಿ ಪೈಲಟ್‌ಗಳು ಕೂಡ ಪ್ಯಾರಚೂಟ್‌ ಬಳಸಿ ಲ್ಯಾಂಡ್‌ ಆಗಿದ್ದಾರೆ. ಇನ್ನು ಲಘು ವಿಮಾನದ ಸ್ಪೋಟಗೊಂಡ ರಭಸಕ್ಕೆ, ಮುಂಭಾಗದ ಗ್ಲಾಸ್, ಎರಡೂ ಬದಿಯ ರೆಕ್ಕೆಗಳು, ಇಂಜಿನ್‌ ಸೇರಿದಂತೆ ಬಹುತೇಕ ಭಾಗಗಳು ಛಿದ್ರ ಛಿದ್ರಗೊಂಡು ಬಿದ್ದಿವೆ.

Indian Army pilot training light aircraft has crashed in Chamarajanagar sat

ಸ್ಥಳೀಯ ಪೊಲೀಸರ ಸಹಕಾರದಿಂದ ಸ್ಥಳ ಪರಿಶೀಲನೆ: ಭಾರತೀಯ ವಾಯು ಸೇನೆಯ ಏರ್ ಮಾರ್ಷಲ್ವಿಮಾನ ಬಿದ್ದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. ಇನ್ನು ವಾಯುಪಡೆ ಅಧಿಕಾರಿಗಳು ಕೂಡ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದು, ಚಾಮರಾಜನಗರದಲ್ಲಿ ವಿಮಾನ ನಿಲ್ಲಿಸಿ ಅಲ್ಲಿಂದ ಸ್ಥಳೀಯ ಪೊಲೀಸರನ್ನು ಕರೆದುಕೊಂಡು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಲಘು ವಿಮಾನ ದುರಂತ ನಡೆದ ಸ್ಥಳಕ್ಕೂ,ಪೈಲಟ್ ಬಿದ್ದಿದ್ದ ಸ್ಥಳಕ್ಕೂ 2 ಕಿಮೀ ಅಂತರ ಇರುವುದನ್ನು ಗಮನಿಸಿದ್ದಾರೆ. ಇನ್ನು ಪೈಲಟ್‌ಗಳು ಕೂಡ ಪರಿಶೀಲನಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. 

ಬೆಂಗಳೂರಿನ ಎಚ್‌ಎಎಲ್‌ನಿಂದ ತರಬೇತಿಗೆ ಸುತ್ತಾಟ: ಬೆಂಗಳೂರಿನ ಎಚ್ಎಎಲ್ ನಿಂದ ತರಬೇತಿ ಉದ್ದೇಶಕ್ಕೆ ಬಂದಿದ್ದ ಲಘು ವಿಮಾ, ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಾರಾಟ ಮಾಡುವಾಗ ಆಗಸದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ನೋಡ ನೋಡುತ್ತಿದ್ದಂತೆ ವಿಮಾನ ಹಾರುತ್ತಲೇ ಧರೆಗುರುಳಿ ದೊಡ್ಡದಾಗಿ ಬ್ಲಾಸ್ಟ್‌ ಆಗುವ ಮೂಲಕ ಛಿದ್ರಗೊಂಡು ಬಿದ್ದಿದೆ. ಅದೃಷ್ಟವಶಾತ್‌ ಇಬ್ಬರೂ ಪೈಲಟ್‌ಗಳು ಪ್ಯಾರಚೂಟ್‌ ಬಳಸಿ ವಿಮಾನದಿಂದ ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸುತ್ತಮುತ್ತಲಿನ ಗ್ರಾಮಸ್ಥರು ಯುದ್ಧ ವಿಮಾನ ಬಿದ್ದ ಸ್ಥಳಕ್ಕೆ ಜಾತ್ರೆಯ ರೀತಿಯಲ್ಲಿ ನೋಡಲು ಬಂದು ಸೇರುತ್ತಿದ್ದರು.

angaluru : ವಿಮಾನಕ್ಕೆ ಹಕ್ಕಿ ಡಿಕ್ಕಿ, ಫೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ!

ಲಘು ವಿಮಾನದಲ್ಲಿ ತಾಂತ್ರಿಕ ದೋಷ: ಲಘು ವಿಮಾನದಲ್ಲಿ ತರಬೇತಿ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡಿದೆ. ಇನ್ನು ಪ್ಯಾರಾಚೂಟ್‌ ಬಳಸಿ ಹಾರಿದ ಪೈಲಟ್‌ಗಳಿಗೆ ಸಣ್ಣಪುಟ್ಟಗಾಯಗಳಾಗಿವೆ. ವಿಂಗ್ ಕಮಾಂಡರ್ ತೇಜಪಾಲ್ ತರಬೇತುದಾರ ಪೈಲಟ್ ಹಾಗು ಭೂಮಿಕಾ  ತರಬೇತಿ ಪಡೆಯುತ್ತಿದ್ದ ಪೈಲಟ್ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಏರ್‌ಲಿಪ್ಟ್ ಮಾಡಲಾಗಿದೆ. ಇದು ಸೇನಾ ತರಬೇತಿ ವಿಮಾನದಲ್ಲಿ ಇಬ್ಬರು ಪೈಲಟ್ ಇದ್ದರು. ತೇಜಪಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ  ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios