ಬಾಕಿ ಪ್ರಕರಣ ಹೆಚ್ಚಳ: ರಾಜ್ಯದಲ್ಲಿ ಮತ್ತೆ ಗ್ರಾಮ ಕೋರ್ಟ್: ಎಚ್‌ ಕೆ ಪಾಟೀಲ್

ರಾಜ್ಯದ ಪ್ರತಿಯೊಂದು ಗ್ರಾಮವೂ ವ್ಯಾಜ್ಯಮುಕ್ತವಾಗಬೇಕು ಎಂಬುದು ಸರ್ಕಾರದ ಆದ್ಯತೆಯಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಮತ್ತೆ ಜಾರಿಗೆ ತರಲಾಗುತ್ತದೆ ಎಂದು ರಾಜ್ಯ ಕಾನೂನು-ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

Increase in pending cases gram court again in the state says HK Patil bengaluru rav

ಉಡುಪಿ (ಆ.6) :  ರಾಜ್ಯದ ಪ್ರತಿಯೊಂದು ಗ್ರಾಮವೂ ವ್ಯಾಜ್ಯಮುಕ್ತವಾಗಬೇಕು ಎಂಬುದು ಸರ್ಕಾರದ ಆದ್ಯತೆಯಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಮತ್ತೆ ಜಾರಿಗೆ ತರಲಾಗುತ್ತದೆ ಎಂದು ರಾಜ್ಯ ಕಾನೂನು-ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌(HK Patil) ಹೇಳಿದ್ದಾರೆ.

ಅವರು ಶನಿವಾರ ಇಲ್ಲಿನ ಬ್ರಹ್ಮಾವರ ತಾಲೂಕಿನ ನೂತನ ಸಂಚಾರಿ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ 300 ಕೋಟಿ ರು. ಬಂಡವಾಳ: ಸಚಿವ ಎಚ್‌.ಕೆ. ಪಾಟೀಲ್‌

ದೇಶದಲ್ಲಿ ದಶಕಗಳಿಂದ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ 2006-08ರಲ್ಲಿ ಗ್ರಾಮ ನ್ಯಾಯಾಯಗಳನ್ನು ಜಾರಿಗೆ ತರಲಾಗಿತ್ತು. ಆದರೆ ಹಿಮಾಚಲಪ್ರದೇಶವೊಂದನ್ನು ಬಿಟ್ಟು ಇತರೆಡೆಗಳಲ್ಲಿ ಈ ಗ್ರಾಮ ನ್ಯಾಯಾಲಯಗಳು ಸ್ಥಗಿತಗೊಂಡಿವೆ. ನಮ್ಮ ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಕಿ ಪ್ರಕರಣಗಳ ಹಿನ್ನೆಲೆಯಲ್ಲಿ ಈ ವರ್ಷವೇ ಗ್ರಾಮ ಮಟ್ಟದ ನ್ಯಾಯಾಲಯಗಳನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದವರು ಹೇಳಿದರು. ಆರಂಭದಲ್ಲಿ 2 ಗ್ರಾಮಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತದೆ. ಮುಂದೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿಸಿಕೊಂಡು 2000 ಗ್ರಾಮಗಳಲ್ಲಿ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಸಿಪಿಸಿ ತಿದ್ದುಪಡಿ ಶೀಘ್ರ ಜಾರಿ:

ನ್ಯಾಯದಾನದಲ್ಲಿ ವಿಳಂಬ ಮತ್ತು ವೆಚ್ಚದಾಯಕ ಆಗಿರುವುದರಿಂದ ಬಡವರು ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುವ ಹಂತ ಬಂದಿದೆ. ನ್ಯಾಯಾಲಯ ಎಂದರೆ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಎಂದಷ್ಟೇ ಭಾವಿಸುವಂತಾಗಿದೆ, ಕಕ್ಷಿದಾರರ ಬಗ್ಗೆ ಯಾರಿಗೂ ಗಮನವೇ ಇಲ್ಲ ಎಂಬಂತಾಗಿದೆ ಎಂದು ಪಾಟೀಲ್‌ ಬೇಸರಿಸಿದರು.

 

ಕ್ವಾರಿಗಳಿಂದ ದಂಡ ವಸೂಲಿಗೆ ಒಂದು ಬಾರಿ ಪರಿಹಾರ ಸ್ಕೀಂ: ಸಚಿವ ಎಚ್‌.ಕೆ.ಪಾಟೀಲ್‌

ಬಡವರಿಗೂ ಶೀಘ್ರ ನ್ಯಾಯ ನೀಡುವುದಕ್ಕಾಗಿ ಸಿವಿಲ್‌ ಪ್ರೊಸಿಜರ್‌ ಕಾಯ್ದೆ (ಸಿಪಿಸಿ)ಗೆ ತಿದ್ದಪಡಿ ಮಾಡಿದ್ದು, ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆದು ರಾಷ್ಟ್ರಪತಿ ಅವರ ಅಂಕಿತಕ್ಕೆ ಕಳುಹಿಸಲಾಗಿದೆ. ಈ ಕಾಯ್ದೆ ಶೀಘ್ರ ಜಾರಿಗೊಳ್ಳಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಸಚಿವರು, ಇದರಿಂದ ಬಡವರ ವ್ಯಾಜ್ಯಗಳನ್ನು 6 ತಿಂಗಳಲ್ಲಿ ಇತ್ಯರ್ಥ ಮಾಡಬೇಕಾಗುತ್ತದೆ ಮತ್ತು ಕೇವಲ 3 ಬಾರಿ ಮಾತ್ರ ವಿಚಾರಣೆಯನ್ನು ಮುಂದೂಡುವುದಕ್ಕೆ ಅವಕಾಶ ಇದೆ ಎಂದವರು ಹೇಳಿದರು.

Latest Videos
Follow Us:
Download App:
  • android
  • ios