Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆ ಸೇವಾ ಗುಣಮಟ್ಟ ಹೆಚ್ಚಳ: ಸಿಎಂ ಸಿದ್ದರಾಮಯ್ಯ

21ನೇ ರಾಜ್ಯಮಟ್ಟದ ಫ್ಲಾರೆನ್ಸ್‌ ನೈಂಟಿಗೇಲ್‌ ಪ್ರಶಸ್ತಿ ಪ್ರದಾನ ಸಮಾರಂಭ, ಶುಶ್ರೂಷಕರು ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ: ಸಿದ್ದು ಕರೆ

Increase in Government Hospital Service Quality in Karnataka Says CM Siddaramaiah grg
Author
First Published Jun 13, 2023, 5:19 AM IST

ಬೆಂಗಳೂರು(ಜೂ.13): ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಸೇವಾ ಗುಣಮಟ್ಟವನ್ನು ಖಾಸಗಿ ಆಸ್ಪತ್ರೆಗಳ ಮಟ್ಟಕ್ಕೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಆರೋಗ್ಯ ಇಲಾಖೆ ಹಾಗೂ ಇಂಡಿಯನ್‌ ಯುನಿಟಿ ಸೆಂಟರ್‌ ಸಹಯೋಗದಲ್ಲಿ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ 21ನೇ ರಾಜ್ಯಮಟ್ಟದ ಫ್ಲಾರೆನ್ಸ್‌ ನೈಂಟಿಗೇಲ್‌ ಶುಶ್ರೂಷ ಅಧಿಕಾರಿ ಗಳ ಪ್ರಶಸ್ತಿ (2023) ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಹುತೇಕ ಶ್ರೀಮಂತರು, ನನ್ನನ್ನೂ ಒಳಗೊಂಡು ಎಲ್ಲ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಯಾದ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಾತ್ರ ಶ್ರೀಮಂತರು, ರಾಜಕಾರಣಿಗಳು ಕೂಡ ಹೋಗುತ್ತಾರೆ. ಇಲ್ಲಿ ಸಿಗುವ ಉತ್ತಮ ಚಿಕಿತ್ಸೆ, ಸೇವೆ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ನಡೆಸಲಿದೆ. ಖಾಸಗಿ ಆಸ್ಪತ್ರೆಗಳ ಮಟ್ಟದ ಎಲ್ಲ ಸೌಲಭ್ಯಗಳೂ ಅಲ್ಲದಿದ್ದರೂ ಅಲ್ಲಿ ಸಿಗುವ ಚಿಕಿತ್ಸೆ ಹಾಗೂ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗುವಂತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

Congress guarantee: ಷರತ್ತುಗಳಿಲ್ಲದೆ ಐದೂ ಯೋಜನೆ ಜಾರಿಗೆ ಬರಲಿ: ಸಿ.ಸಿ. ಪಾಟೀಲ ಆಗ್ರಹ

ಜಯದೇವ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನೇ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ರೂಪಿಸಲು ಸಾಧ್ಯವಿದೆ. ಇದಕ್ಕೆ ಅಧಿಕಾರಿಗಳು, ವೈದ್ಯರು, ಸುಶ್ರೂಷಕರು ಸೇರಿದಂತೆ ಸಂಬಂಧಿಸಿದ ಎಲ್ಲರ ಸಹಕಾರ ಅಗತ್ಯ. ಪ್ರಾಮಾಣಿಕತೆ, ಶ್ರದ್ಧೆ ಮತ್ತು ಸೇವಾ ಮನೋಭಾವ ಇದಕ್ಕೆ ಬಹಳ ಮುಖ್ಯವಾಗಿದೆ ಎಂದರು.

ಶುಶ್ರೂಷಕರ ಕೆಲಸ ಒಂದು ಪವಿತ್ರ ವೃತ್ತಿ. ಶುಶ್ರೂಷಕರು ನಗುನಗುತ್ತಾ ರೋಗಿಗಳ ಸೇವೆ ಮಾಡುವುದು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಅರ್ಧ ಕಾಯಿಲೆ ಅದರಿಂದಲೇ ವಾಸಿಯಾಗುತ್ತದೆ. ಅಂತಹ ಸೇವಾ ಮನೋಭಾವವನ್ನು ಎಲ್ಲ ಶುಶ್ರೂಷಕರೂ ಮೈಗೂಡಿಸಿಕೊಳ್ಳಬೇಕು. ಆ ರೀತಿ ಸೇವೆ ಮಾಡುವವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡು ವುದರಿಂದ ಅವರನ್ನು ಪ್ರೋತ್ಸಾಹಿಸಿದಂತಾಗುವುದು ಎಂದರು.

ಆ.1ರಿಂದ ಗೃಹಜ್ಯೋತಿ ಯೋಜನೆ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಇಲಾಖಾ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌, ಆಯುಕ್ತ ಡಿ. ರಂದೀಪ್‌, ನಿರ್ದೇಶಕಿ ಡಾ.ಇಂದೂಮತಿ, ಮಾಜಿ ಶಾಸಕ ಫ್ಲಾರೆನ್ಸ್‌ ನೈಟಿಂಗೇಲ್‌ ಪ್ರಶಸ್ತಿ ಸಮಿತಿ ಅಧ್ಯಕ್ಷ ಐವನ್‌ ನುಗ್ಲಿ, ಕರ್ನಾಟಕ ನರ್ಸಿಂಗ್‌ ಕಾಲೇಜುಗಳ ಸಂಘದ ಅಧ್ಯಕ್ಷ ಎಸ್‌.ಶಿವಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

12 ಜನರಿಗೆ ನೈಟಿಂಗೇಲ್‌ ಪ್ರಶಸ್ತಿ

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸುಶ್ರೂಷಕರಾಗಿ ದೀರ್ಘ ಕಾಲ ಉತ್ತಮ ಸೇವೆ ಸಲ್ಲಿಸಿದ ಮೈಸೂರಿನ ಕೆ.ಆರ್‌. ಆಸ್ಪತ್ರೆಯ ಎಂ.ಎಂ.ರತಿ, ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯ ಶೈಲಜ ಬಿ.ಎಂ, ವಿಕ್ಟೋರಿಯಾ ಆಸ್ಪತ್ರೆಯ ಕವಿತಾ, ಬೆಂಗಳೂರು ವೈದ್ಯಕೀಯ ಆಸ್ಪತ್ರೆಯ ಜಾನ್‌ ಮಾರ್ಷಲ…,ಬೆಂಗಳೂರಿನ ಸ್ಪಶ್‌ರ್‍ ಆಸ್ಪತ್ರೆಯ ಜೆಮಿಮಲ್‌ ಕ್ರಿಸ್ಟೋಫರ್‌, ಪೋರ್ಟಿಸ್‌ ಆಸ್ಪತ್ರೆಯ ಆರ್‌.ಪ್ರಿಯದರ್ಶಿನಿ, ವಿಮೆಂಡೊ ಅಕಾಡೆಮಿಯ ಎಚ್‌.ಎಸ್‌. ಶಶಿ ಕುಮಾರ, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಭುವನೇಶ್ವರಿ, ಫಾದರ್‌ ಮುಲ್ಲೆರ್‌ ವೈದ್ಯಕೀಯ ಆಸ್ಪತ್ರೆಯ ಪ್ರೆಸಿಲ್ಲಾ ರೋಡ್ರಿಗಸ್‌, ನರಗುಂದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಭಾರತಿ ಪಾಟೀಲ್‌, ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯ ಬಿ.ರೇಣುಕಾ, ಹುಬ್ಬಳ್ಳಿಯ ಕೆಎಲ್‌ಇ ನರ್ಸಿಂಗ್‌ ಕಾಲೇಇನ ಪ್ರಾಂಶುಪಾಲ ಡಾ.ಸಂಜಯ್‌ ಎಂ ಪೀರಾಪುರ ಅವರಿಗೆ ಮುಖ್ಯಮಂತ್ರಿಗಳು ಫ್ಲಾರೆನ್ಸ್‌ ನೈಟಿಂಗೇಲ್‌ ಹೆಸರಿನಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

Follow Us:
Download App:
  • android
  • ios