ದೇಶ, ಹಿಂದು ಧರ್ಮ ಸಂರಕ್ಷಣೆ, ಗೋಮಾತೆ ಸಂರಕ್ಷಣೆ ಸಂಕಲ್ಪದೊಂದಿಗೆ ನಾವು ಈ ಬ್ರಿಗೇಡ್ ಆರಂಭಿಸಿದ್ದೇವೆ. ಸಾಧು-ಸಂತರ ಮಾರ್ಗ ದರ್ಶನದಲ್ಲಿ ರಾಜ್ಯದಲ್ಲಿ ನಮ್ಮ ಬ್ರಿಗೇಡ್ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ ಕ್ರಾಂತಿವೀರ ಬ್ರಿಗೇಡ್‌ನ ಸಂಸ್ಥಾಪಕ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ 

ಬಸವನಬಾಗೇವಾಡಿ(ಫೆ.05): ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸು ವಿನ ಕೆಚ್ಚಲು ಕತ್ತರಿಸಿದರು. ಗೋಮಾತೆಗೆ ಆಗಿರುವ ಅನ್ಯಾಯವನ್ನು ನೋಡಿ ಸುಮ್ಮನೆ ಕುಳಿತುಕೊಂಡರೆ ನಾವು ಇದ್ದೂ ಸತ್ತಂತೆ. ಗೋವನ್ನು ಕಡಿದರೆ ನಾವು ಅವರ ಕೈಯನ್ನೇ ಕಡಿಯುವಂತಾಗಬೇಕು. ಈ ನಿಟ್ಟಿನಲ್ಲಿ ಹಿಂದೂ ಗಳೆಲ್ಲ ಜಾಗೃತರಾಗಬೇಕಿದೆ. ಗೋರಕ್ಷಣೆ ಮಾಡುವ ಜೊತೆಗೆ ಹಿಂದು ಯುವತಿಯರ ಮೇಲಿನ ಅತ್ಯಾಚಾರ ತಡೆಗಟ್ಟಬೇಕಿದೆ ಎಂದು ಕ್ರಾಂತಿವೀರ ಬ್ರಿಗೇಡ್‌ನ ಸಂಸ್ಥಾಪಕ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ವಿಜಯಪುರಜಿಲ್ಲೆ ಬಸವನಬಾಗೇವಾಡಿಯ ಗುರುಕೃಪಾ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶ, ಹಿಂದು ಧರ್ಮ ಸಂರಕ್ಷಣೆ, ಗೋಮಾತೆ ಸಂರಕ್ಷಣೆ ಸಂಕಲ್ಪದೊಂದಿಗೆ ನಾವು ಈ ಬ್ರಿಗೇಡ್ ಆರಂಭಿಸಿದ್ದೇವೆ. ಸಾಧು-ಸಂತರ ಮಾರ್ಗ ದರ್ಶನದಲ್ಲಿ ರಾಜ್ಯದಲ್ಲಿ ನಮ್ಮ ಬ್ರಿಗೇಡ್ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಜೀವನಪೂರ್ತಿ ಕಳೆದ ಬಿಜೆಪಿ ಗಬ್ಬೆದ್ದು ಹೋಗಿದೆ, ಸಿದ್ಧಾಂತವೇ ಇಲ್ಲದಂತಾಗಿದೆ; ಕೆ.ಎಸ್. ಈಶ್ವರಪ್ಪ

ಕಣ್ಣೀರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹಿಂದುಗಳ ಸಂಖ್ಯೆ ಶೇ.50ಕ್ಕಿಂತ ಕಡಿಮೆಯಾದರೆ ದೇಶದಲ್ಲಿ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಸಾಧ್ಯವಿಲ್ಲ. ಶೇ.51ರಷ್ಟು ಮುಸ್ಲಿಂ ಧರ್ಮದ ವರೇ ಆದರೆ ಖಂಡಿತ ಹಿಂದುಗಳು ಬದುಕಲು ಸಾಧ್ಯವಿಲ್ಲ. ಈಗಾಗಲೇ ದೇಶದ 350 ಜಿಲ್ಲೆ ಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಎಚ್ಚರಿಸಿದರು.

ಈಗಾಗಲೇ ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಲ್ಲಿ ಅನ್ಯ ಧರ್ಮದ ಪ್ರಾಬಲ್ಯ ನೋಡುತ್ತಿದ್ದೇವೆ. ಕಾಸರಗೋಡಿನಲ್ಲಿ ಹಿಂದುಗಳ ಮನೆ ಮುಂದೆಯೇ ಗೋವು ಕಡಿದು ಮಾಂಸ ಹಂಚುತ್ತಾರೆ. ಇದನ್ನು ತಪ್ಪಿಸಲು ಈಶ್ವರಪ್ಪ ಅವರು ಬ್ರಿಗೇಡ್ ಸ್ಥಾಪನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆ ಹಿಂದು ಧರ್ಮ, ದೇಶ ಸಂರಕ್ಷಣೆ ಜೊತೆಗೆ ಸಂಸ್ಕೃತಿ ಸಂರಕ್ಷಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎಂದು ಶುಭಹಾರೈಸಿದರು.
ದೇಶದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಸೇರಿದಂತೆ 20 ಪ್ರಕಾರದ ಜಿಹಾದ್ ಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಹಿಂದು ಬಾಂಧವರು ಒಂದಾಗಬೇಕಿದೆ. ಲವ್ ಜಿಹಾದ್‌ನಿಂದಾಗಿ ನೂರಾರು ಹಿಂದು ಯುವತಿ ಯರು ಕಾಣೆಯಾಗಿದ್ದಾರೆ ಎಂದು ವಿಷಾದಿಸಿದರು.

ಕ್ರಾಂತಿವೀರ ಬ್ರಿಗೇಡ್ ಕಾರ್ಯಾಧ್ಯಕ್ಷ ಕಾಂತೇಶ ಈಶ್ವರಪ್ಪ ಮಾತನಾಡಿ, ಗೋಮಾತೆ ಸಂರಕ್ಷಣೆ, ಧರ್ಮ, ದೇಶದ ಸಂರಕ್ಷಣೆ ಸೇರಿದಂತೆ ಆರು ಅಂಶಗಳ ನಿರ್ಣಯ ಮಂಡಿಸಿದರು. ಈ ನಿರ್ಣಯಗಳಿಗೆ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ ಅವರು ಅನುಮೋದಿಸಿದರು.

ಕಾಂಗ್ರೆಸ್ ಪಕ್ಷ ಒಡೆದ ಮನೆ, ಬಿಜೆಪಿ ಸತ್ತ ಪಕ್ಷ : ಕೆ.ಎಸ್‌.ಈಶ್ವರಪ್ಪ ವ್ಯಂಗ್ಯ

1008 ಸಾಧು-ಸಂತರಿಗೆ ಪಾದಪೂಜೆ

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1008 ಸಾಧು-ಸಂತರು ಆಗಮಿಸಿದ್ದರು. ಪಟ್ಟಣದ ಬಸವಜನ್ಮ ಸ್ಮಾರಕದ ಮುಂಭಾಗ 1008 ಕುಂಭಹೊತ್ತ ಮಹಿಳೆಯರು ಅವರಿಗೆ ಸ್ವಾಗತ ಕೋರಿದರು. ಬಳಿಕ, ಮೆರವಣಿಗೆಗೆ ಚಾಲನೆ ನೀಡಲಾಯಿತು. 

ಬಸವಜನ್ಮ ಸ್ಮಾರಕದಿಂದ ಆರಂಭವಾದ ಕುಂಭ ಮೆರವಣಿಗೆ ಕಾರ್ಯಕ್ರಮದ ವೇದಿಕೆ ತಲುಪಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು ಕೇಸರಿ, ಹಳದಿ, ಕೆಂಪು ಸೀರೆಯಲ್ಲಿ ಗಮನ ಸೆಳೆದರು. ಅಲ್ಲದೆ, ಸಾರವಾಡದ ಗೊಂಬೆಗಳು, ಮಹಿಳೆಯರ ಡೊಳ್ಳು ಕುಣಿತ, ಕರಡಿ ಮಜಲು, ಡೊಳ್ಳಿನ ಮೇಳ ಸೇರಿದಂತೆ ವಿವಿಧ ವಾದ್ಯ-ಮೇಳಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ನಂತರ, ಶ್ರೀಗಳ ಪಾದಪೂಜೆ ನೆರವೇರಿಸಿ, ಬ್ರಿಗೇಡ್‌ ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ನಾಡಿನ ನಾನಾ ಭಾಗಗಳಿಂದ 10ರಿಂದ 12ಸಾವಿರ ಜನರು ಆಗಮಿಸಿದ್ದರು.