ರಾಜ್ಯದಲ್ಲಿ ಹಸುಗಳ ಕೆಚ್ಚಲು ಕತ್ತರಿಸುವ ಕೃತ್ಯಗಳು ನಿತ್ಯ ನಡೆಯುತ್ತಿವೆ. ಇದನ್ನು ಪ್ರಶ್ನಿಸಬೇಕಿರುವ ಬಿಜೆಪಿ ಪಕ್ಷ ಸತ್ತು ಹೋಗಿದೆ. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು, ಕಾಂಗ್ರೆಸ್ ನಲ್ಲು ಮನೆಯೊಂದು ನೂರು ಬಾಗಿಲುನಂತೆ ಆಗಿದೆ ಎಂದು ತಿಳಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ
ಲಿಂಗಸುಗೂರು(ಜ.30): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಒಡೆದ ಮನೆಯಾದರೆ, ವಿರೋಧ ಪಕ್ಷ ಬಿಜೆಪಿ ಸತ್ತು ಹೋಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಸುಗಳ ಕೆಚ್ಚಲು ಕತ್ತರಿಸುವ ಕೃತ್ಯಗಳು ನಿತ್ಯ ನಡೆಯುತ್ತಿವೆ. ಇದನ್ನು ಪ್ರಶ್ನಿಸಬೇಕಿರುವ ಬಿಜೆಪಿ ಪಕ್ಷ ಸತ್ತು ಹೋಗಿದೆ. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು, ಕಾಂಗ್ರೆಸ್ ನಲ್ಲು ಮನೆಯೊಂದು ನೂರು ಬಾಗಿಲುನಂತೆ ಆಗಿದೆ ಎಂದು ತಿಳಿಸಿದರು.
ತಾಕತ್ತಿದ್ದರೆ ಕುಂಭ ಮೇಳಕ್ಕೆ ಹೋದ ಕಾಂಗ್ರೆಸ್ಸಿಗರನ್ನೆಲ್ಲ ಸಸ್ಪೆಂಡ್ ಮಾಡಲಿ: ಖರ್ಗೆಗೆ ಈಶ್ವರಪ್ಪ ಪ್ರಶ್ನೆ
ಬರುವ ಫೆ.4 ರಂದು ಬಸವನ ಬಾಗೇಬಾಡಿಯಲ್ಲಿ ಕಾಂತ್ರಿವೀರ ರಾಯಣ್ಣ ಬ್ರಿಗ್ರೇಡ್ ಉದ್ಘಾಟನೆ ಮಾಡಲಾಗುವುದು, ಈ ವೇಳೆ 1008 ಜನ ಸ್ವಾಮೀಜಿಗಳ ಪಾದಪೂಜೆ ಮಾಡಿ ಬ್ರಿಗ್ರೇಡ್ ಉದ್ಘಾಟನೆ ಗೊಳ್ಳಲಿದೆ. ಈ ಬ್ರೀಗ್ರೇಡ್ ನ ಸ್ಥಾಪನೆ ಉದ್ದೇಶ ಧರ್ಮ ಉಳಿಸಿ ದೇಶ ಬೆಳೆಸುವುದು ಆಗಿದೆ ಎಂದು ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ ಇಂದು ವಿಚಾರ, ಸಿದ್ಧಾಂತಕ್ಕೇ ತಿಲಾಂಜಲಿ ಇಟ್ಟು ಸ್ವಾರ್ಥ, ಒಂದೇ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣ ಮಾಡಲಾಗುತ್ತಿದೆ. ಇದರ ಜೊತೆಗೆ ಬಿಜೆಪಿಯಲ್ಲಿ ಹಿಂದುತ್ವ ಕಣ್ಮರೇ ಆಗುತ್ತದೆ. ಪಕ್ಷದಲ್ಲಿನ ಬೆಳವಣಿಗೆಗಳನ್ನು ಬಿಜೆಪಿ ಹೈಕಮಾಂಡ್ ನೋಡುತ್ತದೆ. ಅತಿ ಶೀಘ್ರದಲ್ಲಿ ಪಕ್ಷ ಶುದ್ಧೀಕರಣವಾಗುತ್ತದೆ ಹೇಳಿದರು.
ಬಳ್ಳಾರಿ, ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಇದ್ದ ಗೊಂದಲ ಶೀಘ್ರದಲ್ಲೇ ಬಗೆ ಹರಿಯುತ್ತದೆ, ಒಂದು ವೇಳೆ ಪಕ್ಷ ಶುದ್ಧೀಕರಣ ವಾಗದಿದ್ದರೆ, ನಾನು ಬಿಜೆಪಿ ಪಕ್ಷಕ್ಕೆ ಬರುವುದಿಲ್ಲ, ಆದರೂ ಬಿಜೆಪಿ ಪಕ್ಷ ನನ್ನ ತಾಯಿ ಸಮಾನ ಎಂದು ಹೇಳಿದರು.
