ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದ್ದರೆ, ತಮಿಳುನಾಡಿದ ರೆಡ್‌ಅಲರ್ಟ್‌ ನೀಡಿದೆ.

ಬೆಂಗಳೂರು (ಮೇ.16): ಕರ್ನಾಟಕದಲ್ಲಿ ಮೇ 18 ರಿಂದ 20ರವರೆಗೆ ಅಂದರೆ ಮೂರು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಈ ಮೂರು ದಿನಗಳ ಕಾಲ ಕರ್ನಾಟಕದ ದಕ್ಷಿಣದಲ್ಲಿ 115.5-204.5 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದ್ದಲ್ಲದೆ, ಆರೆಂಜ್‌ ಅಲರ್ಟ್‌ ಅನ್ನೂ ನೀಡಿದೆ. ಜನರು ಆದಷ್ಟು ಸುರಕ್ಷಿತವಾಗಿರುವಂತೆಯೂ ತಿಳಿಸಿದೆ. ಅದೇ ರೀತಿ ನೆರೆಯ ರಾಜ್ಯ ತಮಿಳುನಾಡಿಗೆ ಭಾರೀ ಮಳೆಯ ರೆಡ್‌ ಅಲರ್ಟ್‌ ಅನ್ನು ಸರ್ಕಾರ ನೀಡಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮೇ 16 ರಂದು 204.5 ಮಿಮೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮೇ 17 ರಿಂದ 20ರ ಒಳಗೆ 115.5-204.5 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. 2024 ರ ಮೇ 22 ರವರೆಗೆ ದಕ್ಷಿಣ ಪೆನಿನ್ಸುಲಾರ್ ಭಾರತದಲ್ಲಿ ಮುಂದುವರಿಯುವ ಸಾಧ್ಯತೆಯಿರುವ ಆರ್ದ್ರ ವಾತಾವರಣದು ಭಾರೀ ಮಳೆಗೆ ಕಾರಣವಾಗಬಹುದು ಎಂದು ಅಂದಾಜಿಸಿದೆ. 6 ಮತ್ತು 20 ರಂದು ತಮಿಳುನಾಡಿನಲ್ಲಿ ಮತ್ತು ಮೇ 20 ರಂದು ಕೇರಳದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಬುಧವಾರ ಸಂಜೆಯಿಂದ ಮೋಡ ಕವಿದ ವಾತಾವರಣವಿದ್ದರೆ, ಗುರುವಾರ ಬೆಳಗ್ಗಿನಿಂದ ಸೂರ್ಯ ಕಂಡಿಲ್ಲ. 

ತಮಿಳುನಾಡು-ಪುದುಚೇರಿ-ಕಾರೈಕಲ್, ಕೇರಳ-ಮಾಹೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ, 16-20ರ ಅವಧಿಯಲ್ಲಿ ದಕ್ಷಿಣ ಒಳ ಕರ್ನಾಟಕದಲ್ಲಿ ಮಳೆಯಾಗಲಿದ್ದರೆ, ಕರಾವಳಿ ಕರ್ನಾಟಕದಲ್ಲಿ ಮೇಲ 17 ರಿಂದ 19ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ರಾಯಲಸೀಮಾದಲ್ಲಿ ಮೇ 16ಕ್ಕೆ ಹಾಗೂ ಲಕ್ಷದ್ವೀಪದಲ್ಲಿ ಮೇ 19-10ರಂದು ಭಾರೀ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ.

ಮೇ.31ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶ: ಈ ವರ್ಷ ಹಿಂದಿಗಿಂತ ಅಧಿಕ ಮಳೆ, ಐಎಂಡಿ

17-19 ರ ಅವಧಿಯಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ; ಮೇ 18-20, 2024 ರ ಅವಧಿಯಲ್ಲಿ ಕೇರಳ ಮತ್ತು ಮಾಹೆ, ಮೇ 18-20ರವೇಳೆಗೆ ದಕ್ಷಿಣ ಒಳಗಿನ ಕರ್ನಾಟಕದಲ್ಲಿ ಮಳೆಯಾಗಲಿದೆ. ಮುಂದಿನ 5 ದಿನಗಳಲ್ಲಿ ವಾಯುವ್ಯ ಭಾರತ ಮತ್ತು ಬಿಹಾರದಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮತ್ತು ಪೂರ್ವ ಮತ್ತು ಮಧ್ಯ ಭಾರತದಲ್ಲಿ 18 ಮೇ, 2024 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

8 ದಿನ ಕರ್ನಾಟಕಕ್ಕೆ ಉಷ್ಣ ಅಲೆ ಭೀತಿ, ಮೂರು ತಿಂಗಳು ಆತಂಕ..!

Scroll to load tweet…