ನೂರಾರು ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತರ ವಶದಲ್ಲಿರುವ ಕೆ.ಆರ್‌. ಪುರ ತಹಸೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಆದೇಶ ಮಾಡಿದೆ.

ಬೆಂಗಳೂರು (ಜು.1) ನೂರಾರು ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತರ ವಶದಲ್ಲಿರುವ ಕೆ.ಆರ್‌. ಪುರ ತಹಸೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಆದೇಶ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

500 ಕೋಟಿ ರು. ಮೌಲ್ಯದಷ್ಟುಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಅಜಿತ್‌ ರೈ ವಿರುದ್ಧ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ರೀತ್ಯಾ ದೂರು ದಾಖಲಿಸಿಕೊಂಡು ಘನ 23ನೇ ಹೆಚ್ಚುವರಿ ನ್ಯಾಯಾಲಯದಿಂದ ಆಗತ್ಯವಾದ ಶೋಧನಾ ವಾರೆಂಟ್ ಪಡೆದುಕೊಂಡು ತಹಸೀಲ್ದಾರ ನಿವಾಸಗಳನ್ನು ಶೋಧಿಸಿ ಆದಾಯಕ್ಕಿಂತ ಮೀರಿದ ಆಸ್ತಿ ಪತ್ತೆ ಹಚ್ಚಲಾಗಿತ್ತು. ಈ ಹಿನ್ನೆಲೆ ತಹಸೀಲ್ದಾರ್ 7 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ನಗರದ 78ನೇ ಸಿಸಿಎಚ್‌ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರಿದರೆ ತನಿಖೆಗೆ ಅಡ್ಡಿ ಮಾಡುವ ಸಾಧ್ಯತೆ ಹಿನ್ನೆಲೆ ಕೂಡಲೇ ಅಮಾನತ್ತಿನಲ್ಲಿಡುವಂತೆ ಆದೇಶದಲ್ಲಿ ತಿಳಿಸಿದೆ. 

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಇಂದು ವಿಚಾರಣೆಗೆ ಬರಲು ಅಜಿತ್ ರೈಗೆ ಲೋಕಾಯುಕ್ತರಿಂದ ನೋಟಿಸ್

ಈ ಹಿಂದೆಯೂ ಸರ್ಕಾರ ಅಮಾನತ್ತು ಮಾಡಿತ್ತು:

ಈ ಹಿಂದೆ ಕೆ.ಆರ್‌. ಪುರದ ತಹಸೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್‌ ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ರಾಜ್ಯ ಸರ್ಕಾರ ಅಮಾನತು ಮಾಡಿತ್ತು.

Lokayukta raids: ನಿರ್ಮಿತಿ ಕೇಂದ್ರದ ಗಂಗಾಧರ್‌ ಬಳಿ ₹3.75 ಕೋಟಿ ಆಸ್ತಿ ಪತ್ತೆ!

ಕೆಲವು ದಿನಗಳ ಹಿಂದೆ ಅಮಾನತು ಆದೇಶ ಹಿಂಪಡೆದು ಮತ್ತೆ ಕೆ.ಆರ್‌.ಪುರ ತಹಸೀಲ್ದಾರ್‌ ಆಗಿ ಬಂದಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ಇದೀಗ ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದ ಆದೇಶಿಸಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.