Asianet Suvarna News Asianet Suvarna News

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಇಂದು ವಿಚಾರಣೆಗೆ ಬರಲು ಅಜಿತ್ ರೈಗೆ ಲೋಕಾಯುಕ್ತರಿಂದ ನೋಟಿಸ್

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆಆರ್‌ ಪುರ ತಹಸೀಲ್ದಾರ್ ಅಜಿತ್ ಕುಮಾರ ರೈ ಸೇರಿ ನಾಲ್ವರು ಸಹೋದರರಿಗೆ ವಿಚಾರಣೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ ನೀಡಿದೆ.

Tehsildar Ajit Rai's hearing today in illegal property case by karnataka lokayukta rav
Author
First Published Jun 30, 2023, 8:45 AM IST

ಬೆಂಗಳೂರು (ಜೂ.30) ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆಆರ್‌ ಪುರ ತಹಸೀಲ್ದಾರ್ ಅಜಿತ್ ಕುಮಾರ ರೈ ಸೇರಿ ನಾಲ್ವರು ಸಹೋದರರಿಗೆ ವಿಚಾರಣೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ ನೀಡಿದೆ.

ಇಂದು ಮುಂಜಾನೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ನೊಟೀಸ್. ಅಜಿತ್ ರೈ ಸಹೋದರರಾದ ಆಶಿಕ್ ರೈ, ಸ್ನೇಹಿತರಾದ ಗೌರವ ,ಹರ್ಷವರ್ಧನ್ ಸೇರಿದಂತೆ ನಾಲ್ವರಿಗೂ ನೋಟಿಸ್ ನೀಡಿರುವ ಲೋಕಾಯುಕ್ತ.

ಕೆ.ಆರ್.ಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಲಕ್ಷ..ಲಕ್ಷ ನಗದು ಸಹಿತ ಚಿನ್ನಾಭರಣ ಪತ್ತೆ

 

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಹಕಾರನಗರದ ಅಜಿತ್  ನಿವಾಸ ಸೇರಿ 12 ಕಡೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು. ಪರಿಶೀಲನೆ ವೇಳೆ  ಮನೆಯಲ್ಲಿ ಕೋಟ್ಯಂತರ ರೂ 11 ಲಕ್ಸುರಿ ಕಾರುಗಳು, ಭೂದಾಖಲಾತಿ ಪತ್ರಗಳು, ಲವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರೋ ಬಗ್ಗೆಯೂ ದಾಖಲೆಗಳು ಪತ್ತೆಯಾಗಿವೆ. ದೇಶ-ವಿದೇಶಿ ಬ್ರ್ಯಾಂಡ್ ನ ಮದ್ಯಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಜಿತ್ ರೈ ನ ಬಂಧಿಸಿದ್ದ ಅಧಿಕಾರಿಗಳು

ಕೋಟ್ಯಂತರ ರೂ ಅಕ್ರಮ ಆಸ್ತಿ ಗಳಿಸಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ Tahsildar Ajith Rai ಯಾರು, ಹಿನ್ನೆಲೆ ಏನು?

ಇಂದು ಬೆಳಗ್ಗೆ 11 ಗಂಟೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ದತೆ. ಬಳಿಕ  10 ದಿನಗಳ ಕಾಲ ಅಜಿತ್ ನನ್ನ ಪೊಲೀಸ್ ವಶಕ್ಕೆ ಪಡೆಯಲು  ಸಿದ್ಧತೆ ನಡೆಸಿರುವ ಲೋಕಾಯುಕ್ತ ಪೊಲೀಸರು. ಸಹೋದರರು, ಸ್ನೇಹಿತರ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿರುವ ಹಿನ್ನೆಲೆ ಸಹೋದರ ಹಾಗೂ ಸ್ನೇಹಿತರಿಗೂ ಡ್ರಿಲ್ ಮಾಡಲೂ ಖಾಕಿ ಸಿದ್ದತೆ

ಹೀಗಾಗಿ ಸದ್ಯ ನಾಲ್ವರಿಗೆ ನೊಟೀಸ್ ಕೊಟ್ಟು ವಿಚಾರಣೆಗೆ ಮುಂದಾದ ಲೋಕಾಯುಕ್ತ

Follow Us:
Download App:
  • android
  • ios