ಕನ್ನಡದ ಕಾಲು ಹಿಡಿದುಕೊಂಡ್ರೆ, ನಮ್ಮನ್ನ ಕಾಪಾಡುತ್ತೆ: ಮೈಸೂರು ದಸರಾ ಉದ್ಘಾಟಕ ಹಂಸಲೇಖ

ಮೈಸೂರು ದಸರಾ ಎನ್ನುವುದು ನಾಲ್ವಡಿ ಕೃಷ್ಣರಾಜ ಒಡೆಯರ ಕಸನು. ಅವರ ಕನಸನ್ನ ತಡೆದುಕೊಳ್ಳೋ ವಯಸ್ಸು ನನ್ನದು. ಕನ್ನಡದ ಕಾಲು ಹಿಡಿದುಕೊಂಡ್ರೆ, ಅದು ನಮ್ಮನ್ನ ಕಾಪಾಡುತ್ತೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

If we hold Kannada feet it will save us Mysore Dasara Inaugural Hamsalekha info sat

ಬೆಂಗಳೂರು (ಆ.29): ಮೈಸೂರು ದಸರಾ ಎನ್ನುವುದು ನಾಲ್ವಡಿ ಕೃಷ್ಣರಾಜ ಒಡೆಯರ ಕಸನು. ಅವರ ಕನಸನ್ನ ತಡೆದುಕೊಳ್ಳೋ ವಯಸ್ಸು ನನ್ನದು. ಕನ್ನಡದ ಕಾಲು ಹಿಡಿದುಕೊಂಡ್ರೆ, ಅದು ನಮ್ಮನ್ನ ಕಾಪಾಡುತ್ತೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯ ಸರ್ಕಾರಕ್ಕೆ ಎಲ್ಲಾ ಕಲಾವಿದರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ತಿಳಿಸಿದರು.

ಕನ್ನಡ ನಾಡಿನ 413ನೇ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಲೇಖ ಅವರು, ದಸರಾ ಅನ್ನೋದು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕನಸು. ಅವರ ಕನಸನ್ನ ತಡೆದುಕೊಳ್ಳೋ ವಯಸ್ಸು ನನ್ನದು. ರಾಜ್ಯ ಸರ್ಕಾರಕ್ಕೆ ಎಲ್ಲಾ ಕಲಾವಿಧರ ಪರವಾಗಿ ಧನ್ಯವಾದ ಹೇಳುತ್ತೇನೆ. ನಾನು ಅನಾರೋಗ್ಯ ದಲ್ಲಿದ್ದಾಗ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನನಗೆ ಆರೋಗ್ಯ ವಿಚಾರಿಸಿದ್ದರು. ನನಗೆ ಈ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯಾವಾದ ಹೇಳುತ್ತೇನೆ ಎಂದರು.

ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಆಯ್ಕೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಇಡೀ ಕನ್ನಡಿಗರು ಕನ್ನಡ ಕಾಪಾಡಬೇಕು:  ಮೈಸೂರು ದಸರಾ ಉದ್ಘಾಟಕರಾಗಿ ನಾನು ಕಲಾ ಪ್ರತಿನಿಧಿ ಆಗಿದ್ದೇನೆ. ಅವರ ಪರವಾಗಿ ನಾನು ದಸರಾ ದೀಪ ಹಚ್ಚುತ್ತೇನೆ. ನನಗೆ ದಸರಾ ಹಾಡನ್ನ ಮಾಡೋಕೆ ಈಗ ಆಸೆ ಉಕ್ಕುತ್ತಾ ಇದೆ. ಈಗ ಒಂದು ಸಾಲು ಬರ್ತಿದೆ. ಅದನ್ನ ಹೇಳುತ್ತೇನೆ. 'ಬದುಕಿದು ಕನ್ನಡ ಬಿಕ್ಷೆ. ಇಲ್ಲಿ ಸಮರಸವೇ ನಮ್ಮ ರಕ್ಷೆ' ಎಂದು ಒಂದು ಸಾಲು ಹೇಳಿದರು. ನಂತರ, ಸಂವಿಧಾನ ನಮಗೆ ಸ್ವಾತಂತ್ರ್ಯ ಕೊಟ್ಟಿದೆ. ಕನ್ನಡದ ಕಾಲು ಹಿಡಿದುಕೊಂಡರೆ, ಅದು ನಮ್ಮನ್ನ ಕಾಪಾಡುತ್ತೆ. ಇಡೀ ಕನ್ನಡಿಗರು ಕನ್ನಡವನ್ನ ಕಾಪಾಡಬೇಕು. ಇನ್ನು ಮುಂದಿನ ದಿನಗಳಲ್ಲಿ ನಾನು ಜಾನಪದ ವಿಶ್ವವಿದ್ಯಾಲಯಕ್ಕೆ ಕಂಟ್ರಬ್ಯೂಷನ್ ಕೊಡುತ್ತೇನೆ ಎಂದು ತಿಳಿಸಿದರು.

ಜಯ ಹೇ ನಾಲ್ವಡಿ ಕಾರ್ಯಕ್ರಮ ಮಾಡುವ ಆಸೆಯಿದೆ: ಇನ್ನು ದರಸಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದ ಮುಖ್ಯಮಂತ್ರಿಗಳ ಆಶಯವನ್ನ ನಾನು ಈಡೇರಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ಮಾಡಿ ನನಗೆ ಆಹ್ವಾನಿಸಿದ್ದರು. ಅವಿರೋಧವಾಗಿ ನನ್ನ ಹೆಸರನ್ನ ಆಯ್ಕೆ ಮಾಡಿದ್ದಾರೆ. ಇನ್ನು ದಸರಾ ಮಹೋತ್ಸವದಲ್ಲಿ 'ಜಯ ಹೇ ನಾಲ್ವಡಿ' ಅನ್ನೋ ಕಾರ್ಯಕ್ರಮ ಮಾಡಬೇಕು ಅನ್ನೋ ಆಸೆ ಇದೆ. ಇದರಲ್ಲಿ ನನ್ನ ಸಾಹಿತ್ಯ ಸಂಗೀತ ಇರುತ್ತದೆ.ವ ಇದಕ್ಕೆ ಸಿಎಂ ಅವಕಾಶ ಕೊಡಬೇಕು ಅಷ್ಟೆ ಎಂದು ಮನವಿ ಮಾಡಿಕೊಂಡರು.

ವಿಜಯನಗರ ಸಾಮ್ರಾಜ್ಯ ನೆನಪಿಸಿಕೊಂಡ ಹಂಸಲೇಖ: ನಾನು ಚಿಕ್ಕವನಿದ್ದಾಗ ಮೈಸೂರು ದಸರಾ ನೋಡೋದಕ್ಕೆ ಹೋಗಿದ್ದೆನು. ಆಗ ನಮ್ಮಪ್ಪನ ಹೆಗಲ ಮೇಲೆ ಕುಳಿತುಕೊಂಡು ವೀಕ್ಷಣೆ ಮಾಡಿದ್ದೆನು. ಅದೊಂದು ಅದ್ಭುತವಾದ ನೆನಪು ನನಗೆ. ದರಸಾ ಅಂದ ಕೂಡ್ಲೆ ವಿಜಯನಗರದಿಂದ ಅದರ ವೈಭವ ಶುರುವಾಗುತ್ತದೆ ಎಂದು ತಿಳಿಸಿದರು. 

ಮನೆ ಮುಂದೆ 'ನಾ ಯಜಮಾನಿ' ರಂಗೋಲಿ ಬಿಡಿಸಿ, ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಿರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕನ್ನಡ ಚಿತ್ರಗಳ ಸಂಗೀತ ಮಾಂತ್ರಿಕ: ಕನ್ನಡ ಚಿತರರಂಗದಲ್ಲಿ ಗಂಗರಾಜು ಎಂಬ ಮೂಲ ಹೆಸರಿನ ಹಂಸಲೇಖ ಈಗ ನಾದಬ್ರಹ್ಮಎಂದೇ ಪ್ರಸಿದ್ಧಿ ಆಗಿದ್ದಾರೆ. ಕನ್ನಡದಲ್ಲಿ ಎಂದೂ ಮರೆಯಲಾಗದ ಅಪರೂಪದ ಹಾಡುಗಳನ್ನು ನೀಡಿದ ಸಾಹಿತಿ ಮತ್ತು ಸಂಗೀತ ನಿರ್ದೇಶಕರಾಗಿದ್ದಾರೆ. ಹಂಸಲೇಖ ಅವರು 1951ರ ಜೂನ್ 23ರಂದು ಹುಟ್ಟಿದ್ದು, 1973ರಲ್ಲಿ ತ್ರಿವೇಣಿ ಚಿತ್ರದ 'ನೀನಾ ಭಗವಂತ' ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು. ಈವರೆಗೆ 500ಕ್ಕೂ ಅಧಿಕ ಕನ್ನಡ ಚಿತ್ರಗಳಿಗೆ ಸಂಗೀತ, ಸಾಹಿತ್ಯ ಒದಗಿಸಿದ್ದಾರೆ. ಇವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. 

Latest Videos
Follow Us:
Download App:
  • android
  • ios