Asianet Suvarna News Asianet Suvarna News

ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಆಯ್ಕೆ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಡದೇವತೆ ಚಾಮುಂಡೇಶ್ವರಿ ಮಡಿಲಿನಲ್ಲಿರುವ ಮೈಸೂರಿನ ದಸರಾ ಉತ್ಸವದ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಅವರನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

Kannada Musician Hamsalekha selected to Mysuru Dasara inauguration CM Siddaramaiah info sat
Author
First Published Aug 29, 2023, 11:23 AM IST

ಮೈಸೂರು (ಆ.29): ಕರ್ನಾಟಕದ ನಾಡದೇವತೆ ಚಾಮುಂಡೇಶ್ವರಿ ಮಡಿಲಿನಲ್ಲಿರುವ ಮೈಸೂರಿನ ದಸರಾ ಉತ್ಸವದ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಅವರನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾಡಿನ 413ನೇ ಮೈಸೂರು ದಸರಾ ಮಹೋತ್ಸವವನ್ನು ಖ್ಯಾತ ಸಾಹಿತಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಉದ್ಘಾಟಿಸಲಿದ್ದಾರೆ. ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವ ಮೈಸೂರಿನ ದಸರಾವನ್ನು (Mysore Dasara) ಈ ಈ ಬಾರಿ ಅದ್ಧೂರಿಯಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು. ಇನ್ನು ಅಕ್ಟೋಬರ್ 15ರ ಬೆಳಗ್ಗೆ 10.15ರಿಂದ 10.30ರ ನಡುವಿನ ಮುಹೂರ್ತದಲ್ಲಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಕಳೆದ ಬಾರಿಯ 412ನೇ ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದ್ದರು.. ಈ ಬಾರಿ ಈ ಗೌರವ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಒಲಿದು ಬಂದಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದರೋಡೆಯಿಂದ ತಪ್ಪಿಸಿಕೊಳ್ಳಬೇಕೇ? ಈ ನಿಯಮ ಪಾಲಿಸಿ: ಸಂಸದ ಪ್ರತಾಪ್‌ಸಿಂಹ

ಸುತ್ತೂರು ಶ್ರೀಗಳ ಆಯ್ಕೆಗೆ ಚಿಂತನೆ ನಡೆದಿತ್ತು: ಇನ್ನು ಮೈಸೂರು ದಸರಾ ಉತ್ಸವದ ಬಗ್ಗೆ ಮೊದಲ ಬಾರಿ ಸಭೆಯನ್ನು ನಡೆಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಸುತ್ತೂರು ಮಠದ ದೇಶಿಕೇಂದ್ರ ಶ್ರೀಗಳನ್ನು ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಲು ಚಿಂತನೆ ಮಾಡಲಾಗಿತ್ತು. ಆದರೆ, ಇದೇ ಚಿಂತನೆ ಅಂತಿಮವಲ್ಲ. ಅಂತಿಮವಾಗಿ ಶೀಘ್ರವೇ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಸುತ್ತೂರು ಶ್ರೀಗಳು ಅಥವಾ ಇನ್ನಾರಾದರೂ ಆಗಿರಬಹುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ, ಮೈಸೂರು ದಸರಾ ಉತ್ಸವ ಸಮಿತಿಯಿಂದ ಅಂತಿಮವಾಗಿ ನಾದಬ್ರಹ್ಮ ಹಂಸಲೇಖ ಅವರನ್ನು ಆಯ್ಕೆ ಮಾಡಲಾಗಿದೆ.

ಅದ್ಧೂರಿ ದಸರಾ ಮಹೋತ್ಸವ: ಇನ್ನು ಕೋವಿಡ್‌ಗಿಂತ ಮುಂಚೆ ದಸರಾ ಮಹೋತ್ಸವವನ್ನು ಭರ್ಜರಿಯಾಗಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ, 2020ರಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದು, ನಂತರದ ವರ್ಷಗಳಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿತ್ತು. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಅದ್ಧೂರಿಯಾಗಿ ಹಾಗೂ ಹಿಂದಿನ ವೈಭವಗಳು ಮರುಕಳಿಸುವ ನಿಟ್ಟಿನದಲ್ಲಿ ಆಚರಣೆ ಮಾಡಬೇಕು ಎಂದು ಕಾಂಗ್ರೆಸ್‌ ಸರ್ಕಾರ ನಿರ್ಧರಿಸಲಾಗಿದೆ. ಆದ್ದರಿಂದ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದೆ. ಎಂದಿನಂತೆ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಇರಲಿದೆ. 

ಕನ್ನಡ ನಾಡಿನ ಪ್ರತಿಷ್ಠೆಯ ವಿಐಎಸ್ಎಲ್ ಕಾರ್ಖಾನೆ ಪುನಾರಂಭ: ಸಂಸದ ರಾಘವೇಂದ್ರ ವಿಡಿಯೋ ಶೇರ್‌

ಮೈಸೂರು ದಸರಾ ಉದ್ಘಾಟಕರಾಗಿ ನನ್ನನ್ನು ಆಯ್ಕೆ ಮಾಡಿರುವ ಸುದ್ದಿ ಕೇಳಿ ಖುಷಿ ಆಯ್ತು. ಹಂಸಲೇಖಗೆ ನಾನೇ (ತಮಗೆ ತಾವೇ) ಚಪ್ಪಾಳೆ ಹೊಡಿತೀನಿ. ಇದೊಂದು ಕನಸು. 
- ಹಂಸಲೇಖ, ಸಂಗೀತ ನಿರ್ದೇಶಕ

Follow Us:
Download App:
  • android
  • ios