Asianet Suvarna News Asianet Suvarna News

ಒಕ್ಕಲಿಗರು ಬೆಂಬಲಿಸಿದರೆ ಇನ್ನಷ್ಟು ಎತ್ತರಕ್ಕೆ ಬೆಳೆವೆ: ಡಿಕೆ ಶಿವಕುಮಾರ

ಒಕ್ಕಲಿಗ ಸಮಾಜದ ಸಹಕಾರದಿಂದ ನಾನು ಉಪಮುಖ್ಯಮಂತ್ರಿ ಹುದ್ದೆಯವರೆಗೂ ಬಂದಿದ್ದೇನೆ. ಇದೇ ರೀತಿ ಸಮಾಜದ ಬೆಂಬಲ, ಸಹಕಾರ ಮುಂದುವರೆದರೆ ಇನ್ನಷ್ಟು ಎತ್ತರಕ್ಕೆ ಹೋಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

If Vakkaliga community supports me I will grow even higher says DK Shivakumar at bengaluru rav
Author
First Published Jan 20, 2024, 7:23 AM IST

ಬೆಂಗಳೂರು (ಜ.20) : ಒಕ್ಕಲಿಗ ಸಮಾಜದ ಸಹಕಾರದಿಂದ ನಾನು ಉಪಮುಖ್ಯಮಂತ್ರಿ ಹುದ್ದೆಯವರೆಗೂ ಬಂದಿದ್ದೇನೆ. ಇದೇ ರೀತಿ ಸಮಾಜದ ಬೆಂಬಲ, ಸಹಕಾರ ಮುಂದುವರೆದರೆ ಇನ್ನಷ್ಟು ಎತ್ತರಕ್ಕೆ ಹೋಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಫಸ್ಟ್ ಸರ್ಕಲ್ ಸೊಸೈಟಿ (First Circle Society) ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಉದ್ಯಮಿ ಒಕ್ಕಲಿಗ-2024’ ಸಮಾವೇಶವನ್ನು (Entrepreneur Okkaliga-2024' conference) ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅ‍ವರು, ಸಮಾಜದಿಂದ ಮುಂದೆ ಬಂದಿರುವ ನಾನು ಸಮಾಜಕ್ಕೆ ವಾಪಸ್ ಏನಾದರೂ ಕೊಡಬೇಕು. ಈ ಸಮಾವೇಶದ ಮೂಲಕ ಎಲ್ಲರ ಭೇಟಿ ಸಾಧ್ಯವಾಗಿದೆ. ಸಮುದಾಯದವರಿಗೆ ಎಲ್ಲಾ ರೀತಿಯ ಸಹಾಯ, ಸಹಕಾರ, ಮಾರ್ಗದರ್ಶನ ಮಾಡುತ್ತೇನೆ. ಸಮಾಜದಿಂದ ನನಗೆ ಇನ್ನಷ್ಟು ಬೆಂಬಲ, ಸಹಕಾರ ಸಿಗಬೇಕು. ಆಗ ನಾನು ಇನ್ನಷ್ಟು ಎತ್ತರಕ್ಕೆ ಹೋಗಲು ಸಾಧ್ಯವಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಕಲಬುರಗಿಗೆ ಬಂದ್ರೂ ಸ್ವಾಗತಕ್ಕೆ ಬಾರದ ಪ್ರಿಯಾಂಕ್ ಖರ್ಗೆ!

ಒಕ್ಕಲಿಗ ಸಂಘದ ಹುದ್ದೆಗಾಗಿ ಮಾತ್ರ ಪೈಪೋಟಿಗೆ ಇಳಿಯುವ ಬದಲು, ಇನ್ನೂ ನಾಲ್ಕು ಮೆಡಿಕಲ್ ಕಾಲೇಜು ಸ್ಥಾಪಿಸುವ ಕಡೆ ಅಧಿಕಾರಸ್ಥರು ಯೋಚಿಸಬೇಕು. ಶಿಕ್ಷಣ, ಉದ್ಯಮ, ಕೈಗಾರಿಕೆ, ಸೇವಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಒಕ್ಕಲಿಗರು ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ವ್ಯಾಪಾರ, ಉದ್ಯಮ ಮಾಡುವವರು ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಮತ್ತು ಎಸ್.ಎಂ. ಕೃಷ್ಣ ಅವರು ಬೆಂಗಳೂರಿನ ಬೆಳವಣಿಗೆಗೆ ಅಗಾಧ ಕೊಡುಗೆ ನೀಡಿದ್ದಾರೆ. ಇಲ್ಲದಿದ್ದರೆ ಬೇರೆ ನಗರ ರಾಜ್ಯದ ರಾಜಧಾನಿ ಆಗಿರುತ್ತಿತ್ತು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಒಕ್ಕಲಿಗರು ಬದಲಾವಣೆಯನ್ನು ಅಳವಡಿಸಿಕೊಂಡು ಸುಧಾರಣೆ ಆಗಬೇಕು. ಹಿಂದೆ ನೂರು ಜನರಿಗೆ ಅನ್ನ ನೀಡಿದಂತೆ ಈಗಿನ ಕಾಲಕ್ಕೆ ಕೈಗಾರಿಕೆ, ಉದ್ಯಮ ಸ್ಥಾಪಿಸಿ ನೂರಾರು ಜನರಿಗೆ ಕೆಲಸ ನೀಡುವಂತಾಗಬೇಕು ಎಂದು ಹೇಳಿದರು.

ಕೆಲ ಸ್ವಾಮೀಜಿಗಳಿಂದ ರಾಜಕೀಯಕ್ಕಾಗಿ ಶ್ರೀ ರಾಮಮಂದಿರ ಬಗ್ಗೆ ಅಪಸ್ವರ ಸಂಸದ ಪ್ರತಾಪ್ ಸಿಂಹ ಕಿಡಿ

ಬೇರೆಯವರ ಎದುರು ನಾವು ಕೈ ಚಾಚುವಂತಿದ್ದರೆ ಮಾತ್ರ ಜಾತಿ, ಧರ್ಮವನ್ನು ಮರೆಮಾಚಲು ಪ್ರಯತ್ನಿಸುತ್ತೇವೆ. ಆದರೆ, ನಾವೇ ಅನ್ಯರಿಗೆ ಕೆಲಸ ಕೊಡುವಂತಿದ್ದರೆ, ಬೆಳೆಸುವಂತಿದ್ದರೆ ನಮ್ಮ ಜಾತಿ, ಧರ್ಮವನ್ನು ಮರೆಮಾಚುವ ಅಗತ್ಯ ಬರುವುದಿಲ್ಲ. ಯಾರನ್ನೂ ತುಳಿಯದೇ, ಇರುವ ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು. ಬೇರೆ ಸಮುದಾಯದವರನ್ನೂ ಬೆಳೆಸಬೇಕು ಎಂದು ಸ್ವಾಮೀಜಿ ನುಡಿದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿದರು. ಇದೇ ವೇಳೆ ಒಕ್ಕಲಿಗ ಉತ್ಪಾದಕರು ಮತ್ತು ಗ್ರಾಹಕರಿಗೆ ವೇದಿಕೆ ಕಲ್ಪಿಸುವ FCBUY ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

Latest Videos
Follow Us:
Download App:
  • android
  • ios