‘ಮಗಳ ಸಾಕಲು ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಸುಪರ್ದಿ ಕೇಳುವಂತಿಲ್ಲ': ಹೈಕೋರ್ಟ್

ಮಗಳಿಗೆ ಜೀವಿಸಲು ಸೌಹಾರ್ದಯುತ ವಾತಾವರಣ ಕಲ್ಪಿಸದ ತಂದೆಗೆ ಆಕೆಯನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಕೋರಲು ಅರ್ಹತೆಯಿಲ್ಲ ಎಂದು ಹೈಕೋರ್ಚ್‌ ಅಭಿಪ್ರಾಯಪಟ್ಟಿದೆ.

If there is no proper arrangement to support the daughter then  cannot be asked highcourt vedict rav

ಬೆಂಗಳೂರು (ಮೇ.12) : ಮಗಳಿಗೆ ಜೀವಿಸಲು ಸೌಹಾರ್ದಯುತ ವಾತಾವರಣ ಕಲ್ಪಿಸದ ತಂದೆಗೆ ಆಕೆಯನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಕೋರಲು ಅರ್ಹತೆಯಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತನ್ನ ಮತ್ತು ಪತ್ನಿಯೊಂದಿಗೆ ಸಮಾನ ದಿನಗಳ ಕಾಲ ಮಗಳು ನೆಲೆಸಲು ಅವಕಾಶ ಒದಗಿಸುವಂತೆ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿದ್ಯಾರ್ಥಿಗಳು ಕಡಿಮೆ ಎಂಬ ಕಾರಣಕ್ಕೆ ಕಾಲೇಜು ಸ್ಥಳಾಂತರ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಈ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ (ಮಗು 4 ವರ್ಷವಿದ್ದ ಸಮಯದಿಂದ) ತಂದೆ-ತಾಯಿ ಜಗಳವಾಡುತ್ತಿರುವುದನ್ನು ಹೆಣ್ಣು ಮಗು ನೋಡುತ್ತಿದೆ. ಆಕೆಗೆ ಈಗ 9 ವರ್ಷ. ಪೋಷಕರ ಸಮಸ್ಯೆ ಅರ್ಥ ಮಾಡಿಕೊಳ್ಳುವ ಬೌದ್ಧಿಕ ಶಕ್ತಿ ಮಗುವಿಗೆ ಇರುವುದಿಲ್ಲ. ಮಗುವಿನ ಸಾಮಾಜಿಕ, ಭೌತಿಕ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೋಷಕರು ಸದಾಕಾಲ ಶ್ರಮಿಸಬೇಕು ಎಂದು ಹೇಳಿದೆ.

ಅಲ್ಲದೆ, ತನ್ನೊಂದಿಗೆ ಮಗಳು ಉತ್ತಮ ಬಾಂಧವ್ಯ ಹೊಂದಿರುವುದನ್ನು ಪ್ರತಿಪಾದಿಸಲು ಮಗಳ ಜೊತೆಗೆ ಹಾಸಿಗೆಯಲ್ಲಿ ಮಲಗಿರುವ ಫೋಟೋಗಳನ್ನು ಅರ್ಜಿದಾರ ತೆಗೆಸಿದ್ದಾರೆ. ಆದರೆ, ಆ ಫೋಟೋಗಳನ್ನು ಅಪರಿಚಿತ ವ್ಯಕ್ತಿ ಕ್ಲಿಕ್ಕಿಸಿದ್ದಾರೆ. ಆತ ಸಹ ತಂದೆಯ ಹಾಸಿಗೆಯಲ್ಲೇ ಮಲಗುತ್ತಾರೆ. ತಂದೆ ಇರದ ಸಮಯದಲ್ಲಿ ಮಗಳನ್ನು ಆರೈಕೆ ಮಾಡಲು ಯಾರೂ ಇರುವುದಿಲ್ಲ. ಮಗಳನ್ನು ಮತ್ತೋರ್ವ ಅಪರಿಚಿತ ವ್ಯಕ್ತಿಯೊಂದಿಗೆ ಬಿಡಲಾಗುತ್ತಿದೆ. ಆತ ಸತತವಾಗಿ ಮಗಳ ಫೋಟೋ ಹಾಗೂ ವಿಡಿಯೋಗಳನ್ನು ತೆಗೆಯುತ್ತಾನೆ ಎಂದು ಮಗಳೇ ಹಲವು ಬಾರಿ ಆತಂಕ ವ್ಯಕ್ತಪಡಿಸಿರುವುದಾಗಿ ತಾಯಿ ಹೇಳಿದ್ದಾರೆ. ಇದರಿಂದ ಅರ್ಜಿದಾರ ಮಗಳು ನೆಲೆಸಲು ಸೌಹಾರ್ದಯುತ ವಾತಾವರಣ ನಿರ್ಮಿಸಿಲ್ಲ ಎಂಬುದು ನಿಸ್ಸಂದೇಹವಾಗಿ ಸ್ಪಷ್ಟವಾಗಲಿದೆ. ಹಾಗಾಗಿ, ಮಗಳು ತಾಯಿಯೊಂದಿಗೆ ಇರಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ವಿವರ:

ಪ್ರಕರಣದ ಪಕ್ಷಗಾರರಾಗಿರುವ ದಂಪತಿ 2005ರಲ್ಲಿ ವಿವಾಹವಾಗಿದ್ದರು. ಅವರಿಗೆ 2014ರಲ್ಲಿ ಹೆಣ್ಣು ಮಗು ಜನಿಸಿತ್ತು. ಸಂಬಂಧ ಹಳಸಿದ್ದರಿಂದ ಪತಿಯಿಂದ ಬೇರ್ಪಟ್ಟಿದ್ದ ಪತ್ನಿ ನಾಲ್ಕು ವರ್ಷದ ಹೆಣ್ಣು ಮಗುವಿನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಹೀಗಾಗಿ ವಿಚ್ಛೇದನ ಕೋರಿ ಮತ್ತು ತಾನು ಮಗಳ ಕಾನೂನುಬದ್ಧ ಪೋಷಕ ಎಂಬುದಾಗಿ ಘೋಷಿಸಲು ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಕೌಟುಂಬಿಕ ನ್ಯಾಯಾಲಯವು ವಾರದಲ್ಲಿ ಮೂರು ದಿನ ಮಗುವನ್ನು ಕೌಟುಂಬಿಕ ನ್ಯಾಯಾಲಯದ ಮಕ್ಕಳ ಭೇಟಿ ಕೇಂದ್ರದಲ್ಲಿ ಭೇಟಿ ಮಾಡಲು ಪತಿಗೆ ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿ, ತಾಯಿಗೆ ಸಮಾನವಾಗಿ ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿದ್ದರು.

ವಕೀಲರ ಮುಷ್ಕರಕ್ಕೆ ಸುಪ್ರೀಂ ನಿರ್ಬಂಧ: ವಕೀಲರು ಕರ್ತವ್ಯದಿಂದ ದೂರ ಉಳಿವಂತಿಲ್ಲ: ಸುಪ್ರೀಂಕೋರ್ಟ್‌

ಪ್ರತಿವಾದಿಗಳ ಪರ ವಕೀಲರು ವಾದ ಮಂಡಿಸಿ, ಪತ್ನಿಯೊಂದಿಗೆ ಮಗಳು ನೆಲೆಸಿದ್ದ ಸಮಯದಲ್ಲಿ ಆರೋಗ್ಯಕರವಾದ ವಾತಾವರಣ ಇರಲಿಲ್ಲ. ಮಗಳು ತನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾಳೆ ಎಂಬುದನ್ನು ತೋರಿಸಲು ಪತಿಯು ಮಗಳೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಿರುವ ಫೋಟೋಗಳನ್ನು ತೆಗೆಸಿದ್ದಾರೆ. ಅಪರಿಚಿತ ವ್ಯಕ್ತಿ ಈ ಫೋಟೋಗಳನ್ನು ತೆಗೆದಿದ್ದಾನೆ. ಆತನೂ ಪತಿಯ ಹಾಸಿಗೆಯೆಲ್ಲೇ ಮಲಗುತ್ತಾನೆ. ಆದ್ದರಿಂದ ಮಗುವನ್ನು ತಂದೆಯ ವಶಕ್ಕೆ ನೀಡಬಾರದು ಎಂದು ಕೋರಿದರು.

Latest Videos
Follow Us:
Download App:
  • android
  • ios