Asianet Suvarna News Asianet Suvarna News

ವಿದ್ಯಾರ್ಥಿಗಳು ಕಡಿಮೆ ಎಂಬ ಕಾರಣಕ್ಕೆ ಕಾಲೇಜು ಸ್ಥಳಾಂತರ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ತುಮಕೂರು ಜಿಲ್ಲೆಯ ಕನಕುಪ್ಪೆ ಗ್ರಾಮದಲ್ಲಿರುವ ಪದವಿಪೂರ್ವ ಕಾಲೇಜನ್ನು ಹೆಬ್ಬೂರಿಗೆ ಸ್ಥಳಾಂತರಿಸುವ ನಿರ್ಧಾರ ಪ್ರಶ್ನಿಸಿ ಗ್ರಾಮಸ್ಥರು ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

College relocation: High Court notice to Govt at tumkur rav
Author
First Published May 11, 2023, 11:51 PM IST | Last Updated May 12, 2023, 8:56 AM IST

ಬೆಂಗಳೂರು (ಮೇ.11) ತುಮಕೂರು ಜಿಲ್ಲೆಯ ಕನಕುಪ್ಪೆ ಗ್ರಾಮದಲ್ಲಿರುವ ಪದವಿಪೂರ್ವ ಕಾಲೇಜನ್ನು ಹೆಬ್ಬೂರಿಗೆ ಸ್ಥಳಾಂತರಿಸುವ ನಿರ್ಧಾರ ಪ್ರಶ್ನಿಸಿ ಗ್ರಾಮಸ್ಥರು ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

ಕನಕುಪ್ಪೆ ಗ್ರಾಮದ ಸಿ.ಎಸ್‌. ಯತೀಶ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್‌ ನಾಯಕ್‌ ಅವರ ನ್ಯಾಯಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿತು.

ವಕೀಲರ ಮುಷ್ಕರಕ್ಕೆ ಸುಪ್ರೀಂ ನಿರ್ಬಂಧ: ವಕೀಲರು ಕರ್ತವ್ಯದಿಂದ ದೂರ ಉಳಿವಂತಿಲ್ಲ: ಸುಪ್ರೀಂಕೋರ್ಟ್‌

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಕಾರಣಕ್ಕೆ ಕನಕುಪ್ಪೆ ಗ್ರಾಮ(Kanakkuppe village govt collage)ದಲ್ಲಿರುವ ಪದವಿಪೂರ್ವ ಕಾಲೇಜನ್ನು ಹೋಬಳಿ ಕೇಂದ್ರ ಹೆಬ್ಬೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಕುರಿತು 2023ರ ಮಾ.21ರಂದು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ, ಕಾಲೇಜಿನ 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈ ವರ್ಷ ಹೊಸದಾಗಿ ಸಾಕಷ್ಟುವಿದ್ಯಾರ್ಥಿಗಳು ಕಾಲೇಜಿಗೆ ಸೇರ್ಪಡೆಯಾಗಲಿದ್ದಾರೆ. ಕಾಲೇಜು ಸ್ಥಳಾಂತರ ಮಾಡುವುದರಿಂದ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕೆಂದು ಕೋರಿದರು.

Latest Videos
Follow Us:
Download App:
  • android
  • ios