Asianet Suvarna News Asianet Suvarna News

ಜೀವಂತ ಸಿದ್ದರಾಮಯ್ಯ ಬಂದರೂ ಬಿಜೆಪಿಗೆ ಸೇರಿಸಲ್ಲ: ಯತ್ನಾಳ

  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಗೆ ಜೀವಂತವಾಗಿ ಬಂದರೂ ಕರೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅಂಗಲಾಚಿ ಬೇಡಿಕೊಂಡರೂ ನಾವು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ

if siddaramaiah come alive we will not accept says basanagowda patil rav
Author
First Published Sep 13, 2023, 6:14 AM IST

 ವಿಜಯಪುರ (ಸೆ.13) :  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಗೆ ಜೀವಂತವಾಗಿ ಬಂದರೂ ಕರೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅಂಗಲಾಚಿ ಬೇಡಿಕೊಂಡರೂ ನಾವು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬಿಜೆಪಿಗೆ ನನ್ನ ಹೆಣ ಕೂಡ ಹೋಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು ನಮಗೆ ಸಿದ್ದರಾಮಯ್ಯನವರ ಅವಶ್ಯಕತೆ ಇಲ್ಲ. ಇನ್ನು ಅವರ ಹೆಣದ ಮಾತು ದೂರ ಉಳಿಯಿತು ಎಂದರು.

ಮೋದಿ ಮತ್ತೆ ಪ್ರಧಾನಿಯಾದ್ರೆ ಇಂಡಿಯಾ ಒಕ್ಕೂಟದವರು ಜೈಲಿಗೆ ಹೋಗ್ತಾರೆ: ಯತ್ನಾಳ್‌

ಇದೇ ವೇಳೆ, ಬಿಜೆಪಿ ವಿಷದ ಹಾವು ಎಂದ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕರುಣಾನಿಧಿ ತಳಿಯೆ ವಿಷದ ಹಾವು. ಅದು ಕೆಟ್ಟ ತಳಿ. ಈ ತಳಿ ದೇಶಕ್ಕೆ ನಿಷ್ಠೆಯಿಲ್ಲ. ಧರ್ಮಕ್ಕೂ ನಿಷ್ಠೆಯಿಲ್ಲ. ಒಂದು ಕಾಲದಲ್ಲಿ ಎಲ್‌ಟಿಟಿಇಗೆ ಬೆಂಬಲ ನೀಡಿದವರು ಅವರು. ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಿದವರು. ಅವರಿಂದ ಇನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಸನಾತನ ಧರ್ಮ ಕಾಗೆ ಎಂದು ಟೀಕಿಸಿದ ಪ್ರಕಾಶ ರೈ ವಿರುದ್ಧವೂ ವಾಗ್ದಾಳಿ ನಡೆಸಿ, ಪ್ರಕಾಶ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿ ಇದೆ. ಸ್ವಚ್ಛ ಮಾಡಲು ಹಂದಿ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಪ್ರಕಾಶ ರೈ ಎನ್ನುವ ಹಂದಿ ಇದೆ ಎಂದು ಟೀಕಿಸಿದರು.

 

ಪಾಕಿಸ್ತಾನಕ್ಕಿಂತಲೂ ಹೆಚ್ಚು ದೇಶದ್ರೋಹಿಗಳು ಭಾರತದಲ್ಲಿದ್ದಾರೆ: ಶಾಸಕ ಯತ್ನಾಳ್

ಮಠಾಧೀಶರು ಸನಾತನ ಧರ್ಮದ ವಿರುದ್ಧ ಟೀಕಿಸುವವರ ವಿರುದ್ಧ ಧ್ವನಿ ಎತ್ತಬೇಕು. ಆದರೆ, ಆದಿ ಚುಂಚನಗಿರಿ ಸ್ವಾಮಿ, ಮೂರುಸಾವಿರ ಮಠದ ಗುರುಗಳು ಮಾತ್ರ ಇವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಉಳಿದ ಸ್ವಾಮಿಗಳು ಇದರ ವಿರುದ್ಧ ಧ್ವನಿ ಎತ್ತಿಲ್ಲ. ಸಿದ್ದರಾಮಯ್ಯನವರ ಬಳಿ ಮಠಕ್ಕೆ ಅನುದಾನ ತರುವ ಉದ್ದೇಶದಿಂದ ಮೌನ ವಹಿಸಿರಬಹುದು ಎಂದು ಛೇಡಿಸಿದರು.

ಈ ಮಧ್ಯೆ, ಹರಿಪ್ರಸಾದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಧಮ್‌, ತಾಕತ್ತಿದ್ದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬಿ.ಕೆ.ಹರಿಪ್ರಸಾದ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಸವಾಲು ಹಾಕಿದರು.

Follow Us:
Download App:
  • android
  • ios