ಮೋದಿ ಮತ್ತೆ ಪ್ರಧಾನಿಯಾದ್ರೆ ಇಂಡಿಯಾ ಒಕ್ಕೂಟದವರು ಜೈಲಿಗೆ ಹೋಗ್ತಾರೆ: ಯತ್ನಾಳ್
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಲಾಲೂಪ್ರಸಾದ್ ಯಾದವ್, ಅಖಿಲೇಶ್ ಯಾದವ್, ದೆಹಲಿಯ ಇಬ್ಬರು ಉಪಮುಖ್ಯಮಂತ್ರಿಗಳು ಜಾಮೀನಿಂದ ಹೊರಗಡೆ ಇದ್ದಾರೆ. ಕಾಶ್ಮೀರದಲ್ಲಿ 370 ರದ್ದು, ಜಗತ್ತಿನಲ್ಲಿ 5ನೇ ಆರ್ಥಿಕ ರಾಷ್ಟ್ರ ಭಾರತ, 40 ಕೋಟಿ ಜನ್‌ಧನ್ ಖಾತೆಗಳ ಮೂಲಕ ನೇರ ನಗದು ಬಿಜೆಪಿ ಸಾಧನೆಯಲ್ಲವೇ? ಎಂದು ಪ್ರಶ್ನಿಸಿದ ಬಸನಗೌಡ ಪಾಟೀಲ್ ಯತ್ನಾಳ್
ಸಿಂಧನೂರು(ಸೆ.10): ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾದರೆ ಇಂಡಿಯಾ ಒಕ್ಕೂಟದ ಎಲ್ಲರಿಗೂ ಜೈಲಿಗೆ ಹೋಗುತ್ತೇವೆಂಬ ಭಯ ಕಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಲಾಲೂಪ್ರಸಾದ್ ಯಾದವ್, ಅಖಿಲೇಶ್ ಯಾದವ್, ದೆಹಲಿಯ ಇಬ್ಬರು ಉಪಮುಖ್ಯಮಂತ್ರಿಗಳು ಜಾಮೀನಿಂದ ಹೊರಗಡೆ ಇದ್ದಾರೆ. ಕಾಶ್ಮೀರದಲ್ಲಿ 370 ರದ್ದು, ಜಗತ್ತಿನಲ್ಲಿ 5ನೇ ಆರ್ಥಿಕ ರಾಷ್ಟ್ರ ಭಾರತ, 40 ಕೋಟಿ ಜನ್‌ಧನ್ ಖಾತೆಗಳ ಮೂಲಕ ನೇರ ನಗದು ಬಿಜೆಪಿ ಸಾಧನೆಯಲ್ಲವೇ? ಎಂದು ಪ್ರಶ್ನಿಸಿದರು.
ಅನುಮತಿ ಪಡೆಯದೆ ಗಣೇಶನ್ನೂ ಕೋರಿಸ್ತಿವಿ, ಡಿಜೆನೂ ಹಾಕ್ತಿವಿ: ಯತ್ನಾಳ
ಬ್ರಿಟಿಷರ ಇಟ್ಟಿದ್ದ ಇಂಡಿಯಾ ಹೆಸರು ಸೇರಿದಂತೆ ಬ್ರಿಟಿಷರ, ಮೊಗಲರ ಹಲವಾರು ಹೆಸರನ್ನು ಬದಲಿಸಿ ಭಾರತೀಯತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಭಾರತವನ್ನು ಪಾಕಿಸ್ತಾನ ಮಾಡುತ್ತಿದ್ದರು ಎಂದು ಲೇವಡಿ ಮಾಡಿದರು.
ಜಗದೀಶ ಶೆಟ್ಟರ್ ಅವರು ಕಾರ್ಪೋರೇಟರ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಅಂಥವರನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ಎಂಬುದು ಮರೆಯಬಾರದು. ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇವರೆಲ್ಲ ಲಿಂಗಾಯತರೇ ಆಗಿದ್ದಾರೆ. ಬಿಜೆಪಿ ಲಿಂಗಾಯತರನ್ನು ಕಡೆಗಣಿಸಿದ್ದಾರೆಂಬುದು ಸುಳ್ಳಿನ ಸಂಗತಿ. ಬಿಜೆಪಿ ಸರ್ಕಾರದ ಮುಕ್ಕಾಲು ಪಾಲನ್ನು ಲಿಂಗಾಯತರೇ ಪಡೆದಿದ್ದಾರೆ ಎಂದು ಹೇಳಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಎಂ.ದೊಡ್ಡಬಸವರಾಜ ಅನೇಕರು ಇದ್ದರು.