Asianet Suvarna News Asianet Suvarna News

ಪಾಕಿಸ್ತಾನಕ್ಕಿಂತಲೂ ಹೆಚ್ಚು ದೇಶದ್ರೋಹಿಗಳು ಭಾರತದಲ್ಲಿದ್ದಾರೆ: ಶಾಸಕ ಯತ್ನಾಳ್

ಕಳೆದ ಒಂಭತ್ತು ವರ್ಷದಲ್ಲಿ ತಪಸ್ಸಿನ ಫಲ ಜಿ-20 ಸಭೆ ನಡೆಯುತ್ತಿದೆ. ದೇಶದ ಏಕತೆಗೆ ದೆಹಲಿಗೆ ಮಣ್ಣು ಕಳುಹಿಸುತ್ತಿರುವುದು ಶ್ಲಾಘನೀಯ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 
 

India has more traitors than Pakistan Says MLA Basanagouda Patil Yatnal gvd
Author
First Published Sep 10, 2023, 7:37 PM IST

ಕೊಪ್ಪಳ (ಸೆ.10): ಕಳೆದ ಒಂಭತ್ತು ವರ್ಷದಲ್ಲಿ ತಪಸ್ಸಿನ ಫಲ ಜಿ-20 ಸಭೆ ನಡೆಯುತ್ತಿದೆ. ದೇಶದ ಏಕತೆಗೆ ದೆಹಲಿಗೆ ಮಣ್ಣು ಕಳುಹಿಸುತ್ತಿರುವುದು ಶ್ಲಾಘನೀಯ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ಗೋವಿಂದರಾಯನ ದೇವಸ್ಥಾನದ ಬಳಿ ಬಿಜೆಪಿ ಪಕ್ಷದ ವತಿಯಿಂದ ಶನಿವಾರ ಜರುಗಿದ ನಮ್ಮ ಮಣ್ಣು, ನನ್ನ ದೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ವಿಶ್ವ ಗುರುವಾಗಲು ಸಾಧ್ಯವಾಗಿದೆ. ದೇಶದ ಏಕತೆಗಾಗಿ ಮಣ್ಣು ಸಂಗ್ರಹಿಸಿ ದೆಹಲಿಗೆ ಕಳಿಸುತ್ತಿರುವುದು ದೇಶದ ಏಕತೆಯ ಸಂಕೇತ. ಭಾರತ ಜಗನ್ಮಾತೆಯಾಗಬೇಕು. ಆರ್ಥಿಕತೆಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸುವಲ್ಲಿ ಯಶಸ್ವಿಯಾಗಲಿದೆ ಎಂದರು. 

ಜಮ್ಮು ಕಾಶ್ಮೀರದ 370ನೇ ವಿಧಿ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ವಾತಾವರಣವಿತ್ತು. ಅಂತಹ ಕರಾಳ ಶಾಸನವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದು ಹಾಕಿದರು. ಒಬ್ಬ ಸೈನಿಕನ ಹತ್ತು ಜನರನ್ನು ಹೊಡೆದಾಕುವ ಅಧಿಕಾರ ದೇಶದ ಸೈನಿಕರಿಗೆ ಮೋದಿಯವರು ಕೊಟ್ಟಿದ್ದಾರೆ ಎಂದು ಹೇಳಿದರು. ವಿಶ್ವದ ನಾಯಕರೆಲ್ಲರೂ ಬಂದಿದ್ದಾರೆ. ವಿಶ್ವಗುರು ಆಗಬೇಕು ಎನ್ನುವುದು ಕನಸಾಗಿತ್ತು. ಜಗತ್ತಿನಲ್ಲಿ ಭಾರತ ಆರ್ಥಿಕತೆಯಲ್ಲಿ 5 ನೆಯ ರಾಷ್ಟ್ರವಾಗಿದೆ. ಭಾರತ ಹೆಸರು ಈಗ ಯಾಕೆ ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ. 'ಭಾರತ' ಎನ್ನುವುದು ಸಾವಿರ ವರ್ಷದ ಹಿನ್ನೆಲೆ ಹೊಂದಿದೆ. ವೇದ ಪುರಾಣಗಳಲ್ಲಿ ಭರತಖಂಡ ಎಂದು ಉಲ್ಲೇಖಗಳಿವೆ. 

ಯುವಕರ ಭವಿಷ್ಯಕ್ಕೆ ಮಠ ಬೇಕು: ರಾಘವೇಶ್ವರ ಭಾರತೀ ಸ್ವಾಮೀಜಿ

ಜಾಮೀನಿನ ಮೇಲೆ ಹೊರಗಡೆ ಇರುವ ಸೋನಿಯಾಗಾಂಧಿ, ಲಾಲೂ ಪ್ರಸಾದ, ಮಮತಾ ಬ್ಯಾನರ್ಜಿ ಹಾಗೂ ಇನ್ನಿತರರು ಐ.ಎನ್.ಡಿ.ಐ.ಎ ಕಟ್ಟಿಕೊಂಡಿದ್ದಾರೆ. ಭಾರತ ಜೋಡೋ ಯಾಕೆ ಮಾಡಬೇಕು ?, ಭಾರತ ತೋಡೋ ಕೆಲಸ ನೆಹರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಹೈದರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕವಾಗಿದೆ. ಮುಂದೆ ಹೈದರಾಬಾದ್ ಭಾಗ್ಯನಗರವಾಗುತ್ತದೆ. ಸುರಕ್ಷತೆಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಗೆಲ್ಲಿಸಿ. ರಾಹುಲ್ ಗಾಂಧಿ ಎಂಬ ಅರೆಹುಚ್ಚ ಬಂದ್ರೆ ಗಣಪತಿ ಹಬ್ಬ ಆಚರಣೆ ಸೇರಿದಂತೆ ಯಾವುದು ಇರಲ್ಲ ಎಂದರು.

ರಾಜ ಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲಾಗಿದೆ. ಈ ಭೂಮಿಯ ಪ್ರತಿಯೊಂದು ಭಾಗದ ಮಣ್ಣು ದೆಹಲಿಯ ಒಂದೆಡೆ ಕ್ರೋಢಿಕರಿಸಿ, ಅಯೋಧ್ಯಗಾಗಿ ಇಟ್ಟಿಗೆ ಕಳುಹಿಸಿದ್ದೇವೆ ಎಂದರು. ಪಾಕಿಸ್ತಾನಕ್ಕಿಂತಲೂ ಹೆಚ್ಚು ದೇಶದ್ರೋಹಿಗಳು ಭಾರತದಲ್ಲಿ ಇದ್ದಾರೆ. ಸೋನಿಯಾ ಗಾಂಧಿ, ಲಾಲುಪ್ರಸಾದ್,ಅಖಿಲೇಶ ಯಾದವ್, ಮಮತಾ ಬ್ಯಾನರ್ಜಿ ದೇಶ ಲೂಟಿ ಹೊಡೆದಿದ್ದಾರೆ. ಭಾರತ ಜೋಡೊ ಎಂದೂ ನೀವು ಇಟ್ಟಿದ್ದೀರಿ. ಭಾರತ ಇಬ್ಬಾಗ ಮಾಡಲು ಒಪ್ಪುವುದಿಲ್ಲ. ಬ್ರಾತೃತ್ವ, ಸಹಬಾಳ್ವೆ ಮಾಡೋಣ. ಸುರಕ್ಷಿತ ಭಾರತವಾಗಿ ಇರುವುದೇ ನಮ್ಮ ದೊಡ್ಡ ಗ್ಯಾರಂಟಿ. 

ಭಾವಾನಾತ್ಮಕ ವಿಚಾರ ದೇಶ ನನ್ನದು. ರಸ್ತೆ ಸಂಪರ್ಕ ಜೋಡಣೆಯಲ್ಲಿ ಭಾರತ ಒಂದನೇ ಸ್ಥಾನದಲ್ಲಿದ್ದೇವೆ. ಗಲ್ಫ ದೇಶಗಳಿಗೆ ರೊಕ್ಕ ಕೊಡುವುದೇ ಬಿಡುತ್ತೇವೆ. ಪಾಕ್ ಅಕುಪಾಯಿಡ್ ಕಾಶ್ಮೀರ ಕೂಡಾ ನಮ್ಮ ದೇಶಕ್ಕೆ ಬರುತ್ತದೆ.ಇಲ್ಲಿನ ಮಕ್ಕಳು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಚಂದ್ರನಲ್ಲಿ ..ಹಮಾರ್ ಪಾಸ್ ಹೈ ಚಾಂದ್ ಎಂದರೂ, ನಾವು ಅಲ್ಲಿಯೇ ಧ್ವಜ ನೆಟ್ಟಿದ್ದೇವೆ ಎಂದರು.

ಭಾರತ ಎಂದು ಹೇಳುವುದರಿಂದ ಬಡವರು ಶ್ರೀಮಂತರಾಗಿ ಬಿಡುತ್ತಾರೆಯೇ?: ಸಚಿವ ಲಾಡ್

ಸಂಸದ ಸಂಗಣ್ಣ ಕರಡಿ ಮಾತನಾಡಿ, ಹುತಾತ್ಮರ ಸ್ಮರಣಾರ್ಥ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನಕ್ಕೆ ಮಣ್ಣು ಕಳಿಸುವುದು ಉತ್ತಮ ಕಾರ್ಯ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ದೊಡ್ಡನಗೌಡ ಪಾಟೀಲ್, ಎಂ.ಎಲ್ಸಿ ಹೇಮಲತಾ ನಾಯಕ, ಮಾಜಿ ಸಚಿವರಾದ ಹಾಲಪ್ಪ ಆಚಾರ, ನಾಗಪ್ಪ ಸಾಲೋಣಿ, ಮಾಜಿ‌ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು, ಜಿ. ವೀರಪ್ಪ, ಕೆ.ಶರಣಪ್ಪ, ಮುಖಂಡರಾದ ಚಂದ್ರಶೇಖರ ಹಲಗೇರಿ, ನವೀನ್ ಗುಳಗಣ್ಣನವರ, ಮಂಜಳಾ ಅಮರೇಶ್ವ ಕರಡಿ, ಸುನೀಲ್ ಹೆಸರೂರು, ಗಣೇಶ ಹೊರತಟ್ನಾಳ , ಕೆ ಶರಣಪ್ಪ ವಕೀಲ, ಜಿ ವೀರಪ್ಪ ಇನ್ನೀತರರಿದ್ದರು.

Follow Us:
Download App:
  • android
  • ios