ಬಿಜೆಪಿಯವರು ಆರು ತಿಂಗಳಿಂದ ಸರ್ಕಾರ ಮಲಗಿತ್ತು ಅಂತಾ ಹೇಳ್ತಾರೆ. ಮಲಗಿದ್ರೆ ನಾವು ಗ್ಯಾರಂಟಿ ಜಾರಿ ಮಾಡೋಕೆ ಆಗ್ತಾ ಇತ್ತಾ? ವಿಪಕ್ಷ ನಾಯಕ ಆರ್‌ ಅಶೋಕ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬೆಂಗಳೂರು (ನ.28): ಬಿಜೆಪಿಯವರು ಆರು ತಿಂಗಳಿಂದ ಸರ್ಕಾರ ಮಲಗಿತ್ತು ಅಂತಾ ಹೇಳ್ತಾರೆ. ಮಲಗಿದ್ರೆ ನಾವು ಗ್ಯಾರಂಟಿ ಜಾರಿ ಮಾಡೋಕೆ ಆಗ್ತಾ ಇತ್ತಾ? ವಿಪಕ್ಷ ನಾಯಕ ಆರ್‌ ಅಶೋಕ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಏನೋ ಹೇಳ್ತಾರೆ, ಅವರು ಏನೇನೋ ಆರೋಪ ಮಾಡ್ತಾರೆ ಮಾಡಲಿ. ನೀನು ಹೇಳಪ್ಪ ಗ್ಯಾರಂಟಿ ಜಾರಿ ಮಾಡಿದ್ದೇವೋ ಇಲ್ವೋ ಸಮರ್ಪಕವಾಗಿ ಜಾರಿ ಮಾಡಿಲ್ಲ ಅಂದ್ರೆ ಹೇಗೆ? ಈ ತಿಂಗಳು ಗೃಹಲಕ್ಷ್ಮಿ 1.14 ಕೋಟಿ‌ ಜನರಿಗೆ ನೀಡಿದ್ದೇವೆ. ಪಡಿತರ ಚೀಟಿ ಇರುವ 4.3 ಕೋಟಿ ಜನಕ್ಕೆ ಅಕ್ಕಿ ದುಡ್ಡು ನೀಡಿದ್ದೇವೆ. ಕರೆಂಟ್ ಎಲ್ಲರಿಗೂ ಉಚಿತ ಕೊಟ್ಟಿದ್ದೇವೆ. ಶಕ್ತಿ ಯೋಜನೆಯಲ್ಲಿ ‌ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ನಿದ್ದೆ ಮಾಡಿದ್ರೆ ಇಷ್ಟೇ ಜಾರಿ ಮಾಡೋಕೆ ಆಗ್ತಾ ಇತ್ತಾ? ವಿರೋಧ ಪಕ್ಷದವರು ಆರೋಪ ಮಾಡಬೇಕು ಅಂತಾ ಮಾಡ್ತಾರೆ ಅಷ್ಟೇ ಎಂದು ತಿರುಗೇಟು ನೀಡಿದರು.

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಅಗ್ನಿ ಅವಘಡ; ಬಟ್ಟೆ, ಶೂ ಮಳಿಗೆಗೆ ಹೊತ್ತಿಕೊಂಡ ಬೆಂಕಿ! 

ಆರ್ ಅಶೋಕ್ ವಿರುದ್ಧ ಸಿಎಂ ಗರಂ:

ಗೃಹ ಲಕ್ಷ್ಮಿ ಗ್ಯಾರಂಟಿ ಎಲ್ಲರಿಗೂ ತಲುಪ್ತಿದೆ. ಯಾರಿಗೆ ತಲುಪ್ತಿಲ್ಲ ಅಂತ ಅಶೋಕ್ ಹೇಳಲಿ. 1.17 ಲಕ್ಷ ಗೃಹಲಕ್ಷ್ಮಿ ಜನರಿಗೆ ಹಣ ಕೊಟ್ಟಿದೀವಿ. ಇನ್ನೂ 3 ಲಕ್ಷ ಜನರಿಗೆ ಕೊಟ್ಟಿಲ್ಲ. ಅವರು ಇಲ್ಲೇ ಏನೂ ಬಿಚ್ಚಿಟ್ಟಿಲ್ಲ, ಇನ್ನು ಅಧಿವೇಶನದಲ್ಲಿ ಬಿಚ್ಚಿಡ್ತಾರಾ? ಬಿಜೆಪಿಯವ್ರಿಗೆ ಸುಳ್ಳು ಹೇಳೋದೇ ಬಂಡವಾಳ. ಬರೀ ಸುಳ್ಳು ಹೇಳ್ತಾರೆ. ನಾವು 1.5 ಕೋಟಿ ಜನರಿಗೆ ಉಚಿತ ಕರೆಂಟ್ ಕೊಡ್ತಿದೀವಿ , 4.34 ಕೋಟಿ‌ ಜನರಿಗೆ ಅಕ್ಕಿ ಬದಲು ಹಣ ಕೊಡ್ತಿದೀವಿ ಇದು ಸುಳ್ಳಾ? ಕೆಲವರಿಗೆ ತಾಂತ್ರಿಕ ಕಾರಣದಿಂದ ಗೃಹಲಕ್ಷ್ಮಿ ಬಂದಿಲ್ಲ. ಡಿಸೆಂಬರ್ ಅಂತ್ಯದವರೆಗೆ ಗೃಹಲಕ್ಷ್ಮಿ ಹಣ ಕೊಡ್ತೇವೆ ಎಂದರು.

ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಂದ ಚಿಕಿತ್ಸೆ, ಬಳಿಕ ಪರಿಹಾರಕ್ಕೆ ಮನವಿ ಕೊಡೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ರಿಕವರಿಗೆ ಖಾಸಗಿ ಆಸ್ಪತ್ರೆಗೆ ಹೋದರೆ ವಾಸಿ ಆಗುವ ನಂಬಿಕೆ ಇರಬಹುದು. ನಾನು ಸಹ ಖಾಸಗಿ ಆಸ್ಪತ್ರೆಗೆ ಹೋಗ್ತಿನಿ. ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಸಹ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಅಲ್ಲೆಲ್ಲ ಶ್ರದ್ಧೆಯಿಂದ ಚಿಕಿತ್ಸೆ ಕೊಡ್ತಾರೆ ಅನ್ನೋ ಭಾವನೆ ಇದೆ. ಹಾಗಾಗಿ ಜನ ಕೂಡಾ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ, ಅದರಲ್ಲಿ ನಾವು ಸ್ವಲ್ಪ ಭಾಗ ಪರಿಹಾರ ಕೊಡ್ತಿವಿ ಎಂದರು.

ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; ಊಟದ ಸಮಯದಲ್ಲೂ ಅಹವಾಲು ಆಲಿಸಿದ ಸಿಎಂ!

ಇನ್ನು ರಾಜ್ಯದಲ್ಲಿ ಶಕ್ತಿ ಯೋಜನೆಯಿಂದಾಗಿ ಬಸ್ ಗಳ ಕೊರತೆ ಎದುರಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಅಗತ್ಯ ಇದ್ದ ಕಡೆ ಬಸ್ ಖರೀದಿಗೆ ಸೂಚನೆ ಕೊಟ್ಟಿದ್ದೇನೆ. ಹಾಗೇನಾದ್ರು ಇದ್ರೆ ಎಲ್ಲಿ ಅನ್ನುವುದು ತಿಳಿಸಿದ್ರೆ ಅದನ್ನ‌ ಅಟೆಂಡ್ ಮಾಡುತ್ತೇನೆ ಎಂದ ಸಿಎಂ