ಕೈ ಗೇಟ್ ತೆಗೆದ್ರೆ ಬಿಜೆಪೀಲಿ ಒಬ್ಬ ಶಾಸಕನೂ ಇರೊಲ್ಲ: ಸಚಿವ ಶಿವರಾಜ ತಂಗಡಗಿ
ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ನಾವೇಕೆ ಆಪರೇಷನ್ ಮಾಡೋಣ? ಪಕ್ಷದ ಸಿದ್ಧಾಂತ ಮೆಚ್ಚಿ ಅವರಾಗೇ ಬರುವವರಿದ್ದರೆ ಅವರನ್ನು ಸ್ವಾಗತಿಸುತ್ತೇವೆ. ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಕಲಬುರಗಿ: ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ನಾವೇಕೆ ಆಪರೇಷನ್ ಮಾಡೋಣ? ಪಕ್ಷದ ಸಿದ್ಧಾಂತ ಮೆಚ್ಚಿ ಅವರಾಗೇ ಬರುವವರಿದ್ದರೆ ಅವರನ್ನು ಸ್ವಾಗತಿಸುತ್ತೇವೆ. ಬಿಜೆಪಿ ಆಪರೇಷನ್ ಕಮಲದ ಹೆಸರಲ್ಲಿ 16 ಶಾಸಕರಿಂದ ಉಪಯೋಗ ಪಡೆದುಕೊಂಡು ನಡುನೀರಿನಲ್ಲಿ ಬಿಟ್ಟಿದ್ದಾರೆ. ನಾವೀಗ ಪಕ್ಷದ ಗೇಟ್ ತೆರೆದರೆ ಬಿಜೆಪಿಯಲ್ಲಿ ಯಾರೂ ಇರೊಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಪರೇಷನ್ ಕಮಲ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದ್ದು ಬಿಜೆಪಿ ವಿಶ್ವಾಸಘಾತುಕ ಪಕ್ಷ ಎಂದು ಟೀಕಿಸಿದರಲ್ಲದೆ, ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ನೂರು ದಿನಗಳಲ್ಲೆ ಪ್ರಣಾಳಿಕೆಯಲ್ಲಿ ಹೇಳಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಆದರೆ, ಸರ್ಕಾರ ರಚನೆಯಾಗಿ 100 ದಿನ ಕಳೆದರೂ ಇಲ್ಲಿವರೆಗೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ ಎಂದು ವ್ಯಂಗ್ಯವಾಡಿದರು.
ಸದ್ಯಕ್ಕೆ ‘ನೋ ಆಪರೇಷನ್’.. ರಾಜಕೀಯದ ಕತೆ ಮುಂದೇನು..?