ಬೆಂಗಳೂರು :  ಭಾರತೀಯ ಭದ್ರತಾ ಪಡೆಗಳ ಇತಿಹಾಸದಲ್ಲೇ ಅತ್ಯಂತ ಘೋರ ದುರಂತವೊಂದು ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದೆ 42ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಈ ಪೈಶಾಚಿಕ ಉಗ್ರ ಕೃತ್ಯವು ಭಾರತೀಯರ ರಕ್ತ ಕುದಿಯುವಂತೆ ಮಾಡಿದ್ದು,  ಉಗ್ರರ ನಿಗ್ರಹಕ್ಕೆ ನಾನು ಸಿದ್ದ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಟ್ವೀಟ್ ಮಾಡಿದ್ದಾರೆ. 

"

ವಿಡಿಯೋ ಬಿಡುಗಡೆ ಆಗುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ ಎಂದಿದ್ದ ಪಾತಕಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ ಬಿದರಿ ಅವರು ನನಗೆ ಈಗ 64 ವರ್ಷ ವಯಸ್ಸು. ನನಗೆ ಅವಕಾಶ ನೀಡಿದಲ್ಲಿ ನಾನು ಕಾಶ್ಮೀರಕ್ಕೆ ತೆರಳಲು ಸಿದ್ಧ ಎಂದು ಹೇಳಿದ್ದಾರೆ. 

ಆತ್ಮಾಹುತಿ ದಾಳಿಗೆ ಮಂಡ್ಯದ ವೀರಪುತ್ರ ಹುತಾತ್ಮ

ಕಾಶ್ಮೀರಕ್ಕೆ ತೆರಳುವ ಮೂಲಕ ಉಗ್ರ ಉಪಟಳವನ್ನು ಅಂತ್ಯಗೊಳಿಸುತ್ತೇನೆ. ಉಗ್ರರ ಉಪಟಳ ಅಂತ್ಯಗೊಳಿಸದಿದ್ದಲ್ಲಿ ನನ್ನ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ ಎಂದು ಉಗ್ರ ದಾಳಿಯ ಸಂಬಂಧ ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಟ್ವೀಟ್ ಮಾಡಿದ್ದಾರೆ.