Asianet Suvarna News Asianet Suvarna News

ಮೋಟಿವೇಷನ್ ಸ್ಪೀಚ್ ಮಾಡಲು ಬಿಗ್ ಬಾಸ್‌ಗೆ ಹೋಗಿದ್ದೆ: ಶಾಸಕ ಪ್ರದೀಪ್ ಈಶ್ವರ್

ನಾನು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಕೆಲವೇ ಗಂಟೆಗಳ ಕಾಲ ಹೋಗಿ ಬಂದಿದ್ದೇನೆ. ಇದಕ್ಕೆ ಯಾರನ್ನು ಕೇಳುವುದು, ಅನುಮತಿ ಪಡೆಯುವ ಅಗತ್ಯ ವಿಲ್ಲ. ವಿರೋಧಮಾಡುವವರು, ಟ್ರೋಲ್ ಮಾಡುವವರು ಮಾಡಿಕೊಳ್ಳಲಿ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

I went to the Bigg Boss house to give a motivational speech MLA Pradeep Eshwar clarified rav
Author
First Published Oct 11, 2023, 5:27 AM IST

ಚಿಕ್ಕಬಳ್ಳಾಪುರ (ಅ.11) : ನಾನು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಕೆಲವೇ ಗಂಟೆಗಳ ಕಾಲ ಹೋಗಿ ಬಂದಿದ್ದೇನೆ. ಇದಕ್ಕೆ ಯಾರನ್ನು ಕೇಳುವುದು, ಅನುಮತಿ ಪಡೆಯುವ ಅಗತ್ಯ ವಿಲ್ಲ. ವಿರೋಧಮಾಡುವವರು, ಟ್ರೋಲ್ ಮಾಡುವವರು ಮಾಡಿಕೊಳ್ಳಲಿ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊ ೦ದಿಗೆ ಮಾತನಾಡಿದ ಅವರು, ಬಿಗ್ ಬಾಸ್(Bigg Boss Kannada) ಮನೆ ನನ್ನ ಕಚೇರಿಗೆ ಸಮೀಪದಲ್ಲೇ ಇದೆ. ಪ್ರೇರಣಾತ್ಮಕ ಭಾಷಣ(motivational speech) ಮಾಡಲು ಆಹ್ವಾನಿಸಿದ್ದರು. ತಂದೆ ತಾಯಿ ಬಗ್ಗೆ ಮಾತನಾಡಿ ಬಂದಿದ್ದೇನೆ. ಕೇವಲ 3 ಗಂಟೆಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದಿದ್ದೇನೆ. ಹಾಗಾಗಿ ಸಿಎಂ, ಡಿಸಿಎಂ, ಸಭಾಧ್ಯಕ್ಷರ ಅನುಮತಿ ಪಡೆದು ಹೋಗುವ ಅಗತ್ಯವಿಲ್ಲ ಎಂದು ಭಾವಿಸಿದ್ದೇನೆ ಎಂದರು.

ಚಿಕ್ಕಬಳ್ಳಾಪುರ ಜನರ ಮನಸ್ಸೇ ನನಗೆ ಬಿಗ್‌ಬಾಸ್‌, ಶಾಸಕ ಪ್ರದೀಪ್‌ ಈಶ್ವರ್‌ ಕೌಂಟರ್‌!

ಝೀಕನ್ನಡವಾಹಿನಿ(zee kannada)ಯವರು ಅನುಬಂಧ ಅವಾರ್ಡ್ ಪ್ರದಾನ ಕಾಠ್ಯಕ್ರಮಕ್ಕೆ ಕರೆದಿದ್ದರೂ ಹೋಗಲು ಆಗಿರಲಿಲ್ಲ. ಈಗ ಬಿಗ್ ಬಾಸ್ ಗೆ ಕೆಲವೇ ಗಂಟೆ ಅಂತ ಕರೆದರು. ಹಾಗಾಗಿ ಹೋಗಿದ್ದೆ. ಒಂದು ಶೋಗೆ ಹೈಪ್ ಬರಬೇಕು ಅನ್ನೋ ಕಾರಣಕ್ಕೆ ಒಂದು ದಿನ ಯಾರಿಗೂ ಸಿಗಲಿಲ್ಲ. ರಾತ್ರಿ 8.30ಕ್ಕೆ ಒಳಗೆ ಹೋಗಿ ನನ್ನ ಖಾಸಗಿ ಸಮಯವನ್ನ ಮಾತ್ರ ಬಳಕೆ ಮಾಡಿದ್ದೇನೆ. ನಾನು ಈಗಾಗಲೇ ಜನರ ಮನಸಲ್ಲಿ ಬಿಲ್ಡ್ ಆಗಿದ್ದೇನೆ, ನನಗೆ ಬಿಲ್ಡಪ್ ಅಗತ್ಯ ಇಲ್ಲ ಎಂದರು 

ಬಿಗ್​ಬಾಸ್​ ಮನೆಯಿಂದ ಹೊರಬಂದ ಶಾಸಕ ಪ್ರದೀಪ್​ ಈಶ್ವರ್​: ಕೊಟ್ಟ ಕಾರಣ ಕೇಳಿ ಟ್ರೋಲ್​ಗಳ ಸುರಿಮಳೆ!

Follow Us:
Download App:
  • android
  • ios