ಕರ್ನಾಟಕದ 6.5 ಕೋಟಿ ಜನರ ಆರೋಗ್ಯ ಹೊಣೆ ನನ್ನ ಪುಣ್ಯ: ಸಚಿವ ಸುಧಾಕರ್‌

14 ಮತ್ತು 15ನೇ ವಿಧಾನಸಭೆ ಅಧಿವೇಶನದ 10 ವರ್ಷಗಳಲ್ಲಿ ಮೂರು ಬಾರಿ ಆಯ್ಕೆಯಾಗಲು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ನಾನು ಈ ಸದನದ ಮೂಲಕ ಕೋಟಿ ನಮನಗಳನ್ನು ಅರ್ಪಿಸುತ್ತೇನೆ; ಸಚಿವ ಡಾ.ಕೆ.ಸುಧಾಕರ್‌ 

I am Responsible for the Health of 6.5 crore people of Karnataka Says Dr K Sudhakar grg

ಬೆಂಗಳೂರು(ಫೆ.25): ರಾಜ್ಯದ ಆರೂವರೆ ಕೋಟಿ ಜನರ ಆರೋಗ್ಯ ಸುಧಾರಣೆ ಮಾಡುವ, ಯೋಗಕ್ಷೇಮ ನೋಡಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಸುಕೃತ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು.

15ನೇ ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕಲಾಪದಲ್ಲಿ ಮಾತನಾಡಿದ ಅವರು, ರಾಜ್ಯದ ಆರೂವರೆ ಕೋಟಿ ಜನರ ಧ್ವನಿಯಾಗಿ, ಆಶೋತ್ತರಗಳಿಗೆ ಸ್ಪಂದಿಸುವ ಶಕ್ತಿಯಾಗಿ ಜನರು ಶಾಸಕರನ್ನು ಶಕ್ತಿಸೌಧಕ್ಕೆ ಚುನಾಯಿಸಿ ಕಳುಹಿಸುತ್ತಾರೆ. ಆರೂವರೆ ಕೋಟಿ ಜನರಲ್ಲಿ 224 ಜನ ಮಾತ್ರ ಆಯ್ಕೆಯಾಗುವುದು. ಅದರಲ್ಲೂ ಸಹ ಸಚಿವರಾದರೆ ಒಂದೊಂದು ಇಲಾಖೆಗೆ ಒಬ್ಬರು. ಇಂತಹದ್ದರಲ್ಲಿ ಆರೂವರೆ ಕೋಟಿ ಜನರ ಆರೋಗ್ಯವನ್ನು ಸುಧಾರಣೆ ಮಾಡುವ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಸುಕೃತ ಎಂದು ತಿಳಿಸಿದರು.

2 ದಿನದಲ್ಲಿ ಎನ್ನೆಚ್ಚೆಂ ನೌಕರರ ವೇತನ 15% ಹೆಚ್ಚಳ: ಸಚಿವ ಸುಧಾಕರ್‌

14 ಮತ್ತು 15ನೇ ವಿಧಾನಸಭೆ ಅಧಿವೇಶನದ 10 ವರ್ಷಗಳಲ್ಲಿ ಮೂರು ಬಾರಿ ಆಯ್ಕೆಯಾಗಲು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ನಾನು ಈ ಸದನದ ಮೂಲಕ ಕೋಟಿ ನಮನಗಳನ್ನು ಅರ್ಪಿಸುತ್ತೇನೆ. 15ನೇ ವಿಧಾನಸಭೆ ರಾಜಕೀಯ ಕ್ಷೇತ್ರದಲ್ಲಿ ವಿಶೇಷವಾದ ಕಾಲಘಟ್ಟವಾಗಿದೆ. ಚುನಾವಣೆಗೆ ಮುಂಚೆ ಮೂರೂ ಪಕ್ಷಗಳೂ ತಮ್ಮ-ತಮ್ಮ ಪ್ರಣಾಳಿಕೆ ಮುಂದಿಟ್ಟುಕೊಂಡು ಆಯ್ಕೆ ಬಯಸಿದೆವು. ಆದರೆ ರಾಜ್ಯದ ಜನತೆ 2018ರಲ್ಲಿ ಯಾರಿಗೂ ಬಹುಮತ ನೀಡಲಿಲ್ಲ ಎಂದು ವಿವರಿಸಿದರು.

ಸವಾಲು ಜೊತೆಯೇ ಬಿಜೆಪಿಗೆ:

ಇಂತಹ ಸಂದರ್ಭದಲ್ಲಿ ನಾವು ಬಹಳಷ್ಟುಸವಾಲು ಇಟ್ಟುಕೊಂಡೇ ಬಿಜೆಪಿಗೆ ಬರಬೇಕಾಗಿತ್ತು. ಆದರೂ ಕೂಡಾ ಜನರು ಆಶೀರ್ವಾದ ಮಾಡಿದ ಮೇಲೆ ಸರ್ಕಾರ ರಚನೆಯಾಯಿತು. ಆದ್ದರಿಂದ 15ನೇ ವಿಧಾನ ಸಭೆ ರಾಜಕೀಯವಾಗಿ ಸಹ ಬಹಳ ವಿಶೇಷವಾಗಿರುವ ಸದನವಾಗಿದೆ. ಐತಿಹಾಸಿಕವಾಗಿ ಅನೇಕ ರಾಜಕೀಯ ಬೆಳವಣಿಗೆಗಳನ್ನು ಕಂಡಿದೆ. ಎರಡು ಬಾರಿ ಅತಿವೃಷ್ಟಿ, ಶತಮಾನದಲ್ಲಿ ಕಂಡುಕೇಳರಿಯದ ಸಾಂಕ್ರಮಿಕ ರೋಗ ಕೊರೋನಾವನ್ನು ಹಿಮ್ಮೆಟ್ಟಿಸುವ ಕಠಿಣ ಸವಾಲನ್ನೂ ಎದುರಿಸಿದೆವು ಎಂದು ಹೇಳಿದರು.

ನಮ್ಮ ನಾಯಕರಾದ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಮೊದಲ ಸಲ ನಾನು ಅತ್ಯಂತ ಕಿರಿಯ ಸದಸ್ಯನಾಗಿ ಆಯ್ಕೆಯಾದಾಗ ಮಹತ್ವದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ನೀಡಿದರು. ಕೋವಿಡ್‌ ಸಾಂಕ್ರಾಮಿಕ ಬಂದ ಬಳಿಕ ಎರಡೂ ಇಲಾಖೆಗಳನ್ನು ಒಬ್ಬರೇ ನಿರ್ವಹಿಸಿದರೆ ಮತ್ತಷ್ಟುಕ್ರಿಯಾಶೀಲವಾಗಿ, ಸಮರ್ಪಕವಾಗಿ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸಬಹುದು ಎಂದು ನನಗೆ ನೀಡಿ 30 ವರ್ಷದ ನಂತರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಒಬ್ಬರಿಗೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಪ್ರಣಾಳಿಕೆಗೆ ಕ್ಯುಆರ್‌ ಕೋಡಲ್ಲೂ ಸಲಹೆ ನೀಡಿ: ಸುಧಾಕರ್‌

ಅಚಲ ನಂಬಿಕೆ ಇಟ್ಟಿದ್ದ ಬಿಎಸ್‌ವೈ:

ಮಾರಕವಾದ ಸಾಂಕ್ರಾಮಿಕ ರೋಗವನ್ನು ಇಡೀ ವಿಶ್ವದಲ್ಲೇ ಅತ್ಯುತ್ತಮವಾಗಿ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಟ್ಟರು. ನನ್ನ ಮೇಲೆ ಯಡಿಯೂರಪ್ಪ ಅವರು ಅಚಲ ವಿಶ್ವಾಸ, ನಂಬಿಕೆ ಇಟ್ಟುಕೊಂಡಿದ್ದರು. ಎಲ್ಲ ಪಕ್ಷಗಳ ಶಾಸಕರು, ಅವರವರ ಕ್ಷೇತ್ರಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಹಳಷ್ಟುಕೆಲಸ ನಿರ್ವಹಿಸಿ ಜನರ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ ಇವತ್ತು 15ನೇ ವಿಧಾನಸಭೆ ಬಹಳ ವಿಶೇಷವಾಗಿದೆ ಎಂದು ಹೇಳಿದರು.

ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಮತ್ತು ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅತ್ಯಂತ ಒಳ್ಳೆಯ ಆಡಳಿತ ನೀಡಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನು ದುಸ್ಥಿತಿಯಿಂದ ಸುಸ್ಥಿತಿಗೆ ತರುವಂತಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಳೆದ 4 ವರ್ಷದಲ್ಲಿ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯುವಕರಿಗೆ ಆದ್ಯತೆ ನೀಡಿದ್ದಾರೆ. ಎಸ್‌.ಎಂ.ಕೃಷ್ಣ ಅವರು ವಿಧಾನ ಸಭಾಧ್ಯಕ್ಷರು ಆಗಿದ್ದಾಗಿನಿಂದಲೂ ನಾನು ನೋಡಿದ್ದೇನೆ. ನೀವು ಯುವ ಶಾಸಕರಿಗೆ ಒತ್ತು ನೀಡಿ ವಿಧಾನಸಭೆ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದ್ದೀರಿ. ವಿಶೇಷವಾದ ವಿಷಯಗಳ ಬಗ್ಗೆ, ಜನಸಾಮಾನ್ಯರು ಅಪೇಕ್ಷೆ ಪಡುವ ವಿಷಯಗಳ ಪ್ರಸ್ತಾವನೆ ಇಟ್ಟಿದ್ದೀರಿ ಎಂದು ಗುಣಗಾನ ಮಾಡಿದರು.

Latest Videos
Follow Us:
Download App:
  • android
  • ios