Asianet Suvarna News Asianet Suvarna News

ಪ್ರಜ್ವಲ್‌ ರೇವಣ್ಣ ವಾಪಸ್‌ ಸಮಾಧಾನ ತಂದಿದೆ: ಕುಮಾರಸ್ವಾಮಿ

ಪ್ರಜ್ವಲ್‌ರನ್ನು ದೇವೇಗೌಡರೆ ಕಳಿಸಿದ್ದಾರೆ ಎನ್ನುತ್ತಾರಲ್ಲ, ಅದಕ್ಕೆ ಸಿಎಂಗೆ ಉತ್ತರ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಅವರು ನೀವೇ ಪ್ರಜ್ವಲ್‌ರನ್ನು ಕಳುಹಿಸಿದ್ದೀರಿ ಎನ್ನುತ್ತಾರೆ, ಅದಕ್ಕಾಗಿ, ವಿದೇಶಕ್ಕೆ ನಿಮ್ಮ ಮಗ ಹೋದಾಗ ಏನಾಯ್ತು ಅಂತ ಹೇಳ್ದೆ ಅಷ್ಟೇ, ನೀವು ದೇವೇಗೌಡರ ಬಗ್ಗೆ ಮಾತನಾಡಿದ್ದಕ್ಕೆ ಹಾಗೆ ಹೇಳಿದೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ 

I am Happy For Hassan JDS MP Prajwal Revanna will be Back to India Says HD Kumaraswamy grg
Author
First Published May 28, 2024, 8:05 AM IST

ಕೋಲಾರ(ಮೇ.28): ಸಂಸದ ಪ್ರಜ್ವಲ್‌ ರೇವಣ್ಣಗೆ ವಾಪಸ್ ಬರುವಂತೆ ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದರು. ನಾನೂ ಎಚ್ಚರಿಕೆ ಕೊಟ್ಟಿದ್ದೇನೆ. ಈಗ ವಿಡಿಯೋ ಮಾಡಿ ಮೇ 31ಕ್ಕೆ ವಾಪಸ್‌ ಬರುವುದಾಗಿ ಹೇಳಿರುವುದು ಸಮಾಧಾನ ತಂದಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಪ್ರಜ್ವಲ್‌ರನ್ನು ದೇವೇಗೌಡರೆ ಕಳಿಸಿದ್ದಾರೆ ಎನ್ನುತ್ತಾರಲ್ಲ, ಅದಕ್ಕೆ ಸಿಎಂಗೆ ಉತ್ತರ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಅವರು ನೀವೇ ಪ್ರಜ್ವಲ್‌ರನ್ನು ಕಳುಹಿಸಿದ್ದೀರಿ ಎನ್ನುತ್ತಾರೆ, ಅದಕ್ಕಾಗಿ, ವಿದೇಶಕ್ಕೆ ನಿಮ್ಮ ಮಗ ಹೋದಾಗ ಏನಾಯ್ತು ಅಂತ ಹೇಳ್ದೆ ಅಷ್ಟೇ, ನೀವು ದೇವೇಗೌಡರ ಬಗ್ಗೆ ಮಾತನಾಡಿದ್ದಕ್ಕೆ ಹಾಗೆ ಹೇಳಿದೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಒಂದು ತಿಂಗಳ ಬಳಿ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ, ಶರಣಾಗತಿಗೆ ಶುಭ ದಿನ ಘೋಷಿಸಿದ ಸಂಸದ!

ಪ್ರಜ್ಬಲ್ ಅತ್ಯಾಚಾರ ಮಾಡಿ ಹೋಗಿದ್ದಾನೆ ಎನ್ನುತ್ತಾರೆ. ಹಾಗಿದ್ದರೆ, ಸಿದ್ದರಾಮಯ್ಯನವರ ಮಗ ಸಾಧುಗಳ ಜೊತೆ ವಿದೇಶಕ್ಕೆ ಹೋಗಿದ್ರಾ, ಸಿದ್ದರಾಮಯ್ಯನವರ ಪುತ್ರನ ಜೊತೆಗೆ ಹೋಗಿದ್ದವರೆಲ್ಲಾ ಸಾಧುಗಳಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

Latest Videos
Follow Us:
Download App:
  • android
  • ios