Asianet Suvarna News Asianet Suvarna News

75 ದಿನಗಳ ಬಳಿಕ ರಾಜ್ಯ 98% ಅನ್‌ಲಾಕ್‌: ಹೋಟೆಲ್, ಮಾಲ್‌ ಓಪನ್!

ನಾಳೆ ಹೋಟೆಲ್‌, ದೇಗುಲ, ಮಾಲ್‌ ಓಪನ್‌| ಎರಡೂವರೆ ತಿಂಗಳ ಲಾಕ್‌ ಅಂತ್ಯ| ಭಕ್ತರು, ಗ್ರಾಹಕರ ಸ್ವಾಗತಕ್ಕೆ ಸಕಲ ಸಿದ್ಧತೆ| ಕೊರೋನಾ ವೈರಸ್‌ ಹಾವಳಿ ಹೆಚ್ಚಳ: ಮೊದಲಿನಂತೆಯೇ ಜನ ಬರ್ತಾರಾ?

Hotel And Malls To Open In Karnataka From Monday State will unlock nearly 98 Percent
Author
Bangalore, First Published Jun 7, 2020, 7:14 AM IST

ನವದೆಹಲಿ(ಜೂ.07): ಕೊರೋನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್‌ ಆಗಿರುವ ದೇಗುಲ, ಮಸೀದಿ, ಚಚ್‌ರ್‍ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್‌ ಮಾಲ್‌, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಸೋಮವಾರದಿಂದ ಪುನಾರಂಭಗೊಳ್ಳಲಿವೆ.

ಮೇ 30ರಂದು 5ನೇ ಹಂತದ ಲಾಕ್‌ಡೌನ್‌ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ಜೂ.8ರಿಂದ ಧಾರ್ಮಿಕ ಕೇಂದ್ರ, ಶಾಪಿಂಗ್‌ ಮಾಲ್‌, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಿದೆ. ಈ ಸಂಬಂಧ ಜೂ.3 ಬುಧವಾರ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಎಲ್ಲ ಕೇಂದ್ರಗಳು ಭಕ್ತಾದಿಗಳು ಹಾಗೂ ಗ್ರಾಹಕರನ್ನು ಸ್ವಾಗತಿಸಲು ಸಕಲ ಮುನ್ನೆಚ್ಚರಿಕೆ ಹಾಗೂ ಸಿದ್ಧತೆ ಕ್ರಮಗಳನ್ನೂ ಕೈಗೊಳ್ಳುತ್ತಿವೆ. ಆದರೆ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲಿನಂತೆ ಭಕ್ತಾದಿಗಳು ಹಾಗೂ ಗ್ರಾಹಕರು ಬರುತ್ತಾರಾ ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ.

ರಾಜ್ಯದಲ್ಲಿ 5000 ದಾಟಿದ ಕೊರೋನಾ: ಒಂದೇ ದಿನ 378 ಕೇಸು!

ಪ್ರಸಿದ್ಧ ದೇವಸ್ಥಾನವಾಗಿರುವ ತಿರುಪತಿ- ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಜೂ.8ರಿಂದ ಸಿಬ್ಬಂದಿ 3 ದಿನ ರಿಹರ್ಸಲ್‌ ನಡೆಸಲಿದ್ದಾರೆ. ಬಳಿಕ ಜೂ.11ರಿಂದ ಭಕ್ತಾದಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದೇ ರೀತಿ ಹಲವು ಧಾರ್ಮಿಕ ಕೇಂದ್ರಗಳು ದಿನಾಂಕ ಪ್ರಕಟಿಸಿವೆ.

ಎರಡೂವರೆ ತಿಂಗಳ ಬಳಿಕ ಧಾರ್ಮಿಕ ಕೇಂದ್ರಗಳು, ಮಾಲ್‌ಗಳು, ಹೋಟೆಲ್‌- ರೆಸ್ಟೋರೆಂಟ್‌ಗಳು ತೆರೆಯಲ್ಪಡುತ್ತಿವೆ. ಇವುಗಳ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರ ಹಲವು ಕಟ್ಟುಪಾಡುಗಳನ್ನು ವಿಧಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರವೇಶಕ್ಕೂ ಮುನ್ನ ಸ್ಯಾನಿಟೈಸರ್‌ ಬಳಸಿ ಕೈ ಶುಭ್ರಗೊಳಿಸಿಕೊಳ್ಳಬೇಕು ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಕೆ. ಆರ್‌. ಮಾರುಕಟ್ಟೆ ಆರಂಭವಾಗುವುದು ಡೌಟ್‌!

ಇದೇ ವೇಳೆ ಹವಾನಿಯಂತ್ರಕ ಯಂತ್ರಗಳ ಗರಿಷ್ಠ, ಕನಿಷ್ಠ ತಾಪಮಾನವನ್ನು ಸೂಚಿಸಿದ್ದು, 24ರಿಂದ 30 ಡಿಗ್ರಿಯೊಳಗೆ ಉಷ್ಣಾಂಶ ಕಾಯ್ದುಕೊಳ್ಳಬೇಕು ಎಂದು ನಿರ್ದೇಶಿಸಿದೆ. ಧಾರ್ಮಿಕ ಕೇಂದ್ರಗಳಲ್ಲಿ ಪ್ರಸಾದ ವಿತರಿಸುವಂತಿಲ್ಲ. ತೀರ್ಥ ಪ್ರೋಕ್ಷಣೆ ಮಾಡುವಂತಿಲ್ಲ. ಭಜನೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳುವಂತಿಲ್ಲ ಎಂದು ಹೇಳಲಾಗಿದೆ. ಹೋಟೆಲ್‌ಗಳಲ್ಲಿ ಶೇ.50ರಷ್ಟುಗ್ರಾಹಕರು ಇರುವಂತೆ ನೋಡಿಕೊಳ್ಳಬೇಕು. ಧಾರ್ಮಿಕ ಕೇಂದ್ರ, ಹೋಟೆಲ್‌, ರೆಸ್ಟೋರೆಂಟ್‌, ಮಾಲ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲಿವೇಟರ್‌, ಎಸ್ಕಲೇಟರ್‌ಗಳಲ್ಲೂ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸೂಚಿಸಲಾಗಿದೆ.

Follow Us:
Download App:
  • android
  • ios