ಬೆಂಗಳೂರು(ಜೂ.07): ನಗರದ ವಲಸೆ ಕಾರ್ಮಿಕರು ಹಾಗೂ ಹೊರ ರಾಜ್ಯಕ್ಕೆ ಹೋಗುವವರ ತಾತ್ಕಾಲಿಕ ಕ್ವಾರಂಟೈನ್‌ಗೆ ಪ್ರತಿಷ್ಠಿತ ಮತ್ತು ಐತಿಹಾಸಿಕ ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು (ಕೆ.ಆರ್‌.ಮಾರುಕಟ್ಟೆ) ಬಳಸುತ್ತಿರುವುದರಿಂದ ಸೋಮವಾರದಿಂದ ಮಾರುಕಟ್ಟೆಆರಂಭಗೊಳ್ಳುವುದು ಅನುಮಾನ.

ರಾಜಸ್ಥಾನ, ಬಿಹಾರ ಸೇರಿದಂತೆ ಹೊರ ರಾಜ್ಯಕ್ಕೆ ಹೋಗಲು ಸಿದ್ಧವಾಗಿರುವ ವಲಸೆ ಕಾರ್ಮಿಕರು ಸೇರಿದಂತೆ ಇತರರನ್ನು ಕೆ.ಆರ್‌. ಮಾರುಕಟ್ಟೆಯಲ್ಲಿ ತಾತ್ಕಾಲಿಕ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ಲೌನ್‌ಡೌನ್‌ ಸಡಿಲಿಕೆಯಾದರೂ ಜೂ.8ರಿಂದ ಕೆ.ಆರ್‌.ಮಾರುಕಟ್ಟೆಆರಂಭವಾಗುವ ಸಾಧ್ಯತೆ ಕಡಿಮೆ.

ಈ ಕುರಿತು ಪ್ರತಿಕ್ರಿಯೆ ನೀಡಿ ಪಶ್ಚಿಮ ವಲಯದ ಜಂಟಿ ಆಯುಕ್ತ ಎನ್‌.ಚಿದಾನಂದ, ವಲಸೆ ಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ಹಾಗೂ ಬಸ್‌ ಹತ್ತಿಸಲು ತಾತ್ಕಾಲಿಕವಾಗಿ ಕೆ.ಆರ್‌. ಮಾರುಕಟ್ಟೆಬಳಸಿಕೊಳ್ಳಲಾಗುತ್ತಿದ್ದು, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಪೊಲೀಸ್‌ ಇಲಾಖೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

3 ತಿಂಗಳ ನಂತರ ಮನೆಯಿಂದ ಹೊರ ಬಂದ ಬಾಲಿವುಡ್ ತಾರೆಯರು

ಸರ್ಕಾರದ ಆದೇಶದ ಮೇರೆಗೆ ವಿವಿಧ ರಾಜ್ಯಗಳಿಗೆ ಹೋಗುವವರನ್ನು ತಾತ್ಕಾಲಿಕವಾಗಿ ಕೆ.ಆರ್‌.ಮಾರುಕಟ್ಟೆಯಲ್ಲಿ ಆಶ್ರಯದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆ.ಆರ್‌.ಮಾರುಕಟ್ಟೆಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸದ್ಯಯಾರು ಹೊರ ರಾಜ್ಯಕ್ಕೆ ಹೋಗುವವರು ಇಲ್ಲ. ವಿವಿಧ ವಾರ್ಡ್‌ಗಳಲ್ಲಿನ ಪ್ರಯಾಣಿಕರನ್ನು ಇಲ್ಲಿಗೆ ಕಳುಹಿಸುತ್ತಿರುವುದರಿಂದ ಸಮಸ್ಯೆಆಗುತ್ತಿದೆ. ಬೆಂಗಳೂರಿನಿಂದ ರಾಜಸ್ಥಾನಕ್ಕೆ ಶನಿವಾರ 1,500 ಜನ ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ ಎಂದು ಕೆ.ಆರ್‌ ಮಾರುಕಟ್ಟೆಯ ಪೊಲೀಸ್‌ ಠಾಣಾ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

450ರ ಗಡಿ ದಾಟಿದ ಸೋಂಕಿತರ ಸಂಖ್ಯೆ: ಸೋಂಕಿತರಲ್ಲಿ 7 ಮಂದಿಗೆ ಐಎಲ್‌ಐ ಲಕ್ಷಣ

ಬೆಂಗಳೂರು ನಗರದಲ್ಲಿ ಶನಿವಾರ ಹೊಸದಾಗಿ ಒಟ್ಟು 18 ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 452ಕ್ಕೆ ಏರಿಕೆಯಾಗಿದೆ.

ಶನಿವಾರ ಪತ್ತೆಯಾದ 18 ಕೊರೋನಾ ಸೋಂಕಿತರ ಪೈಕಿ ಏಳು ಪ್ರಕರಣಗಳು ಶೀತಜ್ವರ ಮಾದರಿ ಅನಾರೋಗ್ಯ (ಐಎಲ್‌ಐ) ಸಂಬಂಧಿಸಿದ ಪ್ರಕರಣಗಳಾಗಿವೆ. ಇಬ್ಬರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಆಗಮಿಸಿದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟರೆ, ಉಳಿದ ಏಳು ಪ್ರಕಣಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಗ್ಯಇಲಾಖೆ ಮಾಹಿತಿ ನೀಡಿದೆ.

ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಸೋಂಕು

ರಾಜಾಜಿನಗರ ಮಾರುತಿ ಮಂದಿ ವಾರ್ಡ್‌ ನಾಲ್ವರು ಆಂಧ್ರಪ್ರದೇಶದ ಆನಂತಪುರಕ್ಕೆ ಅಂತ್ಯಕ್ರಿಯೆಗೆಂದು ಹೋಗಿ ಮೇ 28ರಂದು ಬೆಂಗಳೂರಿಗೆ ವಾಪಾಸ್‌ ಆಗಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮೂರು ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗಡೆ ಮಾಹಿತಿ ನೀಡಿದ್ದಾರೆ.

ಐವರು ಬಿಡುಗಡೆ:

ಸೋಂಕಿನಿಂದ ಗುಣಮುಖರಾಗಿ ಶನಿವಾರ ಐವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 276 ಏರಿಕೆಯಾಗಿದೆ. 162 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಮಂದಿ ಮೃತಪಟ್ಟಿದ್ದಾರೆ.

ಕೊರೋನಾ ಭಯ: ರೊಮ್ಯಾನ್ಸ್‌ಗೆ ನೋ ಎಂದ ಸೂರ್ಯಕಾಂತಿ ನಟಿ

78 ವಾರ್ಡ್‌ಗಳಲ್ಲಿ ಕೊರೋನಾ

ಈವರೆಗೆ ಬಿಬಿಎಂಪಿಯ 198 ವಾರ್ಡ್‌ಗಳ ಪೈಕಿ 78 ವಾರ್ಡ್‌ಗಳಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿವೆ. ಅದರಲ್ಲಿ 33 ವಾರ್ಡ್‌ಗಳಲ್ಲಿ ಯಾವುದೇ ಕೊರೋನಾ ಸೋಂಕು ಇಲ್ಲದ ಕಾರಣ ಆ ವಾರ್ಡ್‌ಗಳನ್ನು ಕಂಟೈನ್ಮೆಂಟ್‌ ಮುಕ್ತಗೊಳಿಸಿ ಹಸಿರು ವಾರ್ಡ್‌ ಎಂದು ಘೋಷಿಸಲಾಗಿದೆ. 45 ವಾರ್ಡ್‌ಗಳ 50 ಪ್ರದೇಶಗಳನ್ನು ಸೋಂಕಿತರು ಇರುವ ಕಾರಣಕ್ಕೆ ಕಂಟೈನ್ಮೆಂಟ್‌ ಮಾಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.