ಹೆಜ್ಜೇನು ದಾಳಿಗೆ ಹೆದರಿ ಬಾವಿಗೆ ಹಾರಿದ ಯುವಕ!
ಹೆಜ್ಜೇನು ದಾಳಿಗೆ ಹೆದರಿ ಯುವಕನೊಬ್ಬ ಬಾವಿಗೆ ಹಾರಿದ ಘಟನೆ ಭಾನುವಾರ ನಡೆದಿದ್ದು, ಆತನನ್ನು ಸ್ಥಳೀಯರು ಸೇರಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಗ್ರಾಮದ ಯುವಕ ರಾಜು ಹೆಜ್ಜೇನು ದಾಳಿಗೆ ಒಳಗಾಗಿ ಬಾವಿಗೆ ಹಾರಿದ್ದ ಯುವಕ.
ಹನೂರು (ನ.20): ಹೆಜ್ಜೇನು ದಾಳಿಗೆ ಹೆದರಿ ಯುವಕನೊಬ್ಬ ಬಾವಿಗೆ ಹಾರಿದ ಘಟನೆ ಭಾನುವಾರ ನಡೆದಿದ್ದು, ಆತನನ್ನು ಸ್ಥಳೀಯರು ಸೇರಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಗ್ರಾಮದ ಯುವಕ ರಾಜು ಹೆಜ್ಜೇನು ದಾಳಿಗೆ ಒಳಗಾಗಿ ಬಾವಿಗೆ ಹಾರಿದ್ದ ಯುವಕ.
ಹನೂರು ಪಟ್ಟಣದ ಹೆಚ್ಚುವರಿ ತಹಸೀಲ್ದಾರ್ ಕಚೇರಿ ಬಳಿ ಬರುವ ನೀರಿನ ಟ್ಯಾಂಕ್‌ನಲ್ಲಿ ಇದ್ದ ಹೆಜ್ಜೇನು ಏಕಾಏಕಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಓಡಾಡುತ್ತಿದ್ದ ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಪಟ್ಟಣದ ಆರ್ ಎಸ್ ದೊಡ್ಡಿ ಯುವಕ ರಾಜು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು 100 ಮೀಟರ್ ಆಳದ ಬಾವಿಗೆ ಬಿದ್ದಿದ್ದಾರೆ. ಜಮೀನಿನ ಮಾಲೀಕರು ಮತ್ತು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
Kolar: ಪ್ರತಿಭಟನೆ ವೇಳೆ ಸಂಸದ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ
ಹಾಸ್ಟೆಲ್ ವಿದ್ಯಾರ್ಥಿಗಳಿಗೂ ದಾಳಿ
ಪಟ್ಟಣದ ಬಾಲಕರ ವಿದ್ಯಾರ್ಥಿನಿಲಯದಲ್ಲಿದ್ದ ಭಾನುವಾರ ರಜೆಯಿಂದಾಗಿ ವಿದ್ಯಾರ್ಥಿಗಳು ಸಹ ಅಲ್ಲೇ ಇದ್ದ ಕಾರಣ ಹಲವರಿಗೆ ಕಚ್ಚಿದೆ. ಇದೇ ರಸ್ತೆಯಲ್ಲಿ ಓಡಾಡುತ್ತಿದ್ದ ಇನ್ನೂ ಕೆಲವರಿಗೂ ಕಚ್ಚಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವರು ಚಿಕಿತ್ಸೆ ಪಡೆದುಕೊಂಡಿದ್ದಾರೆ
ಸರ್ಕಾರಿ ರಜೆ ಇದ್ದ ಕಾರಣ ಈ ಭಾಗದಲ್ಲಿ ಕೆಲವರು ಮಾತ್ರ ಓಡಾಡುತ್ತಿದ್ದರು. ಇತರೆ ದಿನಗಳಲ್ಲಾಗಿದ್ದರೆ ಸರ್ಕಾರಿ ಕಚೇರಿ ಕೆಲಸಗಳಿಗೆ ಬರುವಂತಹ ಹಲವರ ಮೇಲೂ ಹೆಜ್ಜೇನು ದಾಳಿ ನಡೆಸುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಟ್ಯಾಂಕ್‌ನಲ್ಲಿ ಕಟ್ಟಿರುವ ಹೆಜ್ಜೇನನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ಸಿಗುತ್ತೆ 4 ತರಹದ ಜೇನು ತುಪ್ಪ, ಸಿಹಿಯಷ್ಟೆ ಅಲ್ಲ ಕಹಿ ಜೇನು ಕೂಡ ಇದೆ!
ಹೆಚ್ಚುವರಿ ತಹಸೀಲ್ದಾರ್ ಕಚೇರಿ ಬಳಿ ಇರುವ ಓವರ್‌ಹೆಡ್ ಟ್ಯಾಂಕ್ ಕೆಳಭಾಗದಲ್ಲಿ ಕಟ್ಟಿರುವ ಹೆಜ್ಜೇನು ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಹೆಜ್ಜೇನು ಕಚ್ಚಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದೇನೆ.
ಗುರುಪ್ರಸಾದ್, ತಹಸೀಲ್ದಾರ್, ಹನೂರು ತಾಲೂಕು.