ಬಿಳಿಗಿರಿರಂಗನ ಬೆಟ್ಟದಲ್ಲಿ ಸಿಗುತ್ತೆ 4 ತರಹದ ಜೇನು ತುಪ್ಪ, ಸಿಹಿಯಷ್ಟೆ ಅಲ್ಲ ಕಹಿ ಜೇನು ಕೂಡ ಇದೆ!

ಬಿಳಿಗಿರಿರಂಗನ ಬೆಟ್ಟದಲ್ಲಿ ನಾಲ್ಕು ತರದ ಜೇನುತುಪ್ಪ ಸಿಗುತ್ತದೆ ಕಡ್ಡಿ ಜೇನಿನ ಜೇನಿನ ತುಪ್ಪ, ಹೆಜ್ಜೇನು ಜೇನು ತುಪ್ಪ, ಕಿರುಜೇನಿನ ಜೇನುತುಪ್ಪ, ಕಹಿ ಜೇನುತುಪ್ಪ, ಪ್ರಮುಖವಾಗಿ   ಜೇನು  ಸಿಹಿ  ಅಷ್ಟೇ  ಅಲ್ಲ  ಕಹಿಯಾಗಿಯು  ಇರುತ್ತೆ  ಅಂತಾರೆ  ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿ ಬಿಳಿಗಿರಿರಂಗನ ಬೆಟ್ಟದ ಗಿರಿಜನರು.

there are 4 types of honey available in Biligirirangana Hills gow

ವರದಿ: ಪುಟ್ಟರಾಜು. ಆರ್. ಸಿ.  ಏಷಿಯಾನೆಟ್  ಸುವರ್ಣ  ನ್ಯೂಸ್ 

ಚಾಮರಾಜನಗರ (ಫೆ.19): ಜೇನು ತುಪ್ಪ ಅಂದರೆ ಸಾಕು ಎಲ್ಲರ ಬಾಯಲ್ಲು ನೀರು ಬರುತ್ತೆ, ಜೇನುಗೂಡು ನೋಡಿದರಂತು ಜೇನು ತುಪ್ಪ ಸವಿಯಲೇ ಬೇಕೆನಿಸುತ್ತದೆ ಆದರೆ  ಸಿಹಿ ಜೇನಷ್ಟೇ ಅಲ್ಲ ಕಹಿ ಜೇನು ಕೂಡ ಇದೆ, ಸವಿದಿದ್ದೀರಾ? ಜೇನು ಅಂದ್ರೆ ಸಿಹಿ, ಆದ್ರೆ ಇಲ್ಲಿ ಸಿಗುತ್ತೆ ಕಹಿ ಜೇನು. ಜೇನು ತುಪ್ಪ ಅಂದ್ರೆ ಸಹಜವಾಗಿಯೇ ಅದು ಸಿಹಿಯಾಗಿರುತ್ತೆ ಎಂಬುದು ಎಲ್ಲರಿಗು ಗೊತ್ತಿರುವ ವಿಷಯ. ಆದ್ರೆ  ಬಿಳಿಗಿರಿರಂಗನ ಬೆಟ್ಟದಲ್ಲಿ ನಾಲ್ಕು ತರದ ಜೇನುತುಪ್ಪ ಸಿಗುತ್ತದೆ ಕಡ್ಡಿ ಜೇನಿನ ಜೇನಿನ ತುಪ್ಪ, ಹೆಜ್ಜೇನು ಜೇನು ತುಪ್ಪ, ಕಿರುಜೇನಿನ ಜೇನುತುಪ್ಪ, ಕಹಿ ಜೇನುತುಪ್ಪ, ಪ್ರಮುಖವಾಗಿ   ಜೇನು  ಸಿಹಿ  ಅಷ್ಟೇ  ಅಲ್ಲ  ಕಹಿಯಾಗಿಯು  ಇರುತ್ತೆ  ಅಂತಾರೆ  ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿ ಬಿಳಿಗಿರಿರಂಗನ ಬೆಟ್ಟದ ಗಿರಿಜನರು.

ದಟ್ಟವಾದ ಕಾಡಿನ ಪಕೃತಿಯ ಸೌಂದರ್ಯದ ನಡುವೆ ಬೆಳೆದು ನಿಂತಿರುವ  ನೆರಳೆ, ಬೀಟೆ, ತಾರೆ ಯಂತಹ ಮರಗಳ  ಹೂವಿನ ಮಕರಂಧ  ಹೀರುವ  ಜೇನಿನ  ನೊಣಗಳು  ಉತ್ಪಾದನೆ  ಮಾಡುವ  ಜೇನುತುಪ್ಪ ಕಹಿಯಾಗಿರುತ್ತದೆಯಂತೆ. ಹೀಗಾಗಿ  ಕಾಡಿಗೆ ಜೇನು ಸಂಗ್ರಹಿಸಿಸಲು ಹೋಗುವ ಗಿರಿಜನರು ರುಚಿ ನೋಡಿ ಕಹಿ ಜೇನನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ಕಹಿ ಜೇನನ್ನು   ಬಿಳಿಗಿರಿರಂಗನ ನಾಥಸ್ವಾಮಿ ಸೋಲಿಗರ  ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ ಅಡವಿ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡ್ತಿದ್ದಾರೆ. ಈ ಘಟಕದಲ್ಲಿ ಕೆಲಸ ಮಾಡುತ್ತಿರುವವರೆಲ್ಲರು ಗಿರಿಜನರೆ ಆಗಿರುವುದರಿಂದ ಒಂದಷ್ಟು  ಸೋಲಿಗರ ಕುಟುಂಬಕ್ಕೆ ಉದ್ಯೋಗ ಸಿಕ್ಕಿದೆ.

Chitradurga: ಜೇನು ತುಪ್ಪದಿಂದ ಸಾಬೂನು ಫೇಶ್‌ವಾಶ್: ರೈತನ ಉತ್ಪನ್ನಗಳಿಗೆ ಭಾರಿ ಡಿಮ್ಯಾಂಡ್

ಇಷ್ಟು ದಿನ ಕಾಡಲ್ಲಿ ಸಂಗ್ರಹಿಸಿದ ಎಲ್ಲಾ ಜೇನನ್ನು ಒಟ್ಟಿಗೆ ಸಂಸ್ಕರಣೆ ಮಾಡಲಾಗುತ್ತಿತ್ತು. ಹೀಗೆ ಸಂಸ್ಕರಣೆ ಮಾಡಿದ ಜೇನು ತುಪ್ಪ ವನ್ನು ಬೇರ್ಪಡಿಸದೆ ಹಾಗೆ ಮಾರಾಟ ಮಾಡಲಾಗುತ್ತಿತ್ತು. ಅಗ ಸಿಹಿಯ ಜೊತೆ ಕಹಿಯು ಮಿಶ್ರಿತವಾಗಿ ರುಚಿಯಲ್ಲಿ ವ್ಯತ್ಯಾಸವಾಗುತ್ತಿತ್ತು.  ಆದರೆ ಸಕ್ಕರೆ ಖಾಯಿಲೆ ಇರುವವರು ಈ ಸಿಹಿ ಜೇನು ತುಪ್ಪ ನೋಡಿ ಸಿಹಿ ಇದೆ ಎಂದು ತಿನ್ನದೆ ದೂರ ಉಳಿಯುತ್ತಿದ್ದರು  ಇದೀಗ  ಕಹಿ  ಜೇನನ್ನೇ  ಪ್ರತ್ಯೇಕ  ಸಂಗ್ರಹಿಸಿ  ಸಂಸ್ಕರಣೆ  ಮಾಡಲಾಗುತ್ತಿದೆ.  ಕಹಿ ಜೇನು ಹೆಚ್ಚು ಔಷದೀಯ ಗುಣವುಳ್ಳದ್ದಾಗಿದೆ , ಎಲ್ಲರೂ ಸೇವಿಸಬಹುದಾಗಿದೆ ಅದರಲ್ಲೂ ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಸೋಲಿಗರ ಮುಖಂಡ ಸಿ ಮಾದೇಗೌಡ.

ಹೊಟ್ಟೆ ಬೊಜ್ಜಿನ ಚಿಂತೇನಾ ? ಅಡುಗೆ ಮನೆಯಲ್ಲಿಯೇ ಇದೆ ಮದ್ದು

ಆರ್ಯವೇದದಲ್ಲಿ ಜೇನು ತುಪ್ಪ ಕ್ಕೆ ಹೆಚ್ಚಿನ ಮಹತ್ವ ಇದೆ.  ಮನುಷ್ಯನ ಆರೋಗ್ಯದ ದೃಷ್ಟಿಯಲ್ಲಿ ಜೇನುತುಪ್ಪ ಇಂದಿಗೂ ಮಹತ್ತರ ಪಾತ್ರ ವಹಿಸುತ್ತಿದೆ.  ಇದೀಗ ಕಹಿ ಜೇನಿನಲ್ಲಿ ಹೆಚ್ಚು ಔಷಧೀಯ ಗುಣಗಳಿದ್ದು ಹೆಚ್ಚಿನ ಬೇಡಿಕೆ ಇದೆಯಂತೆ.  ಹಾಗಾಗಿಯೇ ಇದನ್ನೇ ಪ್ರತ್ಯೇಕ ವಾಗಿ ಸಂಸ್ಕರಿಸಿ, ಬಾಟ್ಲಿಂಗ್ ಮಾಡಿ ಮಾರಾಟ ಮಾಡಲಾಗುತ್ತಿದೆ.

Latest Videos
Follow Us:
Download App:
  • android
  • ios