Kolar: ಪ್ರತಿಭಟನೆ ವೇಳೆ ಸಂಸದ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ರೈತ ವಿರೋಧಿ ನೀತಿ ಮತ್ತು ಜನ ವಿರೋಧಿ ನಿಲುವುಗಳನ್ನು ಖಂಡಿಸಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ಹಠಾತ್ತನೇ ಹೆಜ್ಜೇನು ಗುಂಪು ದಾಳಿ ಮಾಡಿದೆ.
ಕೋಲಾರ (ಸೆ.09): ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ರೈತ ವಿರೋಧಿ ನೀತಿ ಮತ್ತು ಜನ ವಿರೋಧಿ ನಿಲುವುಗಳನ್ನು ಖಂಡಿಸಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ಹಠಾತ್ತನೇ ಹೆಜ್ಜೇನು ಗುಂಪು ದಾಳಿ ಮಾಡಿದ ಪರಿಣಾಮ ಪ್ರತಿಭಟನಾಕಾರರು, ಪೊಲೀಸರು ಹಾಗೂ ಮಾಧ್ಯಮದವರು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು.
ನಾಲ್ವರು ಆಸ್ಪತ್ರೆಗೆ ದಾಖಲು: ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಮಾತು ಮುಗಿಸುವ ವೇಳೆಗೆ ಹೆಜ್ಜೇನಿನ ಜೇನು ನೊಣಗಳು ಏಕಾಏಕಿ ದಾಳಿ ಮಾಡಿದಾಗ ಸಂಸದ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪೋಲಿಸರು ಹೆಜ್ಜೇನು ಕಾಟ ತಪ್ಪಿಸಿಕೊಳ್ಳಲು ದಿಕ್ಕುಪಾಲಾಗಿ ಓಡಿದರು. ಸುಮಾರು 20ಕ್ಕೂ ಹೆಚ್ಚು ಜನರನ್ನು ಜೇನು ನೊಣಗಳು ಕಚ್ಚಿದ್ದು, ಇದರಲ್ಲಿ ನಾಲ್ವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದೆ. ಉಳಿದರು ಖಾಸಗಿ ಹಾಗೂ ಜಾಲಪ್ಪ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದರು ಎಂದರು.
ಉದಯನಿಧಿ ಹಿಂದೂ ಧರ್ಮವನ್ನು ವಿರೋಧಿಸುವ ತಲೆಕೆಟ್ಟ ರಾಜಕಾರಣಿ: ಸಂಸದ ರಾಘವೇಂದ್ರ
ಯಾರೋ ಕಿಡಿಗೇಡಿಗಳು ಜಿಲ್ಲಾಡಳಿತ ಕಚೇರಿಯ ಕಟ್ಟಡದಲ್ಲಿದ್ದ ಜೇನುಗೊಡಿಗೆ ಕಲ್ಲೆಸೆದು ಜೇನು ನೊಣಗಳನ್ನು ಎಬ್ಬಿಸಿದ ಹಿನ್ನಲೆಯಲ್ಲಿ ಜೇನುನೊಣಗಳ ದಂಡು ಪ್ರತಿಭಟನಕಾರರ ಮೇಲೆ ದಾಳಿ ಮಾಡಿ ಸಿಕ್ಕಿದವರನೆಲ್ಲಾ ಕಚ್ಚಿತು, ಪ್ರತಿಭಟನಕಾರರು ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡುವಂತಾಯಿತು ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತದ ವೈಫಲ್ಯತೆಗಳ ಟೀಕಿಸುತ್ತಾ ಜಿಲ್ಲಾಧಿಕಾರಿಗಳನ್ನು ಬಿಡದಂತೆ ಎಂದು ಘೋಷಿಸಿ ಧಿಕ್ಕಾರಗಳನ್ನು ಕೊಗಿದ ಹಿನ್ನಲೆಯಲ್ಲಿ ಕಿಡಿಗೇಡಿಗಳ ಮೂಲಕ ಶಾಂತ ರೀತಿ ಇದ್ದ ಜೇನುಗೊಡಿಗೆ ಕಲ್ಲೇಸೆಯುವಂತೆ ಮಾಡಿ, ಜೇನು ದಂಡು ಪರೋಕ್ಷವಾಗಿ ನಮ್ಮ ಮೇಲೆ ದಾಳಿ ಮಾಡುವಂತೆ ಮಾಡಿ ಪ್ರತಿಭಟನೆಯನ್ನು ವಿಫಲಗೊಳಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ಬರಗಾಲ ಘೋಷಣೆ ಮಾಡಿ: ಬೊಮ್ಮಾಯಿ
ಜಿಲ್ಲಾಧಿಕಾರಿ ಕಾಂಗ್ರೆಸ್ ಏಜೆಂಟ್: ಕಾಂಗ್ರೆಸ್ ಪಕ್ಷದ ಆಡಳಿತದ ವೈಫಲ್ಯತೆಗಳ ಟೀಕಿಸುತ್ತಾ ಜಿಲ್ಲಾಧಿಕಾರಿಗಳನ್ನು ಬಿಡದಂತೆ ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ಘೋಷಿಸಿ ಧಿಕ್ಕಾರಗಳನ್ನು ಕೊಗಿದ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಮೂಲಕ ಶಾಂತ ರೀತಿ ಇದ್ದ ಜೇನುಗೊಡಿಗೆ ಕಲ್ಲೇಸೆಯುವಂತೆ ಮಾಡಿ, ಜೇನು ದಂಡು ಪರೋಕ್ಷವಾಗಿ ನಮ್ಮ ಮೇಲೆ ದಾಳಿ ಮಾಡುವಂತೆ ಮಾಡಿ ಪ್ರತಿಭಟನೆಯನ್ನು ವಿಫಲಗೊಳಿಸಿದ್ದಾರೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದರು.