Asianet Suvarna News Asianet Suvarna News

ಯಾವ ದೇಶ ಬಡತನದಲ್ಲಿತ್ತೋ, ಇವತ್ತು ಆ ದೇಶ ಜಗತ್ತಿನ 4ನೇ ಆರ್ಥಿಕ ಶಕ್ತಿಯಾಗಿದೆ: ಗೃಹ ಸಚಿವ ಪರಮೇಶ್ವರ್

ಆರ್ಯವೈಶ್ಯ ಸಮುದಾಯ ಶೈಕ್ಷಣಿಕವಾಗಿ ಇವತ್ತು ಎಷ್ಟು ಮುಂದುವರಿದಿದೆ ಎಂದರೆ ನನಗೆ ಇವತ್ತು ಬಹಳ ಸಂತೋಷವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂತಸ ವ್ಯಕ್ತಪಡಿಸಿದರು.

Home Minister Dr G Parameshwar participated in Arya Vaishya Pratibhotsava program at bengaluru rav
Author
First Published Nov 5, 2023, 12:18 PM IST

ಬೆಂಗಳೂರು (ನ.5): ಆರ್ಯವೈಶ್ಯ ಸಮುದಾಯ ಶೈಕ್ಷಣಿಕವಾಗಿ ಇವತ್ತು ಎಷ್ಟು ಮುಂದುವರಿದಿದೆ ಎಂದರೆ ನನಗೆ ಇವತ್ತು ಬಹಳ ಸಂತೋಷವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂತಸ ವ್ಯಕ್ತಪಡಿಸಿದರು.

ಇಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ನಡೆದ  ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ 13ನೇ ಪ್ರತಿಭೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಶಿಕ್ಷಣ ಬಹುದೊಡ್ಡ ಬದಲಾವಣೆಯನ್ನ ನಮ್ಮ‌ ದೇಶದಲ್ಲಿ ತಂದಿದೆ. ದೇಶದ ಅರ್ಥಿಕ ಬೆಳವಣಿಗೆ ಶಿಕ್ಷಣದ ಕೊಡುಗೆ ಬಹಳ ಮುಖ್ಯ. ಯಾವ ದೇಶ ಬಡತನದ ದೇಶವಾಗಿತ್ತು, ಇವತ್ತು ಆ ದೇಶ ಆರ್ಥಿಕತೆಯಲ್ಲಿ ಪ್ರಪಂಚಕ್ಕೆ ನಾಲ್ಕನೇ ಸ್ಥಾನಕ್ಕೆ ಬಂದಿದ್ದು ಶಿಕ್ಷಣದಿಂದ. ಜಾತಿ, ಧರ್ಮ‌ ನೋಡದೆ ಯುವಕರು ಹಾಗೂ ರೈತರು‌ ದೇಶ ಕಟ್ಟಿದ್ದಾರೆ. ಕರ್ನಾಟಕ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನ ತಂದಿದೆ. ಅದರಲ್ಲೂ ವಾಸವಿ ಸಮಾಜ ಶಿಕ್ಷಣದಲ್ಲಿ ಮಾಡಿರುವ ಸಾಧನೆ ಹೆಮ್ಮೆ ವಿಚಾರ. 14 ಜನ ವಾಸವಿ ಸಮಾಜದ ವಿಜ್ಞಾನಿಗಳು ಇಸ್ರೋದಲ್ಲಿ ಇದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ತಮ್ಮ‌ ಸಮುದಾಯದ ಪ್ರತಿಭಾನಿತ್ವದ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡುವುದು ಶ್ಲಾಘನೀಯ ಎಂದರು.

 

ಗ್ಯಾರಂಟಿ ಯೋಜನೆಗಳಿಗೆ ಸ್ವಲ್ಪ ಹಣಕಾಸು ಸಮಸ್ಯೆ ಇದೆ: ಸಚಿವ ಪರಮೇಶ್ವರ್‌

ಗೋಪಾಲಯ್ಯರನ್ನು ಹಾಡಿ ಹೊಗಳಿದ ಗೃಹ ಸಚಿವ:

ಗೋಪಾಲಯ್ಯ ಅವರು ನೋಡಲು ಬಹಳ ಸುಂದರವಾಗಿದ್ದಾರೆ. ಅವರದ್ದು ಮಗುವಿನಂಥ ಮನಸ್ಸು, ನಾವು ಒಂದೇ ಸಂಪುಟದಲ್ಲಿ ಕೆಲಸ ಮಾಡಿದ್ವಿ. ಅವರು ಕೆಲಸದಿಂದ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಕೆ ಗೋಪಾಲಯ್ಯ, ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್ ಪಿ ರವಿಶಂಕರ್, MLC ಡಿ ಎಸ್ ಅರುಣ್ ಮಾಜಿ ಶಾಸಕ ಎನ್ ಎಲ್ ನರೇಂದ್ರ ಬಾಬು ಗಣ್ಯರು ಸೇರಿದಂತೆ ರಾಜ್ಯದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಂದ್ರಯಾನ-3 ಹಾಗೂ ಸೂರ್ಯಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ಯವೈಶ್ಯ ಸಮುದಾಯದ 14 ಇಸ್ರೋ ವಿಜ್ಞಾನಿಗಳಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಶಾಸಕ ಗೋಪಾಲಯ್ಯರಿಂದ ಗೌರವ ಸಮರ್ಪಣೆ ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಛತ್ತೀಸ್‌ಗಢಕ್ಕೆ ಕಾಂಗ್ರೆಸ್‌ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!

Follow Us:
Download App:
  • android
  • ios