ನಕ್ಸಲ್ ಬೆಂಬಲಿಗರ ಮೇಲೂ ಕಣ್ಣು ,ಹೆಚ್ಚು ಕಮ್ಮಿಯಾದರೆ ಕ್ರಮ: ಅರಗ ಜ್ಞಾನೇಂದ್ರ ಎಚ್ಚರಿಕೆ

* ನಕ್ಸಲ್ ನಿಗ್ರಹ ಪಡೆಯನ್ನ ಹಿಂಪಡೆಯುವ ಮಾತೇ ಇಲ್ಲ
* ನಕ್ಸಲ್ ಬೆಂಬಲಿಗರ ಮೇಲೂ ಕಣ್ಣು
* ಚಿಕ್ಕಮಗಳೂರಿನಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ

Home Minister araga jnanendra Talks about Naxal rbj

ಚಿಕ್ಕಮಗಳೂರು, (ಜೂನ್.22): ರಾಜ್ಯದಲ್ಲಿ ನಕ್ಸಲ್ ನಿಗ್ರಹ ಪಡೆಯನ್ನ ಹಿಂಪಡೆಯುವ ಮಾತೇ ಇಲ್ಲ ಎಂದು ಗೃಹಸಚಿವ ಅರಗಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. 

ಅವರು ಇಂದು(ಬುಧವಾರ) ಚಿಕ್ಕಮಗಳೂರು ನಗರದಲ್ಲಿ ಪೊಲೀಸ್ ಕಛೇರಿ ಎದುರು ಪೊಲೀಸ್ ವೃತ್ತ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿ, ರಾಜ್ಯದಲ್ಲಿ ಶೇಕಡ 100ರಷ್ಟು ನಿಗ್ರಹವಾಗೋವರೆಗೂ ನಕ್ಸಲ್ ನಿಗ್ರಹ ಪಡೆಯನ್ನು ಹಿಂಪಡೆಯಲ್ಲ, ಒಂದು ಬಾರಿ ಪರಿಚಯಿಸಿದ್ದೇವೆ, ಕಾದು ನೋಡುತ್ತೇವೆ. ಇತ್ತೀಚೆಗೆ ಹಲವು ನಕ್ಸಲ ನಾಯಕರ ಬಂಧನವಾಗಿದೆ ಎಂದು ಮಾಹಿತಿ ನೀಡಿದರು.

ಬೇರೆ ರಾಜ್ಯದವರು ಕ್ರಮಕೈಗೊಂಡಾಗ ಇಲ್ಲಿಗೆ ಬರ್ತಾರೆ, ಇಲ್ಲಿ ಕ್ರಮ ಕೈಗೊಂಡಾಗ ಅಲ್ಲಿಗೆ ಹೋಗ್ತಾರೆ, ಎ.ಎನ್.ಎಫ್.ಸಿಬ್ಬಂದಿ ಅಲ್ಲೇ ಇರಲಿ, ಈ ಬಗ್ಗೆ ಚರ್ಚೆಯೂ ಆಗಿದೆ. ಸದ್ಯಕ್ಕೆ ಇಲ್ಲಿ ನಕ್ಸಲ್ ಚಟುವಟಿಕೆ ಏನೂ ಇಲ್ಲ ತಿಳಿಸಿದರು. ಎಲ್ಲರನ್ನೂ ಅರೆಸ್ಟ್ ಮಾಡಿದ್ದೇವೆ, ಅವರು ಮಾಹಿತಿ ನೀಡಿದವರನ್ನೂ ಬಂಧಿಸಿದ್ದೇವೆ. ನಕ್ಸಲ್ ಬೆಂಬಲಿಗರ ಮೇಲೂ ಕಣ್ಣಿಟ್ಟಿದ್ದೇವೆ. ಹೆಚ್ಚು ಕಮ್ಮಿಯಾದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು. .ಸಂಪೂರ್ಣ ನಿಗ್ರಹವಾಗುವವರೆಗೂ ಅವರನ್ನು ಅಲ್ಲೆ ಇಡೋದು ಒಳಿತು ಎಂದು ಭಾವಿಸಿದ್ದೇವೆ ಈ ಬಗ್ಗೆ ಚರ್ಚೆಯಾಗಿದೆ ಎಂದರು. ಬಿಜೆಪಿ ಮುಖಂಡ ಮಹಮದ್ ಅನ್ವರ್ ಹತ್ಯೆ ಪ್ರಕರಣ ತನಿಖೆಯಲ್ಲಿದೆ. ಇದೂವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಸಿಓಡಿ ಎಡಿಜಿಪಿ ಬಳಿ ನಿನ್ನೆಯೂ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿ ಆಗುತ್ತೇನೆ: ಜನಾರ್ದನ ರೆಡ್ಡಿ

ದೇಶದ  ಕಾನೂನು ಎಲ್ಲರಿಗೂ ಒಂದೇ
ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೇಸ್ ನಾಯಕರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆಸಿ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ  ಎಲ್ಲರಿಗೂ ಒಂದೇ ಕಾನೂನು, ಈ ನೆಲದ ಕಾನೂನುನ್ನು ಎಲ್ಲರೂ ಗೌರವಿಸಬೇಕು ಎಂದುತಿಳಿಸಿದರು. ತಪ್ಪಿದ್ದಾಗ ಇಡಿ ಕರೆದು ವಿಚಾರಣೆ ಮಾಡಿದಾಗ ಪ್ರತಿಭಟನೆ ಮಾಡ್ತಾರೆ, ಅವರಿಗೆ ಈ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ, ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಳ್ತಾರೆ, ಜನ ತುಚ್ಛವಾಗಿ ನೋಡ್ತಾರೆ ಎಂದರು.

ಉದ್ಧವ ಠಾಕ್ರೆ ಉದ್ದಟತನ ಮಾಡಿ ಸಿಎಂ ಆದ್ರು
ಮಹಾರಾಷ್ಟ್ರ ಅತೃಪ್ತ ಶಾಸಕರು ರೇಸಾರ್ಟ್ ಹೋಗಿರೋ ಹಿನ್ನೆಲೆ 2019 ಬಿಜೆಪಿ-ಶಿವಸೇನೆ ಒಟ್ಟಿಗೆ ಜನರ ಬಳಿ ಹೋಗಿದ್ರು, ಜನ ತೀರ್ಪು ನೀಡಿದ್ದರು, ಉದ್ಧವ ಠಾಕ್ರೆ ಉದ್ದಟತನ ಮಾಡಿ ೮ ಪಕ್ಷ ಸೇರಿಸಿಕೊಂಡು ಸಿಎಂ ಆಗಿದ್ದರು ಹೇಳಿದರು.ಎಲ್ಲರಿಗೂ ಗೊತ್ತಿತ್ತು ಇದು ಬಹಳ ದಿನ ನಡೆಯಲ್ಲ, ಈ ಸರ್ಕಾರಕ್ಕೆ ಆಯಸ್ಸು ಕಡಿಮೆ ಅಂತ  ಇಂದು ಅದರಂತೆಯೇ ಎಲ್ಲಾ ನಡೆಯುತ್ತಿದೆ, ಇದು ಮೊದಲೇ ಗೊತ್ತಿತ್ತು ಎಂದರುಔರಾದ್ಕರ್ ವರದಿ ಪರಿಶೀಲನೆ ಮಾಡುತ್ತಿದ್ದೇವೆ. ರೆಟ್ರಾಸ್ಪೆಕ್ಟೀವ್ ಆಗಿ ಕೊಡದ ಕಾರಣ ಹಾಗಾಗಿ ಶೇ.10, 20 ಜನರಿಗೆ ತೊಂದರೆಯಾಗಿದೆ ಉಳಿದವರಿಗೆ ಚೆನ್ನಾಗಿದೆ ಅದನ್ನು ಯೋಚನೆ ಮಾಡುತ್ತೇವೆ ಎಂದರು. ಆಧುನಿಕ ತಂತ್ರಜ್ಞಾನವನ್ನು ಕಲಿಯಬೇಕಿರುವ ದೃಷ್ಟಿಯಿಂದ ರಾಜ್ಯದಲ್ಲಿ ಪೊಲೀಸರಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿರುವುದು ವೈಜ್ಞಾನಿಕವಾದ ವಿಚಾರ. ಮುಂದೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಮೂಲಕವೆ ಎಲ್ಲವೂ ನಡೆಯುತ್ತದೆ ಹಾಗಾಗಿ ಕಷ್ಟಪಟ್ಟು ಕಲಿತರೆ ಅವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ : ಸಂತಸ
ರಾಷ್ಟ್ರಪತಿ ಅಭ್ಯರ್ಥಿಗೆ ಬುಡಕಟ್ಟುಜನಾಂಗದ ದ್ರೌಪದಿ ಮುರ್ಮು ಅವರನ್ನು ಎನ್ಡಿಎ ಆಯ್ಕೆ ಮಾಡಿದೆ. ತುಂಬಾ ಅನುಭವಸ್ಥ ಮಹಿಳೆ ಅದೆಲ್ಲದಕ್ಕಿಂತ ಹೆಮ್ಮೆ ಎಂದರೆ ದೇಶದಲ್ಲೆ ಅತ್ಯಂತ ಕಟ್ಟ ಕಡೆಯ ಎಸ್ಟಿ ಜನಾಂಗದ ಮಹಿಳೆನ್ನು ಆಯ್ಕೆ ಮಾಡಿರುವುದು. ಅವರನ್ನು ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸಂತೋಷ ಕೊಟ್ಟಿದ್ದು ಬಿಜೆಪಿ ಎಲ್ಲಾ ಮುಖಂಡರಿಗೆ ಅಭಿನಂದಿಸುತ್ತಾ ಗೆಲುವಿಗಾಗಿ ಹಾರೈಸಿದರು.

Latest Videos
Follow Us:
Download App:
  • android
  • ios