ನರೇಂದ್ರ ಮೋದಿ-ಅಮಿತ್ ಶಾ ಇಬ್ಬರೂ ದೇಶ ಮುನ್ನಡೆಸುವ ಜೋಡೆತ್ತುಗಳು: ಸುತ್ತೂರು ಶ್ರೀಗಳು ಬಣ್ಣನೆ
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜೋಡೆತ್ತುಗಳು. ಒಂದು ಗಾಡಿ ಮುನ್ನೆಡೆಯೋಕೆ ಜೋಡಿ ಎತ್ತುಗಳು ಹೇಗೆ ಮುಖ್ಯವೋ ಹಾಗೆಯೇ ದೇಶವನ್ನ ಇವ್ರಿಬ್ಬರೂ ಸೇರಿ ದೇಶವನ್ನು ಸಮೃದ್ಧಿಯಿಂದ ಮುನ್ನಡೆಸುತ್ತಿದ್ದಾರೆ ಎಂದು ಸುತ್ತೂರು ದೇಶಿಕೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು.
ಮೈಸೂರು (ಫೆ.11): ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜೋಡೆತ್ತುಗಳು. ಒಂದು ಗಾಡಿ ಮುನ್ನೆಡೆಯೋಕೆ ಜೋಡಿ ಎತ್ತುಗಳು ಹೇಗೆ ಮುಖ್ಯವೋ ಹಾಗೆಯೇ ದೇಶವನ್ನ ಇವ್ರಿಬ್ಬರೂ ಸೇರಿ ದೇಶವನ್ನು ಸಮೃದ್ಧಿಯಿಂದ ಮುನ್ನಡೆಸುತ್ತಿದ್ದಾರೆ ಎಂದು ಸುತ್ತೂರು ದೇಶಿಕೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು.
ಆದಿ ಜಗದ್ಗುರು ಶಿವರಾತ್ರೀಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಶ್ರೀಗಳು, ಕಳೆದ ಆರು ದಿನಗಳಿಂದ ಆದಿ ಜಗದ್ಗುರು ಶಿವರಾತ್ರೀಶ್ವರ ಜಾತ್ರ ಮಹೋತ್ಸವ ನಡೆಯುತ್ತಿದೆ. ಇಂದು ಜಾತ್ರಾ ಮಹೋತ್ಸವ ಸಂಪನ್ನವಾಗಿರುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವ್ರು ಭಾಗಿಯಾಗಿದ್ದಾರೆ. ಅಮಿತ್ ಶಾ ಅವರು ಈ ಕಾರ್ಯಕ್ರಮಕ್ಕೆ ಬಂದಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ನಾವು ಏನೇ ಗಳಿಸಿದ್ರೂ ಅದನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ: ಸುತ್ತೂರು ಜಾತ್ರೆಯಲ್ಲಿ ಡಿಕೆಶಿ ಮಾತು
ಸುತ್ತೂರು ಜಾತ್ರೆ ಇದು ನಮ್ಮ ಜಾತ್ರೆ ಅಂತ ಜನ ಬರುತ್ತಾರೆ. ತವರು ಮನೆಗೆ ಹೋದರೆ ಹೇಗೆ ಸಂತೋಷವಾಗುತ್ತೋ ಹಾಗೆ ಜನ ಸಂತೋಷದಿಂದ ಇಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದೆ. ನಮ್ಮ ಗ್ರಾಮೀಣ ಜನರಲ್ಲಿ ಧೈರ್ಯ,ವಿಶ್ವಾಸವನ್ನು ಮೂಡಿಸುವ ಎಲ್ಲಾ ಕೆಲಸಗಳು ನಡೆದಿವೆ. ಇಲ್ಲಿಗೆ ಯಾತ್ರಾರ್ಥಿಗಳು ಬರುವುದನ್ನು ನೋಡಿ ಶಾಮನೂರು ಶಿವಶಂಕರಪ್ಪನವರು ಸುಮಾರು 700 ಜನ ತಂಗುವ ಒಂದು ಅತಿಥಿ ಗೃಹ ನಿರ್ಮಿಸಿಕೊಟ್ಟಿದ್ದಾರೆ. ಅದು ಅಮಿತ್ ಶಾ ಅವರಿಂದಲೇ ಲೋಕಾರ್ಪಣೆ ಆಗುವ ಕಾಲ ಕೂಡಿ ಬಂದಿದೆ ಎಂದರು.
ಮಾಂಸಾಹಾರ ತಿಂದು ಸಿಎಂ ಸುತ್ತೂರು ಮಠಕ್ಕೆ ಹೋಗಿಲ್ಲ: ಬಿಜೆಪೀದು ಬರೀ ಇದೇ ಆಯ್ತು: ಎಂಬಿ ಪಾಟೀಲ್ ಗರಂ
ಸರ್ದಾರ್ ವಲ್ಲಭಭಾಯಿ ಪಟೇಲ್ ಉಕ್ಕಿನ ಮನುಷ್ಯರಾಗಿದ್ರು. ಅದೇ ರೀತಿ ಅಮಿತ್ ಶಾರವರು ಸಹ ಉಕ್ಕಿನ ವ್ಯಕ್ತಿಯೂ ಹೌದು,ರಾಜಕೀಯ ಚಾಣಕ್ಯರು ಹೌದು. ಅಮಿತ್ ಶಾ ಅವರು ವೇದಗಳು, ಉಪನಿಷತ್, ರಾಮಾಯಣ, ಮಹಾಭಾರತ ಎಲ್ಲವನ್ನೂ ಅಧ್ಯಯನ ಮಾಡಿದ್ದಾರೆ. ಮೈಸೂರು ಅರಮನೆಯಲ್ಲಿದ್ದ ಒಬ್ಬ ಗುರುಗಳು ಕೇಶವ ಪಂಡಿತ್ ಗುಜರಾತ್‌ಗೆ ಹೋಗಿದ್ರು. ಅವರಿಂದ ಅಮಿತ್ ಶಾಗೆ ಶಿಕ್ಷಣ ಸಿಕ್ತು. ಇದ್ರಿಂದ ಅಮಿತ್ ಶಾ ಅವರು ಇಷ್ಟೊಂದು ಜ್ಞಾನವಂತರಾಗಿದ್ದಾರೆ ಎಂದು ಅಮಿತ್ ಶಾರನ್ನು ಶ್ರೀಗಳು ಹಾಡಿ ಹೊಗಳಿದರು.