Asianet Suvarna News Asianet Suvarna News

ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನ ಕಳ್ಳತನ ಯತ್ನ ನಡೆಸಿದ್ದ ಆರೋಪಿಗಳ ಸೆರೆ

ಚಂದ್ರಗುತ್ತಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆ​ಸಿದ್ದ ಆರೋಪಿಗಳನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. ದೇಗುಲ ಸಮಿತಿಗೆ ಸೇರಿ​ಸಿ​ಕೊ​ಳ್ಳ​ಲಿಲ್ಲ ಎಂಬ ದ್ವೇಷ​ದಿಂದ ಸಮಿತಿ ಅಧ್ಯ​ಕ್ಷರ ವಿರುದ್ಧ ಸೇಡು ತೀರಿ​ಸಿ​ಕೊ​ಳ್ಳುವ ಸಲು​ವಾಗಿ ಈ ಕೃತ್ನ ನಡೆ​ಸಲಾ​ಗಿದೆ ಎಂಬುದು ವಿಚಾ​ರಣೆಯಿಂದ ಬಯ​ಲಾ​ಗಿದೆ.

Historical famous Chandragutti Sri Renukamba temple theft accused arrested in soraba police rav
Author
First Published Aug 15, 2023, 8:50 AM IST | Last Updated Aug 15, 2023, 8:50 AM IST

ಸೊರಬ (ಆ.15): ತಾಲೂಕಿನ ಚಂದ್ರಗುತ್ತಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆ​ಸಿದ್ದ ಆರೋಪಿಗಳನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. ದೇಗುಲ ಸಮಿತಿಗೆ ಸೇರಿ​ಸಿ​ಕೊ​ಳ್ಳ​ಲಿಲ್ಲ ಎಂಬ ದ್ವೇಷ​ದಿಂದ ಸಮಿತಿ ಅಧ್ಯ​ಕ್ಷರ ವಿರುದ್ಧ ಸೇಡು ತೀರಿ​ಸಿ​ಕೊ​ಳ್ಳುವ ಸಲು​ವಾಗಿ ಈ ಕೃತ್ನ ನಡೆ​ಸಲಾ​ಗಿದೆ ಎಂಬುದು ವಿಚಾ​ರಣೆಯಿಂದ ಬಯ​ಲಾ​ಗಿದೆ.

ಚಂದ್ರಗುತ್ತಿ(Chandragutti) ಗ್ರಾಮದ ಭೋವಿ ಕಾಲೋನಿಯ ಪ್ರವೀಣ (33), ದೇವರಾಜು (50) ಹಾಗೂ ಭೀಮಪ್ಪ (35) ಪ್ರಕ​ರ​ಣದ ಬಂಧಿತ ಆರೋಪಿಗಳು.ದೇವಸ್ಥಾನದ ಕಮಿಟಿಗೆ ಸೇರಲು ದೇವರಾಜು ಅರ್ಜಿ ಸಲ್ಲಿಸಿದ್ದ. ಆದರೆ ಈತನ ಅರ್ಜಿಯನ್ನು ತಿರಿಸ್ಕರಿಸಲಾಗಿತ್ತು. ಅರ್ಜಿ ತಿರಸ್ಕೃತಗೊಳ್ಳಲು ದೇವಸ್ಥಾನ ಕಮಿಟಿಯ ಹಾಲಿ ಅಧ್ಯಕ್ಷರೇ ಕಾರಣ ಎಂದು ದೇವರಾಜು ಭಾವಿಸಿದ್ದ ಆರೋಪಿ. ಹೀಗಾಗಿ  ಕಳಂಕ ಬಂದರೆ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಸಬಹುದೆಂದು ಸಂಚು ಮಾಡಿದ್ದ. ಈ ಕೃತ್ಯಕ್ಕೆ ಪ್ರವೀಣ್ ಮತ್ತು ಭೀಮಪ್ಪ ಕೈಜೋಡಿಸಿದ್ದರು. ಮೂವರು ಸೇರಿಕೊಂಡು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದಂತೆ ನಾಟಕವಾಡಿದ್ದರು. 

ಚಂದ್ರಗುತ್ತಿ ರೇಣುಕಾಂಬೆ ಬೆಳ್ಳಿ ಮುಖ​ವಾ​ಡ​ವನ್ನೇ ಕಿತ್ತೆ​ಸೆದ ಕಳ್ಳ​ರು!

 ಕಳೆದ ಆಗಸ್ಟ್‌ 3ರಂದು ಶ್ರೀ ರೇಣುಕಾಂಬಾ ದೇವಸ್ಥಾನದ(Renukamba temple chandragutti) ಬಾಗಿಲು ಬೀಗ ಮುರಿದು ದೇವಿಯ ಗರ್ಭಗುಡಿಯ ಸುರಂಗದಲ್ಲಿರುವ ಬೆಳ್ಳಿಮುಖವಾಡವನ್ನು ಕಿತ್ತು ದೇವಸ್ಥಾನದ ಪ್ರಾಂಗಣದಲ್ಲಿ ಎಸೆದಿದ್ದರು. ಅಲ್ಲದೇ ಕಾಣಿಕೆ ಹುಂಡಿ ಒಡೆಯಲು ವಿಫಲ ಯತ್ನ ನಡೆ​ಸಿ​ದ್ದರು.

ಈ ಸಂಬಂಧ ಆಗಸ್ಟ್‌ 3ರಂದು ದೇವಸ್ಥಾನ ಪ್ರಭಾರ ಕಾರ್ಯನಿರ್ವಾಣಾಧಿಕಾರಿ ಶಿವಪ್ರಸಾದ್‌ ದೂರು ನೀಡಿ​ದ್ದರು. ಪ್ರಕರಣ ದಾಖಲಿಸಿಕೊಂಡ ಸೊರಬ ಪೊಲೀಸರು ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿ​ದ್ದರು. ಸೊರಬ ಪೊಲೀಸರ ತಂಡ ಆಗಸ್ಟ್‌ 14ರಂದು ಕಡೆಗೂ ಕಿಡಿ​ಗೇ​ಡಿ​ಗ​ಳ​ನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಸೊರಬ: ಚಂದ್ರಗುತ್ತಿ ರೇಣುಕೆ ಕ್ಷೇತ್ರದಲ್ಲಿ ಸೌಲ​ಭ್ಯ​ಗಳ ಕೊರ​ತೆ

ಜಿಲ್ಲಾ ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಅನಿಲ್‌ಕುಮಾರ್‌ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸೊರಬ ವೃತ್ತ ನಿರೀಕ್ಷಕ ರಾಜಶೇಖರ್‌ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾ​ಚ​ರಣೆ ನಡೆ​ಸ​ಲಾ​ಯಿತು. ನಾಗರಾಜ್‌ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಮಾಳಪ್ಪ ವೈ. ಚಿಪ್ಪಲಕಟ್ಟಿನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಪಿ.ಸಿ. ರಾಘವೇಂದ್ರ, ವಿನಯ್‌, ಸಂದೀಪ್‌ ತಂಡ ಆರೋಪಿಗಳ ಪತ್ತೆಯಲ್ಲಿ ಯಶಸ್ವಿಯಾಗಿದೆ. ಪೊಲೀ​ಸರ ಉತ್ತಮ ಕಾರ್ಯಕ್ಕೆ ಇಲಾಖೆ ಹಾಗೂ ಭಕ್ತರಿಂದ ಪ್ರಶಂಸೆ ವ್ಯಕ್ತ​ವಾ​ಗಿದ್ದು, ಅಭಿನಂದಿಸಿದ್ದಾರೆ.

Latest Videos
Follow Us:
Download App:
  • android
  • ios