ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ಸರ್ಕಾರ ಗೂಂಡಾ ಪ್ರವೃತ್ತಿಯ ಕಿಡಿಗೇಡಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣದಲ್ಲಿ ಸರ್ಕಾರದ ಕುಮ್ಮಕ್ಕಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಫೆ.22): ಕಾಂಗ್ರೆಸ್ ಸರ್ಕಾರ ಗೂಂಡಾ ಪ್ರವೃತ್ತಿಯ ಕಿಡಿಗೇಡಿಗಳನ್ನ ಪ್ರೋತ್ಸಾಹಿಸುತ್ತಿದೆ. ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿರುವ ರೀತಿ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಎಲ್ಲ ಕೃತ್ಯಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಕಾರಣವಾಗಿದೆ ಎಂದು ಆರೋಪಿಸಿದರು.
ಮತಾಂಧರಿಂದ ಪೊಲೀಸರಲ್ಲೂ ಭಯ ತುಂಬುವ ಷಡ್ಯಂತ್ರ:
ಈ ಹಿಂದೆ ಡಿಜೆ ಹಳ್ಳಿ ಕೆಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಘಟನೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಎಲ್ಲ ಘಟನೆಗಳಿಗೂ ಒಂದಕ್ಕೊಂದು ಹೊಂದಾಣಿಕೆ ಇವೆ. ಇದು ಒಂದು ರೀತಿ ಷಡ್ಯಂತ್ರ ನಡೆಯುತ್ತಿದೆ. ಈ ರೀತಿ ದಾಳಿ ಮಾಡುವ ಮೂಲಕ ತಮ್ಮ ಏರಿಯಾದಲ್ಲಿರುವ ಹಿಂದೂಗಳನ್ನು ಓಡಿಸುವುದು, ಕಳ್ಳರಂತೆ ಕಾನೂನುಬಾಹಿರ ಕೃತ್ಯಗಳನ್ನ ಮುಂದುವರಿಸುವುದು ಆ ಮೂಲಕ ಪೊಲೀಸರಿಗೂ ಭಯ ಹುಟ್ಟಿಸುವ ಕೆಲಸ ಮುಸ್ಲಿಮರಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಅವನು ಪ್ರತಾಪ್ ಸಿಂಹ ಚೇಲಾ..! | Abdul Razak on Udayagiri riot | Suvarna News
ಈ ಮತಾಂಧರಿಗೆ ಸಂವಿಧಾನ ಅನ್ವಯ ಆಗಲ್ಲವಾ?
ಉದಯಗಿರಿ ಗಲಾಟೆ ಪ್ರಕರಣದಲ್ಲಿ ಸಾವಿರಾರು ಮುಸ್ಲಿಂ ಗೂಂಡಾಗಳನ್ನು ಗುರುತಿಸಿದ್ದೇ ಪೊಲೀಸರು ಮಾಡಿದ ತಪ್ಪಾ? ಆ ನಾಲ್ಕು ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಏಕೆ? ಮತಾಂಧರು ಕಲ್ಲು ತೂರಿದಾಗಲೂ ಕೈಕಟ್ಟಿ ನಿಲ್ಲಬೇಕಿತ್ತ? ಅಲ್ಲಿ ಡ್ರಗ್ ಮಾಫಿಯಾ, ಗಾಂಜಾ, ಗ್ಯಾಸ್ ಫಿಲ್ಲಿಂಗ್ ಹೀಗೆ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿವೆ. ಅಷ್ಟೇ ಅಲ್ಲ ಕಾನೂನುಬಾಹಿರವಾಗಿ ಪಿಸ್ತೂಲ್, ಶಸ್ತ್ರಾಸ್ತ್ರಗಳ ಮಾರಾಟವೂ ನಡೆಯುತ್ತಿದೆ. ಗಾಂಜಾ ಅಫೀಮು ಮಾರಾಟ, ಹೆಲ್ಮೆಟ್ ಇಲ್ಲದೆ ಮೂರು ಮೂರು ಜನ ವಾಹನ ಸವಾರಿ ಮಾಡ್ತಾರೆ. ಇವರಿಗೆ ಕಾನೂನು ಪೊಲೀಸರ ಭಯವೇ ಇಲ್ಲ. ಈ ದೇಶದ ಸಂವಿಧಾನ ಕಾನೂನು ರೂಲ್ಸ್ ಇವರಾರಿಗೂ ಅನ್ವಯಿಸುವುದಿಲ್ಲವೇ. ಅವರಿಗೆ ಗೊತ್ತಿದೆ ಈ ಕಾಂಗ್ರೆಸ್ ಸರ್ಕಾರದಲ್ಲಿ ಏನು ಮಾಡಿದರೂ ನಡೆಯುತ್ತದೆ, ವೋಟುಗಳಿಗಾಗಿ ಏನೇ ಮಾಡಿದರೂ ಈ ಸರ್ಕಾರಕ್ಕೆ ಬಂಧಿಸುವ ಶಿಕ್ಷಿಸುವ ಧೈರ್ಯವಿಲ್ಲ ಅನ್ನೋದು. ಈ ಎಲ್ಲ ಕೃತ್ಯಗಳಿಗೆ ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣವೇ ಕಾರಣ ಎಂದು ಆರೋಪಿಸಿದರು.
ಇದನ್ನೂ ಓದಿ: ಮುಸಲ್ಮಾನರಲ್ಲಿ ಕುಡಿಯೋದಿಲ್ಲ.. ಆದರು ಸ್ವಲ್ಪ ಕುಡುಕರು ಇದ್ದಾರೆ | Abdul Razak on Udayagiri | Suvarna News
ಎಫ್‌ಐಆರ್ ನಲ್ಲಿ ಸಾವಿರ ಜನ, ಅರೆಸ್ಟ್ ಆಗಿದ್ದು ಇಬ್ಬರು!
ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಒಂದು ಪೂರ್ವನಿಯೋಜಿತ ಕೃತ್ಯ. ಮೊದಲೇ ಪ್ಲಾನ್ ಮಾಡಿಕೊಂಡು ಕೃತ್ಯವೆಸಗಿದ್ದಾರೆ. ಸಾವಿರಾರು ಜನ ಒಟ್ಟಿಗೆ ಸೇರಲು ಹೇಗೆ ಸಾಧ್ಯ. ಸಿಸಿಟಿವಿ ನೋಡಿದ್ರೆ ತಿಳಿಯುತ್ತೆ ಅದರಲ್ಲಿ ಸಾವಿರಾರು ಮತಾಂಧರು ಜಮಾಯಿಸಿದ್ದಾರೆ. ಪೊಲೀಸರ ಎಫ್‌ಐಆರ್ ನಲ್ಲಿ ಸಾವಿರ ಜನರು ಇದ್ದಾರೆ. ಆದರೆ ಅರೆಸ್ಟ್ ಮಾಡಿರುವುದು ಎಷ್ಟು ಜನ ? ಕೇವಲ ಇಬ್ಬರು ಮೂವರು? ಏಕೆ ತಡ ಮಾಡುತ್ತಿದ್ದಾರೆ. ಪೊಲೀಸರನ್ನು ತಡೆಯುತ್ತಿರುವವರು ಯಾರು? ಈ ಕಾಂಗ್ರೆಸ್ ನವರು ಪೊಲೀಸ್ ಠಾಣೆಗೆ ಕಲ್ಲು ತೂರಿದವರ ಬಗ್ಗೆ ಮಾತನಾಡಲ್ಲ, ಸತೀಶ್ ಬಗ್ಗೆ ಮಾತನಾಡುತ್ತಾರೆ.
ವಿವಾದಿತ ಪೋಸ್ಟ್ ಸತೀಶ್ ಹಾಕಿಯೇ ಇಲ್ಲ. ಒಂದು ವಾರದ ಹಿಂದಿನಿಂದಲೂ ಅದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಸತೀಶ್ ಡ್ರೈ ಫ್ರೂಟ್ ಫ್ಯಾಕ್ಟರಿ ಯಲ್ಲಿ 150 ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿಗೆ ಕೆಲಸವನ್ನು ಕೊಟ್ಟಿದ್ದಾನೆ. ಈ ಸ್ಟೇಟಸ್ ಅವರು ಹಾಕೇ ಇಲ್ಲ. ಆದರೆ ಇದೊಂದು ನೆಪದಲ್ಲಿ ಪೊಲೀಸರಿಗೆ ಭಯ ಹುಟ್ಟಿಸಬೇಕು ಎಂಬ ಷಡ್ಯಂತ್ರದಿಂದ ಈ ದಾಳಿ ನಡೆದಿದೆ ಎಂದರು
ಇದನ್ನೂ ಓದಿ: Udayagiri Riots | ಆರೋಪಿ ಸತೀಶ್ ಗಡಿಪಾರಿಗೆ ಪೊಲೀಸರ ಸಿದ್ಧತೆ
ಮೌಲ್ವಿ ಗಡಿಪಾರು ಮಾಡದೇ ಸತೀಶ್‌ರನ್ನ ಗಡಿಪಾರು ಮಾಡ್ತೀರಾ?
ವಿವಾದಿತ ಪೋಸ್ಟ್ ಹಾಕಿದ್ದಾರೆ. ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ ಸಾವಿರಾರು ಮತಾಂಧರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ್ದಕ್ಕೆ ಯಾವ ಶಿಕ್ಷೆ? ಅಲ್ಲಿ ಖುದ್ದಾಗಿ ಪ್ರಚೋದನೆ ನೀಡಿದ ಮೌಲ್ವಿಗೆ ಯಾವ ಶಿಕ್ಷೆ? ಮೌಲ್ವಿಯನ್ನ ಗಡಿಪಾರು ಮಾಡದೆ ಸತೀಶ್‌ರನ್ನ ಹೇಗೆ ಗಡಿಪಾರು ಮಾಡುತ್ತೀರಿ? ಸಂವಿಧಾನ ಕಾನೂನು ಎಲ್ಲರಿಗೂ ಒಂದೇ ನಾವು ರಾಜ್ಯಾದ್ಯಂತ ಹೋರಾಟ ಮಾಡ್ತೇವೆ. ಈ ಸರ್ಕಾರ ತಮ್ಮ ಮನಸಿಗೆ ಬಂದಂತೆ ಕಾನೂನು, ಪೊಲೀಸ್ ಇಲಾಖೆಯನ್ನ ದುರುಪಯೋಗಪಡಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಇರೋವರಿಗೂ ಹಿಂದೂಗಳಿಗೆ ನೆಮ್ಮದಿ ಇಲ್ಲ, ಸಂವಿಧಾನ, ಕಾನೂನು ಉಲ್ಲಂಘನೆಗೂ ಕೊನೆ ಇಲ್ಲ ಎಂದರು.
ಮತಾಂಧರನ್ನ ಹದ್ದುಬಸ್ತಿನಲ್ಲಿಡಿ, ಇಲ್ಲದಿದ್ರೆ ಆ ಕೆಲಸ ನಾವು ಮಾಡ್ತೇವೆ:
ತನ್ವೀರ್ ಸೇಠ್ ನಿಮ್ಮ ಮೇಲೆ ಸಹ ಅಟ್ಯಾಕ್ ಆಗಿದೆ. ಎಫ್‌ಐಆರ್ ತಡ ಆಗಿದ್ದರೆ ಧರಣಿ ಮಾಡಿ, ಕಲ್ಲು ಎಸೆಯುತ್ತಿರುವುದು ಏಕೆ? ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸರಿಗೆ ಭಯ ಹುಟ್ಟಿಸುವ ಕೆಲಸ ಮುಸ್ಲಿಮರು ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ ಕೂಡಲೇ ತಿದ್ದುಕೊಳ್ಳಿ ಇಲ್ಲದಿದ್ದರೆ ಕಾಂಗ್ರೆಸ್ ಅನ್ನು ಹಿಂದೂಗಳೇ ಓಡಿಸುತ್ತಾರೆ. ಕಾಂಗ್ರೆಸ್ ಮುಸ್ಲಿಂ ರಕ್ಷಕರು ಅವರು ಏನೂ ಮಾಡಿದ್ರೂ ನಡೆಯೋಲ್ಲ ಅನ್ನೋ ಭಾವನೆ ಅವರಿಗೆ ಇದೆ. ನೀವು ನಿಮ್ಮ ಸರ್ಕಾರ ತಡೆಯದಿದ್ದರೆ ಆ ಕೆಲಸ ನಾವು ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.
ಎಂ ಲಕ್ಷ್ಮಣ್‌ಗೆ ಎಚ್ಚರಿಕೆ:
ಉದಯಗಿರಿ ಘಟನೆಗೆ ಆರೆಸ್ಸೆಸ್ ಕಾರಣ ಎಂದಿದ್ದಾರೆ. ಎಂ ಲಕ್ಶ್ಮಣ್ ಹೇಳಿಕೆ ಕೊಡುವಾಗ ಎಚ್ಚರಿಕೆಯಿಂದ ಮಾತಾಡಲಿ. ಬಾಯಿಗೆ ಬಂದಿದ್ದು ಬೊಗಳುವುದು ನಿಲ್ಲಿಸಿ ವಾಸ್ತವ ಅರಿತು ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು.
ಮತಾಂಧರು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದಾಗ ಆರೆಸ್ಸೆಸ್ ಏಕೆ ಅಲ್ಲಿ ಬರುತ್ತಾರೆ? ನಿಮಗೆ ತಾಕತ್ ಇದ್ರೆ ಸಿಸಿಟಿವಿಯಲ್ಲಿ ಇದ್ದರೆ ತೋರಿಸಿ. ಬಾಯಿಗೆ ಬಂದಿದ್ದು ಬೊಗಳಬೇಡಿ ಎಂದರು. ಇದೇ ವೇಳೆ ಜನಜಾಗೃತಿ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ಪೊಲೀಸ್ ಇಲಾಖೆ ಎರಡು ಪಾರ್ಟಿ ಯವರು ಸಮಾವೇಶ ಮಾಡುವುದನ್ನು ನಿಲ್ಲಿಸಿದ್ದಾರೆ.
ಕಾನೂನು ಕ್ರಮ ಇರವಹುದು. ಪೊಲೀಸ್ ರವರು ರಕ್ಷಣೆ ಕೊಟ್ಟು, ರ್ಯಾಲಿ ಆಗಬೇಕು. ಹಿಂದೂಗಳಿಗೆ ರಕ್ಷಣೆಯನ್ನು ಕೊಡಬೇಕು. ಪೊಲೀಸ್ ಅಧಿಕಾರಿಗಳು ಉದಯಗಿರಿಗೆ ವರ್ಗಾವಣೆ ಆಗಲು ಭಯಭೀತಾರಾಗಿದ್ದಾರೆ. ಈ ಕಾಂಗ್ರೆಸ್ ಇವತ್ತು ಇರುತ್ತೆ ನಾಳೆ ತೊಲಗುತ್ತೆ. ಆದ್ರೆ ಪೊಲೀಸರು ಮತಾಂಧರ ಕೃತ್ಯಗಳ ಬಗ್ಗೆ ಹಗುರವಾಗಿ ತೆಗೆದುಕೊಳ್ಳಬಾರದು. ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೆ ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಬೇಕು. ದೇಶದ್ರೋಹ, ಕಾನೂನು ವಿರೋಧಿಸುವ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಎಂದರು.
ಇದನ್ನೂ ಓದಿ: ಉದಯಗಿರಿ ಪ್ರಕರಣ ಮುಚ್ಚಿಹಾಕಲು ಸರ್ಕಾರ ಯತ್ನ: ಕೇಂದ್ರ ಸಚಿವ ಜೋಶಿ ಗಂಭೀರ ಆರೋಪ! 'ಕಾನೂನು ಕ್ರಮ' ಗೃಹ ಸಚಿವರದ್ದು ಬರೀ ಮಾತು ?
ಸಚಿವ ರಾಜಣ್ಣ ಹೇಳಿಕೆಗೆ ಮುತಾಲಿಕ್ ಕಿಡಿ:
ಬಂಧನ ಭೀತಿಯಿಂದ ಗಲಾಟೆ ಆಯ್ತು ಅಂತೀರಿ? ಸಚಿವ ರಾಜಣ್ಣ ಹೇಳ್ತಾನೆ, ಆರೋಪಿಯನ್ನ ಠಾಣೆಗೆ ಕರೆತಂದಿದ್ಕ ಪೂಲೀಸರಿಗೆ ಕಾಮನ್‌ಸೆನ್ಸ್ ಇಲ್ಲ ಅಂತಾನೆ ಈ ಸಚಿವನಿಗೆ ಮೊದಲು ಕಾಮನ್‌ಸೆನ್ಸ್ ಇದೆನಾ? ಆರೋಪಿಯನ್ನ ಠಾಣೆಗೆ ಕರೆತರದೇ ಇನ್ನೆಲ್ಲಿಗೆ ಕರೆತರಬೇಕು? ಮುಸ್ಲಿಂ ಬಾಹುಳ್ಯ ಏರಿಯಾ ಅಲ್ಲಿಗೆ ಯಾಕೆ ಕರೆತರಬೇಕಿತ್ತು ಅಂತಾರೆ. ಸಚಿವನಾಗಿ ಇಂಥ ಹೇಳಿಕೆ ನೀಡುವವನ್ನ ಎಲ್ಲಿಯಾದರೂ ನೋಡಿದ್ದೀರಾ? ಏನು ಸಂದೇಶ ಕೊಡಲು ಹೊರಟಿದ್ದಾರೆ. ಮುಸ್ಲಿಂ ಬಾಹುಳ್ಯ ಪ್ರದೇಶ ಎಂದರೆ ಏಕೆ ಇವರಿಗೆ ಹೆದರಿಕೆ? ಬಂಧನ ಬೀತಿಯಿಂದ ಠಾಣೆ ಮೇಲೆ ಕಲ್ಲು ತೂರಬೇಕಾ? ಅನ್ಯಾಯ ಆದ್ರೆ ಧರಣಿ ಕೂಡಿ, ಉಪವಾಸ ಮಾಡಿ, ಶಾಂತಿಯುತ ಪ್ರತಿಭಟನೆ ಮಾಡಿ. ಅದನ್ನು ಬಿಟ್ಟು ಕಲ್ಲು ತೂರುತ್ತೀರಾ? ಇಂಥ ಮತಾಂಧರಿಗೆ ಕುಮ್ಮಕ್ಕು ಕೊಡುವ ಕೆಲಸ ರಾಜಣ್ಣನಂತ ಸಚಿವರು ಮಾಡುತಿದ್ದಾರೆ.
ಕಾಂಗ್ರೆಸ್ ನಾಯಕರು ಮುಸ್ಲಿಂ ಓಲೈಕೆ ನಿಲ್ಲಿಸಬೇಕು. ಇವತ್ತಲ್ಲ ನಾಳೆ ನಿಮಗೂ ತೊಂದರೆ ಕೊಡ್ತಾರೆ. ಸತೀಶ್ 150 ಮುಸ್ಲಿಮರಿಗೆ ಕೆಲಸ ಕೊಟ್ಟಿದ್ದಾನೆ. ಆತ ಮುಸ್ಲಿಂ ವಿರೋಧಿಯಾಗಿದ್ದರೆ ತನ್ನ ಫ್ಯಾಕ್ಟರಿಯಲ್ಲಿ ಅವರಿಗೆ ಕೊಡುತ್ತಿದ್ದನೇ? ಮುಂದೆ ಸತೀಶ್ ಮೇಲೆ ಯಾವುದೇ ಹಲ್ಲೆ ಮಾಡಿದ್ರೆ, ತೊಂದರೆ ಕೊಟ್ಟರೆ ನಾವು ಸುಮ್ಮನೆ ಕೂಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್
