Asianet Suvarna News Asianet Suvarna News

Pregnancy Act : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭಧರಿಸಿದ ಅಪ್ರಾಪ್ತೆ ಗರ್ಭಪಾತಕ್ಕೆ ಅನುಮತಿ

  • : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭಧರಿಸಿದ್ದ ಅಪ್ರಾಪ್ತೆಯು ಗರ್ಭಪಾತ
  • ಸಂತಾನೋತ್ಪತ್ತಿ ಆಯ್ಕೆಯು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ಭಾಗ ಎಂದ ಹೈ ಕೋರ್ಟ್
High Court Allows  Minor Rape Victim abortion snr
Author
Bengaluru, First Published Nov 26, 2021, 9:21 AM IST

 ಬೆಂಗಳೂರು (ನ.26): ಅತ್ಯಾಚಾರಕ್ಕೆ (Rape Case) ಗುರಿಯಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆಯು (Teen Girl) ಗರ್ಭಪಾತಕ್ಕೆ (abortion) ಮಾಡಿದ್ದ ಮನವಿ ತಿರಸ್ಕರಿಸಿದ ವೈದ್ಯಾಧಿಕಾರಿಗಳ (Doctors) ನಿರ್ಧಾರ ಒಪ್ಪದ ಹೈಕೋರ್ಟ್ (High court), ಸಂತಾನೋತ್ಪತ್ತಿ ಆಯ್ಕೆಯು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದ್ದು, ಭ್ರೂಣ (Fetus) ತೆಗೆಯುವಂತೆ ಆದೇಶಿಸಿದೆ. ಅತ್ಯಾಚಾರ ಸಂತ್ರಸ್ತೆಯೊಬ್ಬರು (Rape Victim) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.  ಅರ್ಜಿದಾರೆ ಅತ್ಯಾಚಾರಕ್ಕೊಳಗಾಗಿ ಗರ್ಭ (Pregnant) ಧರಿಸಿರುವ 16 ವರ್ಷದ ಅಪ್ರಾಪ್ತೆಯಾಗಿದ್ದಾರೆ. ಗರ್ಭಪಾತಕ್ಕೆ ಆಕೆ ಮಾಡಿದ ಮನವಿ ನಿರಾಕರಿಸಿದ ವೈದ್ಯಕೀಯ ಅಧಿಕಾರಿಗಳು, ಗರ್ಭ ಧರಿಸಿ 24 ವಾರ ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂದಿದ್ದಾರೆ. 

ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ (Pregnant) ಅಪ್ರಾಪ್ತೆಯನ್ನು (Teen Girl) ಬಲವಂತವಾಗಿ ಗರ್ಭ ಹೊರುವಂತೆ ಮಾಡುವುದು ಅಪರಾಧದ ಹೊರೆ ಹೊರಲು ಬಲವಂತ ಪಡಿಸಿದಂತಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟು ಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ (Rape) ಪ್ರಕರಣಗಳಲ್ಲಿ ವೈದ್ಯಕೀಯ ಗರ್ಭಪಾತ ಕಾಯ್ದೆ-1971ರಲ್ಲಿ ( The Medical Termination Of Pregnancy Act ) ಕೆಲವು ಶಾಸನ ಬದ್ಧ ಮಿತಿಗಳಿವೆ. ಆದರೂ ಅವು ವೈದ್ಯರಿಗೆ (Doctors) ಮಾತ್ರ ಅನ್ವಯಿಸುತ್ತವೆ. ಅಂಥ ಸಂದ ರ್ಭದಲ್ಲಿ ವೈದ್ಯಕೀಯವಾಗಿ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಅಗತ್ಯವನ್ನು ನ್ಯಾಯಾಲಯಗಳು ವಿಭಿನ್ನ ರೀತಿಯಲ್ಲಿ ಪರಿಗಣಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

ಮಹಿಳೆ (woman) ಮೇಲೆ ಆಕೆಯ ಅಪೇಕ್ಷೆಗೆ ವಿರುದ್ಧವಾಗಿ ಮಗುವನ್ನು ಹೇರುವುದು ವೈಯಕ್ತಿಕ ಸ್ವಾತಂತ್ರ್ಯದ (Freedom) ಹಕ್ಕಿನ ಉಲ್ಲಂಘನೆ. ಸಂತಾನೋತ್ಪತ್ತಿ ಆಯ್ಕೆಗೆ ವಿರುದ್ಧವಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟ ಹೈಕೋರ್ಟ್, ವೈದ್ಯಕೀಯ ಗರ್ಭಪಾತ ಕಾಯ್ದೆ-1971ರ ನಿಬಂಧನೆಗಳು ಮತ್ತು ವೈದ್ಯಕೀಯ ಮಂಡಳಿಯ ಅಭಿಪ್ರಾಯಕ್ಕೆ ಬದ್ಧವಾಗಿ ಭ್ರೂಣವನ್ನು ತೆಗೆಯಬೇಕು ಎಂದು ಬೆಳಗಾವಿ ಆರೋಗ್ಯಾಧಿಕಾರಿಗೆ ನಿರ್ದೇಶಿಸಿದೆ.  

ಸಂತ್ರಸ್ತೆಯನ್ನು ಮದುವೆಯಾದರೂ ಕೇಸ್ ರದ್ದಿಲ್ಲ  :   ಅತ್ಯಾಚಾರ ಪ್ರಕರಣವನ್ನು (Rape Case) ರದ್ದುಪಡಿಸುವಂತೆ ಕೋರಿ ಆರೋಪಿ ಹಾಗೂ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯನ್ನು ವಜಾ ಗೊಳಿಸಿರುವ ಹೈಕೋರ್ಟ್ (High Court), ಅತ್ಯಾಚಾರ ಹೀನ ಕೃತ್ಯವಾಗಿರುವ ಕಾರಣ ಸಂತ್ರಸ್ತೆ ಸಮ್ಮತಿ ನೀಡಿದರೂ ಹಾಗೂ ಅತ್ಯಾಚಾರಿಯ (Rapist) ಮದುವೆ ಆಗಿದ್ದರೂ ಪ್ರಕರಣ ರದ್ದು ಪಡಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.  ಈ ಕುರಿತು ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ವಿಜಯಪುರದ (Vijayapura) ಆರೋಪಿ ಮತ್ತು ಸಂತ್ರಸ್ತೆ ಸರಳಾ (ಹೆಸರು ಬದಲಿಸಲಾಗಿದೆ) ಜಂಟಿಯಾಗಿ ಸಲ್ಲಿಸಿದ್ದ ಕ್ರಿಮಿನಲ್  (Criminal ) ಅರ್ಜಿ ವಿಚಾರಣೆ ನಡೆಸಿದ ಎಚ್.ಪಿ. ಸಂದೇಶ್ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. 

ಪ್ರೀತಿಯ (Love) ಸೋಗಿನಲ್ಲಿ ಅಪ್ರಾಪ್ತೆಯಾಗಿದ್ದ ಸರಳಾ ಮೇಲೆ ಅನಿಲ್ ಅತ್ಯಾಚಾರ ಎಸಗಿದ್ದ. ಇದರಿಂದ ಆಕೆ ಗರ್ಭ ಧರಿಸಿದ್ದಳು (Pregnant). ಈ ಕುರಿತು ದೂರು ದಾಖಲಾಗಿದ್ದು ( complaint  Lodge), ವಿಜಯಪುರದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್‌  ಮತ್ತು ಪೋಕ್ಸೋ (PCSO) ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 

ಇದೀಗ ಸರಳ ಮತ್ತು ಅನಿಲ್ ಹೈಕೋರ್ಟ್‌ಗೆ (High Court) ಜಂಟಿಯಾಗಿ ಅರ್ಜಿ ಸಲ್ಲಿಸಿ, ‘ನಾವು ಒಪ್ಪಿಗೆ ಮೇರೆ ಮದುವೆಯಾಗಿದ್ದೇವೆ. ನಮಗೆ ಮಗು ಜನಿಸಿದೆ. ಆದರೆ, ಅನಿಲ್ ಈಗಲೂ ಜೈಲಿನಲ್ಲಿದ್ದು (Jail), ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದ್ದರು. ಈ ಮನವಿ ತಿರಸ್ಕರಿಸಿರುವ ಹೈಕೋರ್ಟ್, ‘ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಳಾಗಿದ್ದಳು. ಸದ್ಯ ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಜಂಟಿಯಾಗಿ ಈ ಅರ್ಜಿ ಸಲ್ಲಿಸಿ, ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ. ಸಂತ್ರಸ್ತೆ ಅಪ್ರಾಪ್ತಳಾಗಿದ್ದು, ಅತ್ಯಾಚಾರ (Rape) ನಡೆದಾಗ ಸಂತ್ರಸ್ತೆ ಒಪ್ಪಿಗೆ ನೀಡಿದರೂ ಅದನ್ನು ಒಪ್ಪಿಗೆ ಎಂಬುದಾಗಿ ಪರಿಗಣಿಸಲಾಗದು. 

ಇನ್ನೂ ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ (Marriage) ಎಂಬ ಕಾರಣ ಆರೋಪಿ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಪಡಿಸಲಾಗದು’ ಎಂದಿತು. ‘ಇನ್ನೂ ಸಂತ್ರಸ್ತೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ, ಘಟನೆ ನಡೆದಾಗ ತನಗೆ 19 ವರ್ಷ ಆಗಿತ್ತು ಎಂದು ಹೇಳಿಕೆ ನೀಡಿದ್ದಾಳೆ. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳೆ ಅಥವಾ ಪ್ರಾಪ್ತ ವಯಸ್ಕಳಾಗಿದ್ದಳೆ ಎಂಬುದನ್ನು ವಿಚಾರಣಾ ನ್ಯಾಯಾಲಯ ತೀರ್ಮಾನಿಸಬೇಕಿದೆ. 

ಈ ಅಂಶವನ್ನು ಹೈಕೋರ್ಟ್ ಒಪ್ಪುವುದಿಲ್ಲ. ಅತ್ಯಾಚಾರದಂತಹ ಹೀನ ಕೃತ್ಯದಲ್ಲಿ ಸಂತ್ರಸ್ತೆ ಮತ್ತು ಆರೋಪಿ ನೀಡಿದ ಸಮ್ಮತಿಯನ್ನು ಒಪ್ಪಿ ಪ್ರಕರಣ ರದ್ದುಪಡಿಸಲಾಗದು’ ಎಂದಿತು. ಅಲ್ಲದೆ, ಆರೋಪಿಯು ಕೃತ್ಯವು ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಬರಲಿದೆ. ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪ್ರಕರಣ ರದ್ದುಪಡಿಸಿದರೆ ಪೋಕ್ಸೋ ಕಾಯ್ದೆ ಜಾರಿಯ ಸದುದ್ದೇಶಕ್ಕೆ ಸೋಲಾಗುತ್ತದೆ ಎಂದ ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿ ವಜಾಗೊಳಿಸಿತು. ಜತೆಗೆ, ಅರ್ಜಿ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ. 

Follow Us:
Download App:
  • android
  • ios