Asianet Suvarna News Asianet Suvarna News

Mangaluru Rape Case : ಸ್ಲೀಪರ್‌ ಬಸ್ಸಿನಲ್ಲಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ - ಸಾಬೀತು

  • ಮದುವೆ ಆಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
  • ಅತ್ಯಾಚಾರ ಎಸಗಿದ ಆರೋಪ ಮಂಗಳೂರಿನ 1ನೇ ತ್ವರಿತಗತಿ ಸೆಷನ್ಸ್‌ ನ್ಯಾಯಾಲಯದಲ್ಲಿ ಸಾಬೀತು
bus Conductor Rape On teen Girl in mangaluru  snr
Author
Bengaluru, First Published Nov 26, 2021, 7:46 AM IST
  • Facebook
  • Twitter
  • Whatsapp

 ಮಂಗಳೂರು (ನ.26):  ಮದುವೆ (Marriage) ಆಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ (Teen Girl) ಮೇಲೆ ಅತ್ಯಾಚಾರ (Rape) ಎಸಗಿದ ಆರೋಪ ಮಂಗಳೂರಿನ (Mangaluru) 1ನೇ ತ್ವರಿತಗತಿ ಸೆಷನ್ಸ್‌ ನ್ಯಾಯಾಲಯದಲ್ಲಿ (Court) ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ನ.27ರಂದು ಪ್ರಕಟವಾಗುವ ಸಾಧ್ಯತೆ ಇದೆ. ಬೆಳ್ತಂಗಡಿ (Belthangadi) ತಾಲೂಕು ಕೇಪು ಗ್ರಾಮದ ನೀರ್ಕಜೆಯ ನಿತಿನ್‌ (27) ಅಪರಾಧಿ. 2014ರಲ್ಲಿ ವಿಟ್ಲ ಸಮೀಪದ 17 ವರ್ಷ ಪ್ರಾಯದ ದಲಿತ ಸಮುದಾಯದ ಬಾಲಕಿಯನ್ನು (Girl) ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ (rape) ಎಸಗಿದ ಆರೋಪ ಇದೀಗ ಸಾಬೀತಾಗಿದೆ.

ಖಾಸಗಿ ಬಸ್‌ ಕಂಡಕ್ಟರ್‌ (Private Bus Conductor) ಆಗಿದ್ದ ನಿತಿನ್‌ಗೆ ಕಾಲೇಜಿಗೆ (College) ಹೋಗುತ್ತಿದ್ದ 17 ವರ್ಷದ ದ್ವಿತೀಯ ಪಿಯುಸಿ (PUC) ಓದುತ್ತಿದ್ದ ವಿದ್ಯಾರ್ಥಿನಿಯ (Student) ಪರಿಚಯವಾಗಿತ್ತು. 2014ರ ಜುಲೈ 24ರಂದು ಕೆಎಸ್‌ಆರ್‌ಟಿಸಿ (KSRTC) ಸ್ಲೀಪರ್‌ ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದನು. ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬೆಂಗಳೂರಿಗೆ ತಲುಪಿದ ಬಳಿಕ ಅಲ್ಲಿ 2 ದಿನ ಸುತ್ತಾಡಿದ್ದರು. ಈ ಮಧ್ಯೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ (Police Station) ನಾಪತ್ತೆ ಪ್ರಕರಣವನ್ನು ಪೋಷಕರು ದಾಖಲಿಸಿದ್ದರು.

ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ನಿತಿನ್‌ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ಬಳಿಕ ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲು ನ. 27ರಂದು ದಿನಾಂಕ ನಿಗದಿಪಡಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು.

ಹೆಂಡತಿ ಇಷ್ಟವಾಗಲಿಲ್ಲ ಎಂದು ಮಾರಿದ ಗಂಡ : ರಾಜಸ್ಥಾನದ (Rajasthan) ಬುಂದಿ ಜಿಲ್ಲೆಯಲ್ಲಿ ಅಪ್ರಾಪ್ತ ಪತ್ನಿಯನ್ನು ಮತ್ತೊಬ್ಬ ಯುವಕನಿಗೆ ಮಾರಾಟ ಮಾಡಿ ಸಾಮೂಹಿಕ ಅತ್ಯಾಚಾರ (Gangrape) ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಹಿಂದೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಗಢದಲ್ಲಿ ನಡೆದಿದೆ. ಇಲ್ಲಿ ಯುವಕನೊಬ್ಬ ತನ್ನ ಪತ್ನಿಯನ್ನು ಇಷ್ಟಪಡದ ಕಾರಣ ಆಕೆಯನ್ನು ಮತ್ತೊಬ್ಬ ಯುವಕನಿಗೆ ಒಪ್ಪಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರವನ್ನೂ (Rape)  ನಡೆಸಿದ್ದಾನೆ. ಈ ವಿಷಯ ಬೆಳಕಿಗೆ ಬಂದ ತಕ್ಷಣ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತೆಯ ಪತಿ, ನಾದಿನಿ ಸೇರಿದಂತೆ ಮತ್ತೊಬ್ಬ ಯುವಕನನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಅವರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಅಪಹರಣ ಪ್ರಕರಣ ದಾಖಲಿಸಿದ್ದರು:ಪೊಲೀಸರ ಪ್ರಕಾರ ನವೆಂಬರ್ 3 ರಂದು ಸಂತ್ರಸ್ತೆಯ ತಂದೆ ಮಗಳ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು. ವಿಜಯಗಢದ ನಿವಾಸಿ ರಾಕೇಶ್ ಮೀನಾ ಎಂಬಾತನನ್ನು ಅವರ ಪುತ್ರಿ ವಿವಾಹವಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ತಂದೆಯೂ ಮಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನವೆಂಬರ್ 10 ರಂದು ಪೊಲೀಸರು ಯುವತಿಯ ಹೇಳಿಕೆಯನ್ನು ತೆಗೆದುಕೊಂಡಾಗ, ಆಕೆ ತನ್ನ ಪತಿ ಸಾಮೂಹಿಕ ಅತ್ಯಾಚಾರ ನಡೆಸಿ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿದ್ದಳು. ಭಾನುವಾರ ಮಧ್ಯಾಹ್ನ ಆರೋಪಿ ಪ್ರಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿಂದ ಜೈಲಿಗೆ ಕಳುಹಿಸಲಾಯಿತು. ಮಹಿಳೆಯ ದೂರಿನಂತೆ ಅಲ್ಲೇ ಆಕೆಯ ಪತಿ ರಾಕೇಶ್ ಮೀನಾ ಮತ್ತು ಓಂಪ್ರಕಾಶ್ ಅವರನ್ನು ಬಂಧಿಸಲಾಗಿದೆ. ಆರೋಪಿ ಮಹೇಂದ್ರನಿಗಾಗಿ ಶೋಧ ನಡೆಯುತ್ತಿದೆ.

ನಾದಿನಿ ಮಾರಿದರು : ಸೆಪ್ಟೆಂಬರ್ 30 ರಂದು ರಾತ್ರಿ ಒಂದು ಗಂಟೆ ಸುಮಾರಿಗೆ ಪತಿ ರಾಕೇಶ್ ಮೀನಾ ತನ್ನನ್ನು ಮನೆ ಸಮೀಪದ ದರ್ಜೆಗೆ ಕರೆದಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲಿಗೆ ತಲುಪಿದಾಗ, ಆತ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಹಾಗೂ ನಾದಿನಿ ಪ್ರಿಯಾ, ಆಕೆಯ ಗಂಡ ಮಹೇಂದ್ರ ಮೀನಾ ಜೊತೆಗೆ ಅವಳನ್ನು ಡಿಯೋಲಿಗೆ ಕರೆದೊಯ್ದನು. ಡಿಯೋಲಿಯಲ್ಲಿ ಪ್ರಿಯಾ ಬಾಡಿಗೆಗೆ ಮನೆ ತೆಗೆದುಕೊಂಡಿದ್ದರು. ಇಲ್ಲಿ ಯುವತಿಯನ್ನು ಇಬ್ಬರೂ ಸೇರಿ ಗ್ರಾಮದ ನಿವಾಸಿ ಓಂಪ್ರಕಾಶ್ ಎಂಬಾತನಿಗೆ ಒಪ್ಪಿಸಿದ್ದಾರೆ. ಓಂಪ್ರಕಾಶ್ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. 

ಮೂರು ದಿನಗಳ ನಂತರ, ಗ್ರಾಮದ ಗುಡಿಸಲಿಗೆ ಕರೆದೊಯ್ದು ಅತ್ಯಾಚಾರವನ್ನು ಮುಂದುವರೆಸಲಾಗಿದೆ. ಈ ವೇಳೆ ಅವಕಾಶವನ್ನು ಬಳಸಿಕೊಂಡ ಸಂತ್ರಸ್ತೆ ತನ್ನ ಸಹೋದರನಿಗೆ ಫೋನ್ ಮೂಲಕ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಪೊಲೀಸರು ನಂದೋಯ್ ಮಹೇಂದ್ರ ಮೀನಾ, ನಂದ ಪ್ರಿಯಾ, ಓಂ ಪ್ರಕಾಶ್ ಮತ್ತು ಪತಿ ರಾಕೇಶ್ ಮೀನಾ ವಿರುದ್ಧ ಸಾಮೂಹಿಕ ಅತ್ಯಾಚಾರ ಸೇರಿದಂತೆ ಇತರ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತೆಯ ಪತಿ, ನಾದಿನಿ ಹಾಗೂ ಮತ್ತೊಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.

Follow Us:
Download App:
  • android
  • ios