18 ವರ್ಷಗಳ ಕಾಯುವಿಕೆಯ ನಂತರ, ರಜತ್ ಪಾಟಿದಾರ್ ನೇತೃತ್ವದಲ್ಲಿ ಆರ್‌ಸಿಬಿ ತಂಡವು ಐಪಿಎಲ್ 2025ರಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ. ವಿರಾಟ್ ಕೊಹ್ಲಿಯ ಜೆರ್ಸಿ ಸಂಖ್ಯೆ 18 ಮತ್ತು 18ನೇ ಐಪಿಎಲ್ ಸರಣಿಯಲ್ಲಿ ಈ ಗೆಲುವು ಸಿಕ್ಕಿರುವುದು ವಿಶೇಷ.

ಆರ್‌ಸಿಬಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದಿದೆ. 18 ವರ್ಷಗಳ ಕಾಯುವಿಕೆ ಎಷ್ಟು ಕಷ್ಟ ಅಂತ ಈಗ ಗೊತ್ತಾಗಿದೆ. ಈಗ ಎಲ್ಲೆಲ್ಲೂ ಸಂಭ್ರಮ ಮನೆಮಾಡಿದೆ ಆರ್‌ಸಿಬಿ ಅಭಿಮಾನಿಗಳು ಹಬ್ಬದಂತೆ ಸೆಲೆಬ್ರೇಷನ್ ಮಾಡುತ್ತಿದ್ದಾರೆ.

18 ವರ್ಷಗಳ ತಪಸ್ಸು - ಐಪಿಎಲ್ 2025

ಆರ್‌ಸಿಬಿ ಆ ನೋವನ್ನು ಮೆಟ್ಟಿ ನಿಂತು ಕೊನೆಗೂ ಟ್ರೋಫಿಯನ್ನು ಗೆದ್ದುಕೊಂಡಿತು, 'ಇದು ಈ ಸಲ ಕಪ್ ನಮ್ದೇ, ನಾವೇ ಆ ಕಪ್, ಆರ್‌ಸಿಬಿ ತಂಡದಲ್ಲಿ ಹಲವು ನಾಯಕ ಬದಲಾವಣೆಗಳ ಹೊರತಾಗಿಯೂ, ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಅಂತಿಮವಾಗಿ ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು, ಬೆಂಗಳೂರು ಅಭಿಮಾನಿಗಳಿಗೆ ಸಂತೋಷ ತಂದಿತು.

ಕೊಹ್ಲಿ ಜೆರ್ಸಿ ನಂಬರ್ 18

ಈ ಐಪಿಎಲ್ 2025 ಟ್ರೋಫಿಗೂ ವಿರಾಟ್ ಕೊಹ್ಲಿಗೂ ಸಂಬಂಧವಿದೆ. ವಿರಾಟ್ ಕೊಹ್ಲಿಯ ಜೆರ್ಸಿ ಸಂಖ್ಯೆ 18. ಈ ಸೀಸನ್ 18ನೇ ಐಪಿಎಲ್ 2025 ಸರಣಿಯಾಗಿದೆ. ಈ 18ನೇ ಐಪಿಎಲ್ ಸರಣಿಯಲ್ಲಿ ಆರ್‌ಸಿಬಿ ತಮ್ಮ ಮೊದಲ ಟ್ರೋಫಿಯನ್ನು ಎತ್ತಿ ಹಿಡಿದಿದೆ.

ಬದಲಿ ಆಟಗಾರನಾಗಿ ಬಂದು ಟ್ರೋಪಿ ಗೆಲ್ಲಿಸಿಕೊಟ್ಟ ರಜತ್

2022ರಲ್ಲಿ ಆರ್‌ಸಿಬಿ ತಂಡಕ್ಕೆ ಬದಲಿ ಆಟಗಾರನಾಗಿ ಸೇರ್ಪಡೆಗೊಂಡಿದ್ದ ರಜತ್‌ ಪಾಟೀದಾರ್‌, ಈ ಬಾರಿ ನಾಯಕನಾಗಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. 2022ರ ಹರಾಜಿನಲ್ಲಿ ರಜತ್‌ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ. ಬಳಿಕ ಲುವ್‌ನಿತ್‌ ಸಿಸೋಡಿಯಾ ಗಾಯಗೊಂಡ ಕಾರಣ ಆರ್‌ಸಿಬಿ ಬದಲಿ ಆಟಗಾರನಾಗಿ ರಜತ್‌ರನ್ನು ಸೇರಿಸಿತ್ತು. ಕಳೆದ ವರ್ಷ ಅವರನ್ನು ತಂಡಕ್ಕೆ ರಿಟೈನ್ ಮಾಡಿಕೊಂಡಿದ್ದ ತಂಡ, ಈ ಸಲ ಐಪಿಎಲ್‌ಗೂ ಮುನ್ನ ನಾಯಕತ್ವ ವಹಿಸಿತ್ತು.