ಬ್ಯಾಕ್ ಇಂಜುರಿಯಿಂದ ಬಳಲುತ್ತಿರುವ ವಿರಾಟ್ ಕೋಹ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಮ್ಯಾಚ್’ನಲ್ಲಿ ಆಟವಾಡುತ್ತಿಲ್ಲ.
ನವದೆಹಲಿ : ಬ್ಯಾಕ್ ಇಂಜುರಿಯಿಂದ ಬಳಲುತ್ತಿರುವ ವಿರಾಟ್ ಕೋಹ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಮ್ಯಾಚ್’ನಲ್ಲಿ ಆಟವಾಡುತ್ತಿಲ್ಲ.
ಆದರೆ ತಂಡದೊಂದಿಗೆ ಇದ್ದು ಅಗತ್ಯ ನೆರವನ್ನು ನೀಡುತ್ತಿದ್ದಾರೆ. ಅವರು ತಮ್ಮ ತಂಡಕ್ಕೆ ನೆರವು ಬೇಕಾದಾಗ ಎಂದಿಗೂ ಕೂಡ ಅದರಿಂದ ತಪ್ಪಿಸಿಕೊಂಡಿಲ್ಲ. ತಮ್ಮ ಅಗತ್ಯ ಯಾವಾಗ ಇರುತ್ತದೆಯೋ ಆಗ ಹಾಜರಾಗಿ ನೆರವಿಗೆ ನಿಲ್ಲುತ್ತಿದ್ದಾರೆ.
ಇದೀಗ ಅದೇ ರೀತಿಯ ಫೊಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಟೀಮ್ ಮೇಟ್ ಆದ ಶಿಖರ್ ದವನ್’ಗೆ ವಿರಾಟ್ ಕೋಹ್ಲಿ ಹೆಡ್ ಮಸಾಜ್ ಮಾಡುತ್ತಿರುವ ಫೊಟೊ ಎಲ್ಲೆಡೆ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ.
