ಕರ್ನಾಟಕವನ್ನ ಕೊಂಡಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ
* ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಲೋಕಸಭೆ ಸ್ಪೀಕರ್ ಭಾಷಣ
* ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾಷಣ ಮಾಡಿದ ಲೋಕಸಭೆ ಸ್ಪೀಕರ್
* ಸಂಸದೀಯ ಮೌಲ್ಯಗಳ ರಕ್ಷಣೆ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಓಂ ಬಿರ್ಲಾ
ಬೆಂಗಳೂರು, (ಸೆ.24): ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಇಂದು (ಸೆ.24) ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಮಾತನಾಡಿದರು.
ವಿಧಾನಸಭೆಯಲ್ಲಿ (Vidhana Soudha) ಇದೇ ಮೊದಲ ಬಾರಿಗೆ ಲೋಕಸಭೆ ಸ್ಪೀಕರ್ ಭಾಷಣ ಮಾಡಿದ್ದು, ಸಂಸದೀಯ ಮೌಲ್ಯಗಳ ರಕ್ಷಣೆ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಅಲ್ಲದೇ ಕರ್ನಾಟಕ (Karnataka) ರಾಜ್ಯದಲ್ಲಿ, ಪ್ರಜಾಪ್ರಭುತ್ವ ಪ್ರಯಾಣವು ರೋಮಾಂಚಕ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ಕೊಂಡಾಡಿದರು.
'ರಾಷ್ಟ್ರಪತಿ, ಗೌರ್ನರ್‌ಗಷ್ಟೇ ಅಧಿಕಾರ': ಸ್ಪೀಕರ್ ಬಿರ್ಲಾ ಭಾಷಣಕ್ಕೆ ಕೈ ಬಹಿಷ್ಕಾರ!
ಸ್ನೇಹಿತರೇ, ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಪ್ರಯಾಣವು ರೋಮಾಂಚಕ ಮತ್ತು ಸ್ಫೂರ್ತಿದಾಯಕವಾಗಿದೆ. ಈ ಭವ್ಯವಾದ ಪ್ರಯಾಣಕ್ಕೆ ಕಾರಣರಾದ ರಾಜಕೀಯ (Politics) ಮುತ್ಸದ್ಧಿಗಳಿಗೆ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ . ನಾವು ಅಂತಹವರಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು.
ಕರ್ನಾಟಕವು ಶ್ರೀಮಂತ ಮತ್ತು ಅದ್ಭುತವಾದ ಇತಿಹಾಸವನ್ನು ಹೊಂದಿದೆ. ಭಗವಾನ್ ಬಸವೇಶ್ವರರ (Basavanna) 12 ನೇ ಶತಮಾನದಲ್ಲಿ ನಿರ್ಮಿಸಲಾದ 'ಅನುಭವ ಮಂಟಪ' ಪ್ರಸ್ತುತ ಸಂದರ್ಭದಲ್ಲಿ ಜನಪ್ರತಿನಿಧಿಗಳ ಸಂಸತ್ತಿನ ಪ್ರತಿಬಿಂಬವಾಗಿದೆ ರಾಣಿ ಚೆನ್ನಮ್ಮನ (Rani Channamma) ಮಹಾನ್ ಯಾಗವು ನಮಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದರು.
ವಿಧೇಯಕಗಳ ಬಗ್ಗೆ ಸಮಗ್ರ ಚರ್ಚೆಗಳಾಗಬೇಕು. ಎಲ್ಲರ ಅಭಿಪ್ರಾಯಕ್ಕೆ ಒತ್ತು ನೀಡಬೇಕು ಮತ್ತು ಎಲ್ಲರ ಸಲಹೆ, ಸಹಕಾರದ ಮೇಲೆ ವಿಧೇಯಕ ತರಬೇಕು. ವಿಧಾನಮಂಡಲದ ಶಾಸನಗಳು ಬಡವರ ಪರವಾಗಿರಬೇಕು. ಪ್ರಜಾಪ್ರಭುತ್ವದ ಸಮಾವೇಶಗಳು ನಡೆಯಬೇಕು. ಚರ್ಚಾ ಕಾರ್ಯಕ್ರಮಗಳು ದೇಶದಲ್ಲಿ ನಡೆಯಬೇಕು. ಸದಸ್ಯರ ಸಂಸದೀಯ ನಡುವಳಿಕೆ ಉತ್ತಮವಾಗಿರಬೇಕು. ಹೀಗಿದ್ದಾಗ ಮಾತ್ರ ಉತ್ತಮ ಜನತಾ ಕಲ್ಯಾಣ ಸಾಧ್ಯ ಎಂದು ತಿಳಿಸಿದರು.
ರಾಜ್ಯ ಮತ್ತು ದೇಶದ ಜನರ ಬದುಕಿನಲ್ಲಿ , ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಬಹುದು ಮತ್ತು ಸಾಮಾಜಿಕ ಮತ್ತು ಆರ್ಥಿಕ ಉನ್ನತಿಯನ್ನು ತರಬಹುದು. ಇಂದು ನಮ್ಮ ಚರ್ಚೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಇಡೀ ದೇಶಕ್ಕೆ ಧನಾತ್ಮಕ ಸಂದೇಶವನ್ನು ನೀಡುತ್ತದೆ ಎಂದು ನನಗೆ ಭರವಸೆಯಿದೆ ಅಭಿಪ್ರಾಯ ವ್ಯಕ್ತಪಡಿಸಿದರು.