ಬೆಂಗಳೂರು(ಜೂ.24): ಈಗಾಗಲೇ ಜೂನ್ ಎರಡನೇ ವಾರದಿಂದಲೇ ರಾಜ್ಯದಲ್ಲಿ ಮಳೆಯಾಗಿದ್ದು ನಂತರ ಸ್ವಲ್ಪ ಬಿಡುವು ನೀಡಿತ್ತು. ಇದೀಗ ಜೂನ್ 25ರಿಂದ ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ.

ನಾಳೆಯಿಂದ ಒಂದು ವಾರಗಳ ಕಾಲ ರಾಜ್ಯದ ಪೂರ್ವ ಭಾಗದಲ್ಲಿ ಮುಂಗಾರು ಚುರುಕಾಗಲಿದ್ದು, ರಾಜ್ಯದ ಪೂರ್ವ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ.

ಕ್ವಾರೆಂಟೈನ್‌ನಲ್ಲಿರುವ ಪೊಲೀಸರಿಗೆ ಯೋಗ ಟೀಚರ್ ಆದ IPS ಅಲೋಕ್ ಕುಮಾರ್

ಇಂದಿನಿಂದಲೇ ಸಾಧಾರಣ ಮಳೆ ಶುರುವಾಗಲಿದ್ದು ನಾಳೆಯಿಂದ ಮಳೆ ತೀವ್ರತೆ ಹೆಚ್ಚಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಹ ಮಳೆಯ ತೀವ್ರತೆಗೆ ಕಾರಣವಾಗಿದೆ. ದಕ್ಷಿಣ ಒಳನಾಡು ಹಾಗೂ ರಾಜ್ಯದ ಪೂರ್ವ ಭಾಗದಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ.