ಹೆಚ್ಡಿಕೆಗೆ ಪ್ರಧಾನಿ, ಮಾಜಿ ಪ್ರಧಾನಿ ರಕ್ಷಣೆಯಿದೆ ಅಂತಾ ಬಾಯಿಗೆ ಬಂದಂಗೆ ಮಾತಾಡ್ತಿದಾರೆ: ಚಲುವರಾಯಸ್ವಾಮಿ ವ್ಯಂಗ್ಯ
ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ರಕ್ಷಣೆ ಇದೆ ಅಂತಾ ಬಾಯಿಗೆ ಬಂದಾಗೆ ಮಾತಾಡ್ತಾರಾ.? ಮಾತನಾಡುವ ನಾಲಿಗೆಗೆ ಇತಿಮಿತಿ ಇರುತ್ತೆ ಅಲ್ವ.
ಮಂಡ್ಯ (ನ.18): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನೆಗೆ ಅಕ್ರಮವಾಗಿ ನಾವು ವಿದ್ಯುತ್ ಕನೆಕ್ಷನ್ ಕೊಡಿಸಿದ್ವಾ? ಗೊತ್ತಿಲ್ಲದೇ ತಪ್ಪಾಗಿದೆ ಅಂತಾ ಹೇಳಿದ್ರೆ ಮುಗಿತಿತ್ತು. ಅದು ಬಿಟ್ಟು ಎಲ್ಲರನ್ನು ಲಘುವಾಗಿ ಬಾಯಿಗೆ ಬಂದಾಗೆ ಮಾತನಾಡಿದರು. ಇವರಿಗೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ರಕ್ಷಣೆ ಇದೆ ಅಂತಾ ಬಾಯಿಗೆ ಬಂದಾಗೆ ಮಾತಾಡ್ತಾರಾ.? ಮಾತನಾಡುವ ನಾಲಿಗೆಗೆ ಇತಿಮಿತಿ ಇರುತ್ತೆ ಅಲ್ವ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿ ಕಾರಿದರು.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾನಾಡಿದ ಅವರು, ಕುಮಾರಸ್ವಾಮಿ ಅವರ ಮನೆಗೆ ಅಕ್ರಮವಾಗಿ ವಿದ್ಯುತ್ ಕನೆಕ್ಷನ್ ನಾವು ಕೊಡಿಸಿದ್ವಾ? 68 ಸಾವಿರ ಪೆನಾಪ್ಟಿ ಕಟ್ಟೋಕೆ ನಾವು ಹೇಳಿದ್ವಾ? ಹಳ್ಳಿಗಳಲ್ಲಿ ಅಕ್ರಮವಾಗಿ ಮನೆ ಕಟ್ಟುವಾಗ ವಿದ್ಯುತ್ ತಕೊಂಡಿರ್ತಾರೆ. ಆ ಸಂದರ್ಭ ನಾನೇ ಮಂತ್ರಿಯಾಗಿ ಬುದ್ದಿ ಹೇಳ್ತೀನಿ. ದಂಡವನ್ನ ಕಡಿಮೆ ಮಾಡಿ ಅಂತಾ ಅಧಿಕಾರಿಗೆ ಹೇಳಿದ್ದೇವೆ. ಗೊತ್ತಿಲ್ಲದೇ ತಪ್ಪಾಗಿದೆ ಅಂತಾ ಹೇಳಿದ್ರೆ ಮುಗಿತಿತ್ತು. ಅದು ಬಿಟ್ಟು ಎಲ್ಲರನ್ನು ಲಘುವಾಗಿ ಬಾಯಿಗೆ ಬಂದಾಗೆ ಮಾತನಾಡಿದರು. ಇವರಿಗೆ ಪ್ರಧಾನಿ, ಮಾಜಿ ಪ್ರಧಾನಿ ರಕ್ಷಣೆ ಇದೆ ಅಂತಾ ಬಾಯಿಗೆ ಬಂದಾಗೆ ಮಾತಾಡ್ತಾರಾ.? ಮಾತನಾಡುವ ನಾಲಿಗೆಗೆ ಇತಿಮಿತಿ ಇರುತ್ತೆ ಅಲ್ವ. ನಾನು ಸಂಸ್ಕಾರ, ಸಂಸ್ಕೃತಿ ಗೌರವಿಸಿ ಮಂತ್ರಿಯಾಗಿ ಕೆಲಸ ಮಾಡುವವನು ಎಂದು ಹೇಳಿದರು.
ಕುಮಾರಸ್ವಾಮಿಗೆ ಅಧಿಕಾರ ಇಲ್ದೆನೂ ಇರೋಕಾಗಲ್ಲ, ಅಧಿಕಾರ ಕೊಟ್ರೂ ನಿಭಾಯಿಸೋಕಾಗಲ್ಲ!
ದೇಶದಲ್ಲಿ ಜಾತ್ಯಾತೀತ ಪಕ್ಷ ಅಂತಾ ಇದ್ದರೇ ಅದು ಕಾಂಗ್ರೆಸ್ ಮಾತ್ರ. ಬಹಳ ಪ್ರಮುಖ ಸಮುದಾಯ ಒಕ್ಕಲಿಗರು ಆಗಿದ್ದು, ಅದರಲ್ಲಿ ಉಪಮುಖ್ಯಮಂತ್ರಿ ಆಗಿದ್ದಾರೆ. ನಾನು, ಕೃಷ್ಣೇಬೈರೆಗೌಡ ಮಂತ್ರಿ ಇದ್ದೇವೆ. ಲಿಂಗಾಯತರಲ್ಲಿ ಎಂ.ಬಿ. ಪಾಟೀಲ್ ಹಾಗೂ ಈಶ್ವರಖಂಡ್ರೆ ಮಂತ್ರಿ ಇದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ ಹೆಚ್.ಡಿ. ಮಹದೇವಪ್ಪ, ಡಾ.ಜಿ. ಪರಮೇಶ್ವರ್ ಕೆ.ಹೆಚ್. ಮುನಿಯಪ್ಪ ಇದ್ದಾರೆ. ಹಿಂದೂಳಿದ ವರ್ಗದಲ್ಲಿ ಸಿದ್ದರಾಮಯ್ಯಗಿಂತ ನಾಯಕ ಬೇಕಾ? ಸಣ್ಣ ಸಮುದಾಯವನ್ನು ಗುರುತಿಸಿ ಮಂತ್ರಿ ಕೊಟ್ಟಿದ್ದಾರೆ. ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ನಾವು ಎಲ್ಲ ಸಮುದಾಯಕ್ಕೂ ಕಾರ್ಯಕ್ರಮ ಕೊಡುತ್ತಿದ್ದೇವೆ. ಬರಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದಾರೆ ಅಂತ ಲಿಂಗಾಯತರಿಗೆ, ಒಕ್ಕಲಿಗರಿಗೆ ಕೊಟ್ಟರೇ ಅಗುತ್ತದೇಯಾ. ಅವರು ಅಧಿಕಾರದಲ್ಲಿ ಫೇಲ್ ಆಗಿದಕ್ಕೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ಬಗ್ಗೆ ಲಘುವಾಗಿ ಮಾತನಾಡಲ್ಲ. ಹುಡುಕಾಡಿ ಕೊನೆಗೆ ಸಿಕ್ಕಿದ್ದಾರೆ. ಅವರು ಯಾವ ರೀತಿ ಸಮರ್ಪಕವಾಗಿ ನಿಭಾಯಿಸುತ್ತಾರೆ ಕಾದು ನೋಡೋಣ. ಅಶೋಕ್ ನನ್ನ ಸ್ನೇಹಿತ. ಒಳ್ಳೇಯ ಕೆಲಸ ಮಾಡಲಿ. ಒಳ್ಳೆಯ ಸಲಹೆ ಕೊಡಲಿ. ಆದರೆ, ಬರಿ ರಾಜಕೀಯ ಮಾಡಿಕೊಂಡೆ ಸಮಯ ಕಳೆಯುತ್ತಾರೆ ಎಂದರೇ ಅವರೇ ಇಷ್ಟವಾಗುತ್ತಾರೆ. ಒಳ್ಳೆಯ ಕೆಲಸ ಮಾಡಿದ್ರೆ ನಿಜವಾಗಲೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೇಕೆದಾಟು ಯಾತ್ರೆ ವೇಳೆ ಎಲ್ಲಿಂದ ಕರೆಂಟ್ ಪಡೆಯಲಾಗಿತ್ತು?: ಡಿಕೆಶಿ ಹೆಸರೆತ್ತದೆ ಎಚ್‌ಡಿಕೆ ವಾಗ್ದಾಳಿ
ಇನ್ಸ್ ಪೆಕ್ಟರ್ ವಿವೇಕಾನಂದ ವರ್ಗಾವಣೆಯಲ್ಲಿ ಯತೀಂದ್ರ ಪಾತ್ರವಿದ್ದರೆ ತಪ್ಪೇನು? ಮುಖಂಡರು ಇನ್ಸ್ ಪೆಕ್ಟರ್ ಹಾಕಿ ಅಂದ್ರೆ ತಪ್ಪೇನು, ಏನು ಕಾನೂನು ಬಾಹಿರಾನಾ? ಸರ್ಕಾರಕ್ಕೆ ಅಧಿಕಾರಿಗಳ ವರ್ಗಾವಣೆ ಮಾಡುವ ಅವಕಾಶವಿದೆ. ಯಾರು ಬೇಕಾದ್ರು ಕೇಳಬಹುದು, ಹಾಕಬಹುದು, ತಪ್ಪೇನು ಇಲ್ವಲ್ಲ. ಭ್ರಷ್ಟಚಾರದ ಬಗ್ಗೆ ವಿಜಯೇಂದ್ರರನ್ನ ಪ್ರಶ್ನಿಸಿದ್ದೇವೆ. ವರ್ಗಾವಣೆಯನ್ನ ಇವರನ್ನ ಕೇಳಿ ಮಾಡಬೇಕಾದ ಅವಶ್ಯಕತೆ ಇಲ್ಲ. ವಿಜಯೇಂದ್ರನ ಬಗ್ಗೆ ನಾವ ಮಾತಾಡಿದ್ದು.? ಯತ್ನಾಳ್ ಮಾತಾಡ್ಲಿಲ್ವ, ಪಾಟೀಲ್ ರನ್ನ ತೆಗೆದ್ರಾ.? ರಮೇಶ್ ಜಾರಕಿಹೋಳಿ ಮಾತಾಡ್ಲಿಲ್ವ. ಮಂತ್ರ ಮಾಡದಂಗೆ ತಡೆದು, ಇವಾಗ ವಿಧಿಯಿಲ್ಲದೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾವು ಹಿಂದೆ ಅಪಚಾರದ ಬಗ್ಗೆ ಮಾತನಾಡಿದ್ದೇವೆ. ಹಗರಣಗಳನ್ನ ಮಾಡಿದ್ದವರಿಗೆ ಈ ವಿಚಾರ ಮಾತನಾಡುವ ಹಕ್ಕಿಲ್ಲ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಬಿಡದಿ ಬಳಿ ಜಮೀನು ಒತ್ತುವರಿಯಾಗಿದೆ. ಕೋರ್ಟ್ ಆದೇಶ ಆಗಿದೆಯಂತೆ, ನೋಟೀಸ್ ಬಂದಿದೆಯಂತೆ. ಅದನ್ನ ನಾವು ವಯಕ್ತಿಕವಾಗಿ ತೆಗೆದುಕೊಳ್ಳಲ್ಲ. ಇಲಾಖೆ ಇದೆ ಅದನ್ನ ನೋಡಿಕೊಳ್ಳುತ್ತೆ ಎಂದಿದ್ದೇನೆ.
- ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ