Asianet Suvarna News Asianet Suvarna News

ಮೇಕೆದಾಟು ಯಾತ್ರೆ ವೇಳೆ ಎಲ್ಲಿಂದ ಕರೆಂಟ್‌ ಪಡೆಯಲಾಗಿತ್ತು?: ಡಿಕೆಶಿ ಹೆಸರೆತ್ತದೆ ಎಚ್‌ಡಿಕೆ ವಾಗ್ದಾಳಿ

ಬೆಂಗಳೂರಿನ ಮೆಜೆಸ್ಟಿಕ್‌ ಬಳಿ ಇರುವ ಲುಲು ಮಾಲ್‌ ನಿರ್ಮಾಣಕ್ಕೆ ಮಿನರ್ವ್ ಮಿಲ್‌ನ 24 ಎಕರೆ ಖರಾಬ್‌ ಜಮೀನು ಕಬಳಿಸಿರುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ಬಗ್ಗೆ ಅಗತ್ಯ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Ex CM HD Kumaraswamy Slams On DCM DK Shivakumar gvd
Author
First Published Nov 18, 2023, 1:59 PM IST

ಬೆಂಗಳೂರು (ನ.18): ಬೆಂಗಳೂರಿನ ಮೆಜೆಸ್ಟಿಕ್‌ ಬಳಿ ಇರುವ ಲುಲು ಮಾಲ್‌ ನಿರ್ಮಾಣಕ್ಕೆ ಮಿನರ್ವ್ ಮಿಲ್‌ನ 24 ಎಕರೆ ಖರಾಬ್‌ ಜಮೀನು ಕಬಳಿಸಿರುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ಬಗ್ಗೆ ಅಗತ್ಯ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಮಾಲ್‌ ಕಟ್ಟಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೆಸರೆತ್ತದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಭೂಮಿಯ ಬಗ್ಗೆ ಇಷ್ಟೆಲ್ಲ ಮಾತನಾಡುವ ಕಾಂಗ್ರೆಸ್ಸಿಗರು 24 ಎಕರೆ ಖರಾಬ್ ಜಮೀನು ನುಂಗಿ ಹಾಕಿರುವ ಲುಲು ಮಾಲ್ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. 

ಅವರಿಗೊಂದು ಕಾನೂನು, ನನಗೊಂದು ಕಾನೂನು ಇದೆಯೇ? ಲುಲು ಮಾಲ್ ಇರುವ  24 ಎಕರೆ ಜಾಗ ಖರಾಬ್ ಭೂಮಿ ಆಗಿದೆ. 1934ರಲ್ಲಿ ಮಿನರ್ವ ಮಿಲ್ ಗೆ ಆ ಜಾಗವನ್ನು ನೀಡಲಾಗಿತ್ತು. ಆ ದಾಖಲೆ ಹೇಗೆ ಸುಟ್ಟು ಹಾಕಿದರು ಎನ್ನುವುದು ಗೊತ್ತಿದೆ. ಅಕ್ರಮವಾಗಿ ಖರೀದಿ ಮಾಡಿ ಮಾಲ್ ನಿರ್ಮಿಸಲಾಗಿದೆ.  ಇದೆಲ್ಲವನ್ನೂ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ಲುಲು ಮಾಲ್ ಕೆಳಗಡೆ ಹೈ ಟೆನ್ಷನ್ ವೈರ್ ಅಂಡರ್ ಗ್ರೌಂಡ್ ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ಎಷ್ಟು ಹಣ ಕಟ್ಟಿದ್ದಾರೆ? ಸುಜಾತ ಟಾಕೀಸ್ ಮುಂದೆ ಇದ್ದ ಹೈ ಟೆನ್ಷನ್ ವೈರ್ ಹೇಗೆ ಅಂಡರ್ ಗ್ರೌಂಡ್‌ನೊಳಕ್ಕೆ  ಹೋಯಿತು? 

ರಾಜ್ಯದ 5 ಎಸ್ಕಾಂಗಳಲ್ಲಿ ಈ 2 ದಿನ ಆನ್‌ಲೈನ್‌ ಸೇವೆ ಸ್ಥಗಿತ: ಕಾರಣ ಇಲ್ಲಿದೆ?

ಇದನ್ನು ಜನರಿಗಾಗಿ ಮಾಡಿದರಾ ಅಥವಾ ತಮ್ಮ ಸ್ವಾರ್ಥಕ್ಕಾಗಿ ಮಾಡಿದರಾ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು. ನಕಲಿ ಸೊಸೈಟಿಯನ್ನು ಅಸಲಿ ಮಾಡಿಕೊಂಡಿದ್ದಾರೆ. ಮೇಲೆ ಇದ್ದ ಹೈ ಟೆನ್ಷನ್ ವೈರ್ ಅನ್ನು ಅಂಡರ್ ಗ್ರೌಂಡ್ ಗೆ ತೆಗೆದುಕೊಂಡು ಹೋಗುವುದು ಇವರಿಗೆ ಕಷ್ಟವೇ?  ಲುಲು ಮಾಲ್ ಮಾತ್ರವೇ ಅಲ್ಲ,  ಮೇಕೆದಾಟು ಪಾದಯಾತ್ರೆ ಮಾಡಿದಾಗ ಎಲ್ಲಿಂದ ವಿದ್ಯುತ್  ತೆಗೆದುಕೊಂಡಿದ್ದರು? ಕನಕಪುರದಲ್ಲಿ ನಡೆಯುವ ʼಕನಕೋತ್ಸವʼಕ್ಕೆ ಕರೆಂಟ್ ಯಾವ ಮೀಟರ್ ನಿಂದ ಪಡೆದುಕೊಂಡಿದ್ದರು? ಅದಕ್ಕೆ ಕರೆಂಟ್ ಬಿಲ್ ಎಷ್ಟು ಕಟ್ಟಿದ್ದಾರೆ? ಈಗ ಯಾರು ದೊಡ್ಡ ಕಳ್ಳ? ಕಣ್ಣಮುಂದೆ ಎಲ್ಲ ವಿಡಿಯೋ ಇದೆ. ಬೇಕಿದ್ದರೆ ಸಾಕ್ಷಿ ಕೊಡೋಣ ಎಂದು ತಿರುಗೇಟು ನೀಡಿದರು.

ಯಡಿಯೂರಪ್ಪ ಅಭಿಪ್ರಾಯದಂತೆ ವಿಪಕ್ಷ ನಾಯಕನಾಗಿ ಅಶೋಕ್‌ ನೇಮಕ!

ಸಚಿವರೊಬ್ಬರಿಂದ ಕೆರೆ ಕಬಳಿಕೆ: ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಬೇಕು ಎಂದು ಸಚಿವರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಆದರೆ, ಅವರು ಒಂದು ಕೆರೆಯನ್ನೇ ನುಂಗಿ ನೀರು ಕುಡಿದಿದ್ದಾರೆ. ಅದಕ್ಕೆ ಯಾವ ತನಿಖೆ ನಡೆಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಮಹಾ ನಾಯಕರೊಬ್ಬರು ದಾಸನಪುರ ಹೋಬಳಿಯ ಸರ್ವೇ ನಂಬರ್ 13ರಲ್ಲಿರುವ ಮಾಕಳಿ ಕೆರೆಯನ್ನೇ ಕಬಳಿಸಿದ್ದಾರೆ. ಅವರ ಬಗ್ಗೆಯೂ ತನಿಖೆ ಮಾಡಿಸಬೇಕು ಅಲ್ಲವೇ ಎಂದು ತೀಕ್ಷ್ಣವಾಗಿ ಹೇಳಿದರು.

Follow Us:
Download App:
  • android
  • ios