* ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ* ನಿಖಿಲ್, ರೇವತಿ ದಂಪತಿಗೆ ಗಂಡು ಮಗು ಜನನ* ತಾತನಾದ ಖುಷಿಯಲ್ಲಿ ಎಚ್‌ಡಿ ಕುಮಾರಸ್ವಾ,ಮಿ

ಬೆಂಗಳೂರು, (ಸೆ.24): ಈಗಾಗಿಲೇ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಜೀವನದಲ್ಲಿ ಮತ್ತೊಂದು ಶುಭ ಘಳಿಗೆ ಬಂದಿದೆ.

ಹೌದು... ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪತ್ನಿ ರೇವತಿ ಇಂದು (ಸೆ.24) ಗಂಡು ಮಗುವಿಗೆ ಜನ್ಮ ನೀಡಿದ್ದು, ದೊಡ್ಡಗೌಡ್ರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಗಂಡು ಮಗುವಿಗೆ ತಂದೆಯಾದ ನಿಖಿಲ್ ಕುಮಾರಸ್ವಾಮಿ!

ಇನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಹ ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗನನ್ನು ನೋಡಿ ಸಂತಸಗೊಂಡೊದ್ದಾರೆ. ಅಲ್ಲದೇ ತಾತನಾದ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಕಂದಮ್ಮನಿಗೆ ಇರಲಿ ಎಂದು ಟ್ವೀಟ್ (Tweet) ಮಾಡಿದ್ದಾರೆ.

Scroll to load tweet…

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಖಿಲ್ ಪತ್ನಿ ರೇವತಿ (Revathi) ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮುದ್ದಾದ ಮಗುವನ್ನು ಎತ್ತಿಕೊಂಡು ನಿಖಿಲ್ ಕುಮಾರಸ್ವಾಮಿ ಫೋಟೋಗೆ ಪೋಸ್ ನೀಡಿದ್ದಾರೆ. ಮಗುವಿನೊಂದಿಗೆ ಫೋಟೋ (Photo) ಸಾಮಾಜಿಕ ಜಾಲತಾಣಗಲ್ಲಿ (Social Media) ವೈರಲ್ ಆಗಿದೆ.

ಕಳೆದ ವರ್ಷ ಲಾಕ್​ಡೌನ್​ ವೇಳೆ ಅಂದರೆ ಏಪ್ರಿಲ್​ನಲ್ಲಿ ಬಿಡದಿಯ ತೋಟದಲ್ಲಿ ರೇವತಿ ಹಗೂ ನಿಖಿಲ್ ಅವರ ಮದುವೆಯಾಗಿತ್ತು. ಇತ್ತೀಚೆಗಷ್ಟೆ ರೇವತಿ ಅವರ ಸೀಮಂತ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. 

ಅಲ್ಲದೆ ರೇವತಿ ಅವರು ಗರ್ಭಿಣಿಯಾಗಿದ್ದ ವಿಷಯವನ್ನು ಅವರಿಗೆ ಐದು ತಿಂಗಳಾಗಿದ್ದಾಗ ಮಾವ ಕುಮಾರಸ್ವಾಂಮಿ ಅವರೇ ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.