Asianet Suvarna News Asianet Suvarna News

ಗಂಡು ಮಗುವಿಗೆ ತಂದೆಯಾದ ನಿಖಿಲ್ ಕುಮಾರಸ್ವಾಮಿ!

ತಂದೆ ತಾಯಿ ಆದ ಸಂಭ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ, ರೇವತಿ. ಮರಿ ಯುವರಾಜನನ್ನು ನೋಡಲು ಕಾಯುತ್ತಿರುವ ಅಭಿಮಾನಿಗಳು..

Actor Politician Nikil Kumaraswamy and Revathi blessed with a baby boy vcs
Author
Bangalore, First Published Sep 24, 2021, 1:06 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್ ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಹಾಗೂ ಪತ್ನಿ ರೇವತಿ(Revathi) ಗಂಡು ಮಗುವನ್ನು(baby Boy) ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ. ಮಗು ಆಗಮನದ ಬಗ್ಗೆ ಜೆಡಿಎಸ್ ಶಾಸಕ ಶರವಣ(Sharavana) ಟ್ಟೀಟ್ ಮೂಲಕ ತಿಳಿಸಿದ್ದಾರೆ. 

ರೇವತಿ ಸೀಮಂತದಲ್ಲಿ ತಾರೆಗಳ ದಂಡು: ಇಲ್ನೋಡಿ ವಿಡಿಯೋ

'ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಹಾಗೂ ರೇವತಿ(Revathi) ಅವರಿಗೆ ಗಂಡು ಮಗು ಜನನವಾಗಿದೆ. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ(HD Devegowda) ಮರಿ-ಮೊಮ್ಮಗ ಆಗಮನ  ಅತ್ಯಂತ ಸಂತೋಷ ತಂದಿರುವಂತಹ ವಿಷಯ. ಶಿರಡಿ ಸಾಯಿಬಾಬನ ಅನುಗ್ರಹ ಮಗುವಿನ ಮೇಲಿರಲೆಂದು ಆಶಿಸುತ್ತೇನೆ,' ಎಂದು ಟ್ಟೀಟ್ ಮಾಡಿದ್ದಾರೆ. 

Actor Politician Nikil Kumaraswamy and Revathi blessed with a baby boy vcs

ಕೊರೋನಾ ವೈರಸ್ ಮೊದಲ ಲಾಕ್‌ಡೌನ್‌ ಏಪ್ರಿಲ್ 17,2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಮತ್ತು ರೇವತಿ ಆರಂಭದಿಂದಲೂ ಲೈಮ್‌ ಲೈಟ್‌ನಲ್ಲಿರುವ ಸೆಲೆಬ್ರಿಟಿ ಕಪಲ್‌ಗಳು. ಮದುವೆಗೂ ಮುನ್ನ ನಿಖಿಲ್ ಪತ್ನಿ ಜೊತೆ ಹಂಚಿಕೊಳ್ಳುತ್ತಿದ್ದ ಫೋಟೋಗಳಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದವು. ಹೊಸ ಸೊಸೆಯನ್ನು ಬರ ಮಾಡಿಕೊಂಡ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಕುಟುಂಬ ಪ್ರತಿ ಹಬ್ಬವನ್ನೂ ಅದ್ಭೂರಿಯಾಗಿ ಆಚರಿಸುತ್ತದೆ. 

ಈ ನಡುವೆ ತಮ್ಮ ಬಿಡದಿ ತೋಟದ ಮನೆಯಲ್ಲಿ ನಿಖಿಲ್ ಹೊಸ ಮನೆ ಕಟ್ಟಿಸಲು ಪಾಯ ಹಾಕಿದ್ದಾರೆ. ಮನೆ ನಿರ್ಮಾಣದ ಜೊತೆ ಬೇರೆ ರಾಜ್ಯಗಳ ಹಸುಗಳನ್ನೂ ಖರೀದಿಸಿದ್ದಾರೆ. ಸರಳವಾಗಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಈ ಜೋಡಿ ತಮ್ಮ ಪ್ರೆಗ್ನೆಂನ್ಸಿ ವಿಚಾರವನ್ನು ಕೊಂಚ ಸರ್ಪ್ರೈಸ್ ಆಗಿಟ್ಟಿದ್ದರು. ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಿಖಿಲ್ ಕಾಶ್ಮೀರದಲ್ಲಿ(Kashmir) ಪತ್ನಿಗೆ ಶಾಪಿಂಗ್ ಸಹ ಮಾಡಿದ್ದರು. ಆನಂತರ ಏಷ್ಯಾನೆಟ್ ಸುವರ್ಣ ನ್ಯೂಸ್(Asianet Suvarna News) ಮೂಲಕ ಗುಡ್‌ ನ್ಯೂಸ್ ಬ್ರೇಕ್ ಮಾಡಲಾಗಿತ್ತು. 

Actor Politician Nikil Kumaraswamy and Revathi blessed with a baby boy vcs

 

ಜುಲೈ ತಿಂಗಳಿನಲ್ಲಿ ಮಾಜಿ ಸಿಎಂ ನಿವಾಸಕ್ಕೆ ಅವಧೂತ ವಿನಯ್ ಗುರೂಜಿ(Vinay Guruji) ಭೇಟಿ ನೀಡಿದಾಗ ಮನೆಗೆ ಗಂಡು ಮಗುವಿನ ಆಗಮನ ಆಗುತ್ತದೆ. ನಿಖಿಲ್‌ಗೆ ಒಳ್ಳೆಯ ಯೋಗ ಬರುತ್ತದೆ ಎಂದು ಆಶೀರ್ವಾದ ಮಾಡಿದ್ದರು. ಅಂದು ವಿನಯ್‌ ಗುರೂಜಿ ಆಡಿದ ಮಾತು ಇಂದು ಸತ್ಯವಾಗಿದೆ. ಸೆಪ್ಟೆಂಬರ್ 13ರಂದು ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ರೇವತಿ ಸೀಮಂತ ಕಾರ್ಯಕ್ರಮ ನೆರವೇರಿತ್ತು. ರಾಜಕಾರಣಿಗಳು, ಸಿನಿ ರಂಗದ ಸ್ನೇಹಿತರ ಭಾಗಿಯಾಗಿ ಇಬ್ಬರಿಗೂ ಆಶೀರ್ವದಿಸಿದ್ದರು. 

ನಿಖಿಲ್ ಅಪ್ಪನಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.

 

 

Follow Us:
Download App:
  • android
  • ios